Bangalore:ಯುಗಾದಿ ಚೀಟಿ 6,000 ಜನರಿಗೆ ಪಂಗನಾಮ ಹಾಕಿದ ಭೂಪ
( Bangalore ) ಯುಗಾದಿ ಹಬ್ಬ ಅಂದರೆ ತಟ್ಟಂತ ನೆನಪಾಗುವುದು ಹೊಸ ತಡುಕು, ಹೊಸ ತಡಕು ಹಬ್ಬದ ದಿನದ ಊಟ ಮಾಡೋದೇ ಒಂದು ಖುಷಿ. ಪ್ರತಿದಿನ ನಾನ್-ವೆಜ್ ತಿಂತಾ ಇದ್ರು ಆ ದಿನ ತಿನ್ನು ಮಜಾನೇ ಬೇರೆ ಅನ್ನೋದು ಮಾಂಸಾಹಾರಿಗಳ ಮಾತು. ಇದಕ್ಕಾಗಿ ಮಾಂಸದ ಚೀಟಿ ಹಾಕುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಹೀಗೆ ಯುಗಾದಿ ಚೀಟಿ ಹಾಕಿ ಕೋಟ್ಯಾಂತರ ಹಣ ಕಳೆದುಕೊಂಡಿರುವವರ ಸ್ಟೋರಿ.
ಯುಗಾದಿ ಚೀಟಿ ಮೋಸ, ಎರಡುವರೆ ಕೋಟಿ ಪಂಗನಾಮ
ಯುಗ ಯುಗ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎನ್ನುವುದು ನವ ವಸಂತದ ವರ್ಣನೆ. ಯುಗಾದಿ ಹಬ್ಬ ಕೂಡ ಹತ್ತಿರದಲ್ಲಿ ಇದೆ ಹಾಗೂ ಯುಗಾದಿ ಹಬ್ಬದ ಹೊಸ ತಡಕು ಹರುಷದಿಂದ ಕಾಯುವ ದಿನ. ಮಟನ್ ಊಟ ಅಂದ್ರೆ ಕೇಳಬೇಕಾ ಬಾಯಲ್ಲಿ ನೀರು ಬರುತ್ತೆ. ಹೀಗೆ ಇವರೆಲ್ಲ ಹೊಸ ತಡುಕಿನ ದಿನ ಒಂದೊಳ್ಳೆ ಬಾಡೂಟ ಸವಿಯೋಣ ಅಂತ ಚೀಟಿ ಹಾಕಿದ್ರು. ಆದರೆ ಹೊಸ ತಡುಕು ನಂಬಿ ಚೀಟಿ ಹಾಕಿದವರಿಗೆ ಮುಖದ ಮೇಲೆ ಟೋಪಿ ಬಿದ್ದಿದೆ.6 ಸಾವಿರ ಜನರ ಬಳಿ ಚೀಟಿ 2 ಕೋಟಿ 78 ಲಕ್ಷ ವಂಚನೆ. ಮಾಂಸದೂಟ ಅಂದರೆ ಕೇಳಬೇಕಾ ಅದ್ರಲ್ಲೂ ಯುಗಾದಿ ಹಬ್ಬದ ಹೊಸ ತಡುಕಿಗಾಗಿ ಜನ ಕಾಯ್ತಾನೆ ಇರ್ತಾರೆ. ಇವತ್ತಿಗೂ ರಾಜ್ಯದ ಹಲವೆಡೆ ಹಳ್ಳಿಗಳಲ್ಲಿ ಎಲ್ಲಾ ಹಬ್ಬಗಳಿಗೂ ಚೀಟಿ ಹಾಕುವ ಸಂಪ್ರದಾಯ ಇದೆ. ಇದೇ ಚೀಟಿ ಆಸೆ 6,000 ಜನರಿಗೆ ಮಹಾಮೋಸ ಮಾಡಿದಂತಾಗಿದೆ.

ನೋಡಿ ಈ ಮೇಲಿನ ಫೋಟೋದಲ್ಲಿದ್ದಾನಲ್ಲ ಅವನೇ ಈ ಸ್ಕ್ಯಾಮ್ 2024ರ ರೂವಾರಿ. ಈತನ ಹೆಸರು ಪುಟ್ಟಸ್ವಾಮಿಗೌಡ ಅಂತ, ಪುಟ್ಟಸ್ವಾಮಿ ಹಾಗೂ ಆತನ ಹೆಂಡತಿ ಸೌಮ್ಯ ಹಬ್ಬದ ಹೆಸರಿನಲ್ಲಿ ಚೀಟಿ ಮಾಡಿ ಒಂದಲ್ಲ ಎರಡಲ್ಲ ಬರೋಬ್ಬರಿ ಎರಡು ಕೋಟಿ 28 ಲಕ್ಷ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಂಚನೆ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ದಂಪತಿಗಳು ಬೆಂಗಳೂರು ನಿಂದ ಎಸ್ಕೇಪ್ ಆಗಿದ್ದಾರೆ. ಪುಟ್ಟಸ್ವಾಮಿ ದಂಪತಿ ಕಳೆದ ಮೂರು ನಾಲ್ಕು ವರ್ಷಗಳಿಂದ ಚೀಟಿ ವ್ಯವಹಾರ ನಡೆಸ್ತಾ ಇದ್ರು. ಹಿಂದೆ ಕಳೆದ ವರ್ಷಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಗ್ರಾಹಕರಿಗೆ ಎಲ್ಲಾ ರೀತಿಯ ಸಾಮಾಗ್ರಿ ಗಳನ್ನು ನೀಡಿ ನಂಬಿಕೆ ಹುಟ್ಟಿಸಿದ್ದರು. ಪ್ರತಿ ವರ್ಷ ಯುಗಾದಿ ಹಬ್ಬಕ್ಕೆ 3ಕೆಜಿ ನಾನ್ ವೆಜ್ ಸೇರಿದಂತೆ 35ಕ್ಕೂ ಹೆಚ್ಚು ಪದಾರ್ಥಗಳನ್ನು ನೀಡಲಾಗುತ್ತಿತ್ತು. ಹೀಗೆ ನಂಬಿಕೆ ಹುಟ್ಟಿಸಿ ಚೀಟಿ ಹಾಕಿದ್ದವರ ಸಂಖ್ಯೆ ಬರೋಬ್ಬರಿ ಆರು ಸಾವಿರ. ಇವಾಗ ಚೀಟಿ ಕಟ್ಟಿದ್ದ ಜನರು ಆತನ ಮನೆ ಮುಂದೆ ಕಂಗಾಲಾಗಿದ್ದಾರೆ.
ಚೀಟಿ ಹಾಕಿದವರಿಗೂ ಚೀಟಿ ನಡೆಸುತ್ತಿದ್ದ ಪುಟ್ಟಸ್ವಾಮಿಗೂ ಡೈರೆಕ್ಟ್ ಕನೆಕ್ಷನ್ ಇದ್ದಿದ್ದಿಲ್ಲ ಏಕೆಂದರೆ ಇದು ಮಧ್ಯವರ್ತಿಗಳಿಂದ ಕಲೆಕ್ಷನ್ ಮಾಡಿಸುತ್ತಿದ್ದ ಪುಟ್ಟಸ್ವಾಮಿ. 25 ರಿಂದ 30 ಚೀಟಿಗಳನ್ನು ಕಟ್ಟಿಸಿದರೆ ಒಂದು ಅಥವಾ ಎರಡು ಚೀಟಿ ಉಚಿತವಾಗಿ ಸಿಗುತ್ತದೆ ಎಂದು ಆಫರ್ ಕೂಡ ಇತ್ತು. ಹಾಗಾಗಿ ಕೆಲವರು 30, 50, 100, 200, 600 ತನಕ ಚೀಟಿಗಳನ್ನು ಮಧ್ಯವರ್ತಿಗಳು ಕಟ್ಟಿದ್ದರು. ಇವಾಗ ಚೀಟಿಯ ಗ್ರಾಹಕರು ಮಧ್ಯವರ್ತಿಗಳ ಮೇಲೆ ಗರಂ ಆಗಿದ್ದಾರೆ. ಕಮಿಷನ್ ಆಸೆಯಿಂದ ಮಧ್ಯವರ್ತಿಗಳು ಕೂಡ ಸಮಸ್ಯೆಯಲ್ಲಿ ಸಿಲುಕಿದಂತಾಗಿದೆ. ಯಾರಾದ್ರೂ ಹೆಚ್ಚಾಗಿ ಚೀಟಿ ಹಾಕ್ಸಿದ್ರೆ ಆತನಿಗೆ ಎರಡು ಚೀಟಿ ಕಟ್ಟುವಂತಿಲ್ಲ ಹೀಗೆ ಆಫರ್ ಇಟ್ಟಿದ್ದ ಪುಟ್ಟಸ್ವಾಮಿಗೆ ಪರಾರಿಯಾಗಿದ್ದಾನೆ. ಈ ಕಡೆ ಮಧ್ಯವರ್ತಿಗಳು ಕೂಡ ಕಂಗಾಲಾಗಿದ್ದಾರೆ. ಚೀಟಿ ಕಟ್ಟಿದವರು, ಮಾಂಸನು ಸಿಗದೇ ಹಣಾನೂ ಸಿಗದೇ ಕಣ್ಣೀರ್ ಹಾಕಿದ್ದಾರೆ. ಹೇಗಾದರೂ ಮಾಡಿ ನಮಗೆ ಹಣ ಕೊಡಿಸಿ ಅಂತ ಪೊಲೀಸ್ ಅವರ ಮೊರೆ ಹೋಗಿದ್ದಾರೆ.