Mahanati : ಕಿರುತೆರೆ ರಿಯಾಲಿಟಿ ಶೋ ಗೆ ಎಂಟ್ರಿ ಕೊಟ್ಟ ನಟಿ ಪ್ರೇಮ
ಪ್ರತಿವರ್ಷ ಕಿರುತೆರೆಯಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಬರುತ್ತಲೇ ಇರುತ್ತವೆ. ಆದರೆ ಕೆಲವು ರಿಯಾಲಿಟಿ ಶೋಗಳು ಸಾಕಷ್ಟು ವರ್ಷಗಳ ಕಾಲ ಸೀಸನ್ ಬದಲಾವಣೆ ಮೂಲಕ ಮನರಂಜನೆ ನೀಡುತ್ತಲೇ ಬಂದಿವೆ. ಆ ಪೈಕಿ ಸರಿಗಮಪ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋಗಳು ಸಾಕಷ್ಟು ಸೀಸನ್ಗಳನ್ನ ಮುಗಿಸಿ ಭಾರಿ ಜನಪ್ರಿಯತೆ ಪಡೆದುಕೊಂಡಿವೆ. ಉಳಿದಂತೆ ವೀಕೆಂಡ್ ವಿತ್ ರಮೇಶ್, ಕಾಮಿಡಿ ಕಿಲಾಡಿಗಳು, ಜೋಡಿ ನಂಬರ್ ಒನ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ನನ್ನಮ್ಮ ಸೂಪರ್ ಸ್ಟಾರ್, ರಾಜ ರಾಣಿ, ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋಗಳು ಕಿರುತೆರೆಯಲ್ಲಿ ವೀಕ್ಷಕರ ಮನ ಗೆದ್ದಿವೆ. ಈ ಸಾಲಿಗೆ ಇದೀಗ ಮತ್ತೊಂದು ವಿಭಿನ್ನ ರಿಯಾಲಿಟಿ ಶೋ ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದೆ ಅದೇ ಮಹಾನಟಿ ( Mahanati Reality show ) ರಿಯಾಲಿಟಿ ಶೋ.
ಇನ್ನೂ ಈ ರಿಯಾಲಿಟಿ ಶೋನಲ್ಲಿ ನಾಲ್ಕು ಜಡ್ಜ್ಗಳು ಇರಲಿದ್ದಾರೆ. ನಟ ರಮೇಶ್ ಅರವಿಂದ್, ಜನಪ್ರಿಯ ನಟಿ ಪ್ರೇಮ, ನಟಿ ನಿಶ್ವಿಕ ನಾಯ್ಡು, ಹಾಗೂ ನಿರ್ದೇಶಕ ಹಾಗೂ ನಟ ತರುಣ್ ಸುಧೀರ್ ರವರು ಮಹಾ ನಟಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಬರಲಿದ್ದಾರೆ. ಈಗಾಗಲೇ ಪ್ರೊಮೋಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಮಹಾ ನಟಿ ಶೋ ಇದೇ ಮಾರ್ಚ್ 30ರಿಂದ ರಾತ್ರಿ 7.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇನ್ನು ಈ ಶೋ ಹೇಗೆ ಮೂಡಿ ಬರಲಿದೆ ಎಂದು ಕಾದು ನೋಡಬೇಕಿದೆ. ಜೀ ಕನ್ನಡ ವಾಹಿನಿಯಲ್ಲಿ ಬರುವ ಎಲ್ಲಾ ಶೋಗಳು ಅದ್ಭುತ ಓಪನಿಂಗ್ ಪಡೆದುಕೊಳ್ಳುತ್ತದೆ. ಅದೇ ರೀತಿ ಈ ಶೋ ಕೂಡ ಭಾರಿ ಜನಪ್ರಿಯತೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಡಿಷನ್ ಮೂಲಕ ಆಯ್ಕೆಯಾಗಿರುವ ಟಾಪ್ ಅಭ್ಯರ್ಥಿಗಳು ಈ ಶೋನಲ್ಲಿ ನಟನೆ ಮಾಡುವ ಮೂಲಕ ನಟಿಯಾಗಲಿದ್ದಾರೆ.

ಸಿನಿಮಾ ರಂಗದ ನಟಿ ಪ್ರೇಮ (Actress prema)ರವರು ಮೊದಲ ಬಾರಿಗೆ ರಿಯಾಲಿಟಿ ಶೋ ಒಂದರ ತೀರ್ಪುಗಾರರಾಗಿ ಸ್ಮಾಲ್ ಸ್ಕ್ರೀನಗೆ ಕಾಲಿಟ್ಟಿದ್ದಾರೆ. ಇನ್ನೂ ರಮೇಶ್ ಅರವಿಂದ್ ( Ramesh Aravind ) ರವರು ಹಿಂದೆ ಈಗಾಗಲೇ ಕನ್ನಡದ ಕೋಟ್ಯಾಧಿಪತಿ ಹಾಗೂ ವೀಕೆಂಡ್ ವಿತ್ ರಮೇಶ್ ನಿರೂಪಕರಾಗಿ ಕಿರುತೆರೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ ಮಹಾ ನಟಿ ಶೋನಲ್ಲಿ ನಟ ರಮೇಶ್ ಅರವಿಂದ್ ರವರು ಅದ್ಭುತವಾಗಿ ತೀರ್ಪು ಕೊಡುವುದು ಪಕ್ಕ. ಇನ್ನೂ ನಿರ್ದೇಶಕ ತರುಣ್ ಸುಧೀರ್ ( Tarun Sudir ) ಕೂಡ ಸಿನಿಮಾರಂಗದಲ್ಲಿ ಸಾಕಷ್ಟು ಆಡಿಶನ್ಗಳನ್ನು ಮಾಡಿದ್ದಾರೆ. ಇನ್ನೂ ಕಾಟೇರ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶನ ಮಾಡಿ ಸೈ ಎನಿಸಿಕೊಂಡವರು. ನಟಿ ನಿಶ್ವಿಕ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಆಗಿರುವ ರಾಘವೇಂದ್ರ ಹುಣಸೂರು ಅವರು ಕೂಡ ಕಿರುತೆರೆಯಲ್ಲಿ ಹೆಸರುವಾಸಿಯಾಗಿದ್ದಾರೆ. ಏಕೆಂದರೆ ಜೀ ವಾಹಿನಿಯ ಎಲ್ಲಾ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳು ಇವರ ಸಾರಥ್ಯದಲ್ಲಿ ಮೂಡಿ ಬರುತ್ತಿವೆ. ಹಾಗಾಗಿ ಈ ವಾಹಿನಿಯು ನಂಬರ್ ಒನ್ ಸ್ಥಾನದಲ್ಲಿದೆ. ಮಹಾನಟಿ ಕಾರ್ಯಕ್ರಮ ಯಾವ ರೀತಿ ಜನಪ್ರಿಯತೆ ಪಡೆದುಕೊಳ್ಳುತ್ತದೆ ಎಂದು ತಿಳಿದುಕೊಳ್ಳಲು ಇನ್ನೇನು ಕೆಲವು ದಿನಗಳು ಬಾಕಿ ಉಳಿದಿದೆ ಅಷ್ಟೇ. ಈ ರಿಯಾಲಿಟಿ ಶೋ ಪ್ರತಿ ವಾರಂತ್ಯದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ನಿಮ್ಮ ಮನೆ ಅಂಗಳದಲ್ಲಿ ಲಗ್ಗೆ ಇಡಲಿದೆ. ನೀವು ಕೂಡ ಮಿಸ್ ಮಾಡ್ದೆ ಈ ಶೋ ಅನ್ನು ನೋಡಿ ಪ್ರೋತ್ಸಾಹಿಸಿ.