Dboss – ನಟ ದರ್ಶನ್ ಡಿಬಾಸ್ ಆದ ಕಥೆ..!
ಅಭಿಮಾನಿಗಳ ಆರಾಧ್ಯ ದೈವ ಡಿಬಾಸ್ ದರ್ಶನ್ ಅಂದರೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ಇಷ್ಟ ಇವರು, ದರ್ಶನ್ ರವರು ಚಾಲೆಂಜಿಂಗ್ ಸ್ಟಾರ್ ಆಗಿದ್ದಾರೆ ಎಂದರೆ ಅದರ ಹಿಂದೆ ಕೆಲವು ಕಹಿ ಘಟನೆಗಳು ನಡೆದಿವೆ. ಲೈಟ್ ಬಾಯ್ ಆಗಿ ಕೆಲಸ ಶುರುಮಾಡಿದ ಒಬ್ಬ ಹುಡುಗ, ಹಾಲನ್ನು ಮಾರಿ ಜೀವನ ನಡೆಸಿದ ಹುಡುಗ, ಇಂದು ಕನ್ನಡದ ಜನಪ್ರಿಯ ನಟ ಆಗಿದ್ದಾರೆ ಎಂದರೆ ಈ ಸ್ಥಾನಕ್ಕೆ ಬರಲು ಏನೆಲ್ಲಾ ಚಾಲೆಂಜ್ ಗಳನ್ನು ಎದುರಿಸಿದ್ದಾರೆ ಎಂಬುದನ್ನು ನಾವಿವತ್ತು ಈ ಪುಟದಲ್ಲಿ ತಿಳಿಸಲಿದ್ದೇವೆ. ಪಕ್ಕಾ ನೀವು ದರ್ಶನ್ ಅಭಿಮಾನಿಯಾಗಿದ್ರೆ ಮಿಸ್ ಮಾಡ್ದೆ ಕೊನೆವಾರ್ಗು ಓದಿ.
ನಟ ದರ್ಶನ್ ರವರು ಫೆಬ್ರವರಿ 16 ,1977 ರಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟ ತೂಗುದೀಪ ಶ್ರೀನಿವಾಸ್ ಮತ್ರು ಮೀನಾ ತೂಗುದೀಪ ರವರ ಹಿರಿಯ ಮಗನಾಗಿ ಜನಿಸುತ್ತಾರೆ.ಇನ್ನೂ ಇವರಿಗೆ ಸಹೋದರಿ ಹಾಗೂ ಸಹೋದರ ಕೂಡ ಇದ್ದಾರೆ.ತಮ್ಮ ದಿನಕರ್ ಕೂಡ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ದರ್ಶನ್ ರವರ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಅನಿಸಿಕೊಂಡಿದ್ದಾರೆ.

ತಂದೆ ಶ್ರೀನಿವಾಸ್ ತೂಗುದೀಪ ರವರು ಇರುವವರೆಗೂ ನಟ ದರ್ಶನ್ ಕುಟುಂಬಕ್ಕೆ ಯಾವುದೇ ಸಮಸ್ಯೆಗಳು ಇರುವುದಿಲ್ಲ ಆದರೆ ದುರ್ವಿಧಿ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಆರೋಗ್ಯ ಹದಗೆಡುತ್ತದೆ. ತೂಗುದೀಪ ಶ್ರೀನಿವಾಸ್ ರವರಿಗೆ ಕಿಡ್ನಿ ವೈಫಲ್ಯ ಆಗುತ್ತದೆ ಅವರ ಚಿಕಿತ್ಸೆಗಾಗಿ ಇರುವ ಆಸ್ತಿಯನ್ನೆಲ್ಲಾ ಮಾರಬೇಕಾಗುತ್ತದೆ.ದರ್ಶನ್ ತಾಯಿ ಮೀನಾ ತೂಗುದೀಪರವರೇ ಅವರ ಪತಿಗೆ ಕಿಡ್ನಿ ದಾನವನ್ನು ಮಾಡುತ್ತಾರೆ.ಕಿಡ್ನಿ ಚಿಕಿತ್ಸೆ ನಂತರ ಸ್ವಲ್ಪ ಸುಧಾರಣೆ ಕಾಣುತ್ತದೆ ದರ್ಶನ್ ತಂದೆಯ ಆರೋಗ್ಯ. ನಂತರ ದರ್ಶನ್ ರವರು ತಮ್ಮ ಡಿಪ್ಲೊಮಾ ವ್ಯಾಸಂಗ ಅರ್ಧಕ್ಕೆ ಬಿಟ್ಟು ಶಿವಮೊಗ್ಗದ ಖ್ಯಾತ ರಂಗತಂಡ ನೀನಾಸಂ ಗೆ ಸೇರಿ ಅಭಿನಯ ತರಬೇತಿ ಪಡೆಯಲು ಶುರು ಮಾಡುತ್ತಾರೆ.1995 ರಲ್ಲಿ ದರ್ಶನ್ ರವರು ಶಿವಮೊಗ್ಗದ ನೀನಾಸಂ ನಲ್ಲಿ ಇದ್ದಾಗ ತೂಗುದೀಪ ಶ್ರೀನಿವಾಸ್ ರವರು ತಮ್ಮ52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ನಂತರ ಸಂಸಾರ ನಡೆಸಲು ಮೀನಾರವರು ಕೆಲಕಾಲ ಊಟದ ಹೋಟೆಲ್ ಅನ್ನು ಕೂಡ ನಡೆಸಿದ್ದಾರೆ ಹಾಗೂ ದರ್ಶನ್ ರವರು ಹಸು ಸಾಕಿ ಹಾಲನ್ನು ಸಹ ಮಾರುತ್ತಿದ್ದರು.
Devil – ಸದ್ದಿಲ್ಲದೆ ಡಿಬಾಸ್ ದರ್ಶನ್ D57 ಶೂಟಿಂಗ್ ಶುರು.!
ದರ್ಶನ್ ರವರ ಮೊದಲ ರಂಗಪ್ರವೇಶಕ್ಕೆ ಅಲಂಕಾರ ಮಾಡಿದ್ದವರು ಮಂಡ್ಯ ರಮೇಶ್, ಇದಕ್ಕೂ ಮೊದಲು ಮೈಸೂರಿನ ಜಗನ್ ಮೋಹನ್ ಪ್ಯಾಲೇಸ್ ನಲ್ಲಿ ನಾಲ್ಕೈದು ಸಾರಿ ಮಾಡೆಲಿಂಗ್ ಕೂಡ ಮಾಡಿದ್ದರು ದರ್ಶನ್. ನೀನಾಸಂ ನಂತರ ಅಭಿನಯ ಹಾಗೂ ಅವಕಾಶಗಳನ್ನು ಹರಸಿ ಬೆಂಗಳೂರಿಗೆ ಬಂದ ದರ್ಶನ್ ಗೆ ಬೇಗನೆ ನಿರಾಶೆಯಾಯಿತು. ಕೊನೆಗೆ ಲೈಟ್ ಬಾಯ್ ಆಗಿ ಸಿನಿಮಾರಂಗದಲ್ಲಿ ಪಯಣ ಆರಂಭಿಸಿದರು. 1997 ರಲ್ಲಿ ಎಸ್. ನಾರಾಯಣ್ ರವರು ತಮ್ಮ ಮಹಾಭಾರತ ಸಿನಿಮಾದಲ್ಲಿ ಅವಕಾಶ ಕೊಟ್ಟರು. ಆದರೆ ದರ್ಶನ್ ಹೆಚ್ಚಾಗಿ ಗುರುತಿಸಿಕೊಂಡಿದ್ದು ಎಸ್.ನಾರಾಯಣ್ ರವರ ಅಂಬಿಕಾ ಸೀರಿಯಲ್ ನಲ್ಲಿ ನಟಿಸಿದ ಮೇಲೆ. ಹಾಗೆಯೇ ಮೂರು ಕಾರ್ಟೂನ್ ಗಳಲ್ಲಿ ಕೆಲವು ಪಾತ್ರಗಳಿಗೆ ಧ್ವನಿ ನೀಡಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡ ಕೆಲಸ ಮಾಡಿದ್ದಾರೆ. ಒಟ್ಟಾರೆಯಾಗಿ ದರ್ಶನ್ ಒಂದು ತಮಿಳು ಮತ್ತು ಐದು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.2002 ರಲ್ಲಿ ಪಿ.ಎಸ್ ಸತ್ಯ ನಿರ್ದೇಶನದ ಮೆಜೆಸ್ಟಿಕ್ ಚಿತ್ರದ ಮೂಲಕ ದರ್ಶನ್ ನಾಯಕರಾಗಿ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು.2003ರಲ್ಲಿ ತೆರೆಕಂಡ ಪ್ರೇಮ್ ನಿರ್ದೇಶನದ ಕರಿಯ ಚಿತ್ರ ಕೂಡ ಉತ್ತಮ ಪ್ರತಿಕ್ರಿಯೆ ಪಡೆದು ಕರ್ನಾಟಕದಲ್ಲಿ ಸುಮಾರು 800 ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡು ದಾಖಲೆ ಬರೆಯಿತು. ನಂತರ ಬಂದ ಕೆಲವು ಸಿನಿಮಾಗಳು ಯಶಸ್ವಿಯಾಗಲಿಲ್ಲ ನಂತರ ಕಲಾಸಿಪಾಳ್ಯ 250ಕ್ಕೂ ಹೆಚ್ಚು ದಿನಗಳು ಪ್ರದರ್ಶನ ಕಂಡಿತು. 2007ರಲ್ಲಿ ಉಪೇಂದ್ರ ಜೊತೆ ಅನಾಥರು ಚಿತ್ರದಲ್ಲಿ ನಟಿಸಿದರು ಅದೇ ವರ್ಷ ಈ ಬಂಧನ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮಗನ ಪಾತ್ರದಲ್ಲಿ ನಟಿಸಿದರು ಹಾಗೂ ಕುಚಿಕು ಗೆಳೆಯರಾದ ಅಂಬಿ-ವಿಷ್ಣು ರವರ ಪುತ್ರನ ಪಾತ್ರದಲ್ಲಿ ನಟಿಸಿದ ಕನ್ನಡದ ಏಕೈಕ ನಾಯಕನಟ ದರ್ಶನ್ ರವರು ಮಾತ್ರ.
ಅನಂತರ ಅಯ್ಯ, ಮಂಡ್ಯ, ಗಜ, ಸಾರಥಿ, ಬುಲ್ ಬುಲ್, ಬೃಂದಾವನ, ಹೀಗೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ ದರ್ಶನ್ 2012ರಲ್ಲಿ ಐತಿಹಾಸಿಕ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ರಾಯಣ್ಣನಾಗಿ ಆರ್ಭಟಿಸಿದರು. 50ನೇ ಚಿತ್ರ ಕುರುಕ್ಷೇತ್ರ ದಲ್ಲಿ ದುರ್ಯೋಧನ ಪಾತ್ರದಲ್ಲಿ ಮಿಂಚಿದ್ದಾರೆ. ನಟ ದರ್ಶನ್ ನಟನೆ ಅಲ್ಲದೇ ನಿರ್ಮಾಪಕನಾಗಿಯೂ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. 2006ರಲ್ಲಿ ಸಹೋದರ ದಿನಕರ್ ಜೊತೆ ಸೇರಿ ತೂಗುದೀಪ ಪ್ರೊಡಕ್ಷನ್ಸ್ ಆರಂಭಿಸಿ ಜೊತೆ ಜೊತೆಯಲಿ ಚಿತ್ರವನ್ನು ನಿರ್ಮಿಸಿದರು. ಜೊತೆಗೆ ತೂಗುದೀಪ ಹಂಚಿಕೆದಾರರು ಎಂಬ ಸಿನಿಮಾ ವಿತರಣೆ ಸಂಸ್ಥೆ ಆರಂಭಿಸಿ ಉಗ್ರಂ , ಬೃಂದಾವನ, ಒಗ್ಗರಣೆ, ಜೈಲಲಿತಾ ಮುಂತಾದ ಸಿನಿಮಾಗಳನ್ನು ವಿತರಣೆ ಕೂಡ ಮಾಡಿದ್ದಾರೆ.
Kaatera Release Date: ಕಾಟೇರ ಡಿಸೆಂಬರ್ ನಲ್ಲಿ ಭರ್ಜರಿ ಎಂಟ್ರಿ.!
ಡಿಬಾಸ್ ಬಾಲ್ಯದಿಂದಲೂ ಪ್ರಾಣಿಪ್ರಿಯರು ರಜಾದಿನಗಳಲ್ಲಿ ಮೈಸೂರಿನ ಮೃಗಾಲಯಕ್ಕೆ ಹೋಗುತ್ತಿದ್ದ ದರ್ಶನ್ ರವರಿಗೆ ಅಲ್ಲಿಂದಲೇ ಪ್ರಾಣಿಗಳ ಮೇಲೆ ನಂಟು ಮತ್ತು ಪ್ರಾಣಿಗಳ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದರು. ಈಗಲೂ ಮೈಸೂರಿನ ಮೃಗಾಲಯದಲ್ಲಿನ ಹಲವು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಮೈಸೂರಿನ ಟಿ.ನರಸೀಪುರ ಹತ್ತಿರ ಒಂದು ಮಿನಿ ಫಾರ್ಮ್ ಹೌಸ್ ಹೊಂದಿರುವ ದರ್ಶನ್ ಅಲ್ಲಿ ಕುದುರೆ, ಹಸು, ಪಕ್ಷಿಗಳು ಸೇರಿದಂತೆ ಮುಂತಾದ ಸುಮಾರು 120ಕ್ಕೂ ಹೆಚ್ಚು ಪ್ರಾಣಿ- ಪಕ್ಷಿಗಳನ್ನು ಹಾಕಿದ್ದಾರೆ. ಇನ್ನೂ ದರ್ಶನ್ ಅವರಿಗೆ ಅತೀ ಹೆಚ್ಚು ಅಭಿಮಾನಿ ಬಳಗವಿದ್ದು ತಮ್ಮ ಅಭಿಮಾನಿಗಳಿಗೆ ಗೌರವ ನೀಡುವ ಸಲುವಾಗಿ ದರ್ಶನ್ ರವರು ತಮ್ಮ ಎದೆಯ ಮೇಲೆ ನನ್ನ ಸೆಲೆಬ್ರಿಟೀಸ್ ಎಂಬ ಕನ್ನಡದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. 2003ರಲ್ಲಿ ಧರ್ಮಸ್ಥಳದಲ್ಲಿ ವಿಜಯಲಕ್ಷ್ಮಿ ರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗೆ ವಿನೀಶ್ ಎಂಬ ಮಗನಿದ್ದಾನೆ ಇತ್ತೀಚೆಗೆ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಂಡರು.
ದರ್ಶನ್ ಸುಮಾರು ಎರಡು ದಶಕಗಳ ತಮ್ಮ ಸಿನಿಜೀವನದಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರ ನೆಚ್ಚಿನ ನಟರಾಗಿ ಗುರುತಿಸಿಕೊಂಡಿದ್ದಾರೆ.ಇನ್ನೂ ಡಿಬಾಸ್ ದರ್ಶನ್ ಕಾಟೇರ ಸಿನಿಮಾ ಶೂಟಿಂಗ್ ಮುಗಿಸಿ ಮುಂದಿನ ಸಿನಿಮಾ ಡೆವಿಲ್ ಚಿತ್ರಕ್ಕಾಗಿ ತಯಾರಿ ನಡೆಸಿದ್ದಾರೆ. ಸದ್ಯದಲ್ಲೇ ಕಾಟೇರ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಅಭಿಮಾನಿಗಳಂತೂ ಕಾಟೇರ ಸಿನಿಮಾ ನೋಡಲು ಕಾದು ಕುಳಿತ್ತಿದ್ದಾರೆ ಎಂದರೆ ತಪ್ಪಾಗಲ್ಲ. ಸಿನಿಮಾದ ಹಾಡುಗಳು ಸಹ ಕೆಲವೇ ದಿನಗಳಲ್ಲಿ ಆನಂದ್ ಆಡಿಯೋ ಚಾನೆಲ್ ನಲ್ಲಿ ರಿಲೀಸ್ ಆಗಲಿವೆ.