Meghanaraj : ನಟಿ ಮೇಘನಾ ರಾಜ್ ಬಗ್ಗೆ ನಿಮಗೆಷ್ಟು ಗೊತ್ತು?

Spread the love

ಕನ್ನಡ ಚಿತ್ರರಂಗದ ಹಿರಿಯ ನಟರಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಶಾಯಿ ಮುದ್ದಿನ ಮಗಳು ನಟಿ ಮೇಘನಾ ರಾಜ್ ಯಾರಿಗೆ ಗೊತ್ತಿಲ್ಲ ಹೇಳಿ, ನಟ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಬಗ್ಗೆ ಕಂಪ್ಲೀಟ್ ಆಗಿ ತಿಳಿದುಕೊಳ್ಳಲು ಮಿಸ್ ಮಾಡ್ದೆ ಕೊನೆವರೆಗೂ ಓದಿ.

ಮೇಘನಾ ರಾಜ್ ರವರು ಮೇ 3 1990ರಲ್ಲಿ ಬೆಂಗಳೂರಿನ ಪ್ರೈವೇಟ್ ಹಾಸ್ಪಿಟಲ್ ನಲ್ಲಿ ಜನಿಸಿದರು. ಇವರ ತಂದೆ ಸುಂದರ ರಾಜ್ ಹಾಗೂ ತಾಯಿ ಪ್ರಮೀಳಾ ಜೋಶಾಯಿ. ತಂದೆ ಸುಂದರ ರಾಜ್ ರವರು ಕನ್ನಡದ 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಾಯಿ ಪ್ರಮೀಳಾ ಜೋಷಾಯಿರವರು ಕೂಡ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಜೊತೆಗೆ ಕೆಲವು ಸಿನಿಮಾಗಳ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕೀಯಾಗಿದ್ದಾರೆ. ಮೇಘನಾ ರಾಜ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕಿಯರ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿ ಬೆಂಗಳೂರಿನ ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನ ವಿಷಯದಲ್ಲಿ ಪದವಿ ಪಡೆದುಕೊಂಡಿದ್ದಾರೆ. ರಂಗಭೂಮಿ ಕಲಾವಿದೆಯಾಗಿ ನಟನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ, ತಂದೆ ಸುಂದರ್ ರಾಜ್ ಜೊತೆ ಜೋಕುಮಾರಸ್ವಾಮಿ ಎಂಬ ನಾಟಕದಲ್ಲಿ ನಟಿಸಿದ್ದಾರೆ.

2006ರಲ್ಲಿ ಪೋಯಿ ಎಂಬ ತಮಿಳು ಚಿತ್ರದ ದ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ತೆರಳಿದ್ದ ಮೇಘನಾ ರಾಜ್ ರವರಿಗೆ ಅದೇ ಚಿತ್ರದ ನಿರ್ದೇಶಕರಾಗಿದ್ದ ಕೆ ಬಾಲಚಂದ್ರ ರವರು ಚಿತ್ರರಂಗಕ್ಕೆ ಬರಮಾಡಿಕೊಂಡರು. ನಂತರ ಕೆ ಬಾಲಚಂದ್ರ ರವರ ಹಲವು ಚಿತ್ರಗಳಲ್ಲಿ ನಟಿ ಮೇಘನಾ ರಾಜ್ ನಟಿಸಿದರು. ಮೇಘನಾ ರಾಜ್ ನಟಿಸಿದ ಮೊದಲ ಚಲನಚಿತ್ರ ತೆಲುಗು ಭಾಷೆಯ ಬೆಂಡು ಅಪ್ಪರಾವ್ ಆರ್ ಎಂ ಪಿ, ಆದರೆ ಈ ಚಿತ್ರ ಪ್ರದರ್ಶನ ಕಾಣಲಿಲ್ಲ. ನಂತರ ಕಾಮಿಡಿ ಎಂಟರ್ಟೈನರ್ ಎಂಬ ಚಿತ್ರದಲ್ಲಿ ಶಾಲಾ ಶಿಕ್ಷಕಿಯಾಗಿ ಕಾಣಿಸಿಕೊಂಡಿದ್ದಾರೆ ಇನ್ನೂ ಈ ಸಿನಿಮ 2000ರಲ್ಲಿ ತೆರೆ ಕಂಡಿತು. ಮೇಘನಾ ರಾಜ್ ಕಾಣಿಸಿಕೊಂಡ ಮೊದಲ ಕನ್ನಡ ಸಿನಿಮಾ ಪುಂಡ ಇದು ತಮಿಳು ಭಾಷೆಯ ಪೊಲ್ಲಾದವನ್ ಎಂಬ ಚಿತ್ರದ ರಿಮೇಕ್ ಆಗಿದೆ.

ಮೇಘನಾ ರಾಜ್ ರವರು 2008ರಿಂದ 2012ರ ವರೆಗೆ ತಮಿಳ್ ಮಲಯಾಳಂನ ಸಾಕಷ್ಟು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಬ್ಯೂಟಿಫುಲ್ ಚಿತ್ರದ ನಂತರ ಮಲಯಾಳಂನಲ್ಲಿ ಮೇಘನಾ ರಾಜ್ ರವರು ಬಹು ಬೇಡಿಕೆಯ ನಟಿಯಾಗಿದ್ದರು. ನಂತರ ರಾಕಿಂಗ್ ಸ್ಟಾರ್ ಯಶ್ ರವರ ರಾಜಾಹುಲಿ ಸಿನಿಮಾದಲ್ಲಿ ಮೇಘನಾ ರಾಜ್ ರವರು ನಟಿಸಿದರು. ಈ ಸಿನಿಮಾದಲ್ಲಿ ಯಶ್ ರವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದಾದ ಬಳಿಕ ಶ್ರೀನಗರ ಕಿಟ್ಟಿ ರವರ ಕನ್ನಡದ ಬಹುಪರಾಕ್ ಚಿತ್ರದಲ್ಲಿ ನಟಿಸಿದ್ದಾರೆ. ನಂತರ ಚಿರಂಜೀವಿ ಸರ್ಜರ್ ಅವರ ಆಟಗಾರ ಚಿತ್ರದಲ್ಲಿ ನಟಿಸಿದರು. ನಂತರ ವಂಶೋದ್ಧಾರಕ, ಭುಜಂಗ, ಅಲ್ಲಮ, ಲಕ್ಷ್ಮಣ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೌರವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕುರುಕ್ಷೇತ್ರ ಸಿನಿಮಾದಲ್ಲಿ ನಟಿ ಮೇಘನಾ ರಾಜ್ ರವರು ರಾಜಕುಮಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಚಲನಚಿತ್ರ ನಟರಾಗಿದ್ದ ಚಿರಂಜೀವಿ ಸರ್ಜಾ ಜೊತೆ 2017ರ ಅಕ್ಟೋಬರ್ 22ರಂದು ನಿಶ್ಚಿತಾರ್ಥ ಮಾಡಿಕೊಂಡರು. ಜೊತೆಗೆ 2018 ರ ಮೇ ತಿಂಗಳಲ್ಲಿ ಚಿರು ಸರ್ಜಾ ಜೊತೆ ಮದುವೆಯಾದರು. ಮದುವೆಯಾದ ಎರಡೇ ವರ್ಷಕ್ಕೆ ನಟಿ ಮೇಘನಾ ರಾಜ್ ರವರು ಪತಿ ಚಿರಂಜೀವಿ ಸರ್ಜರನ್ನು ಕಳೆದುಕೊಂಡರು. ಈ ಆಘಾತದಿಂದ ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬ ಮತ್ತೆ ಚೇತರಿಸಿಕೊಂಡಿದ್ದು ರಾಯನ್ ಸರ್ಜನ ಬರುವಿಕೆಯಿಂದ. ವಿಶೇಷವೇನೆಂದರೆ ರಾಯನ್ ರಾಜ್ ಸರ್ಜಾ ಮೇಘನಾ ರಾಜ್ ಆಗುವ ಚಿರು ಸರ್ಜರವರ ನಿಶ್ಚಿತಾರ್ಥದ ದಿನವೇ ಜನಿಸಿದ್ದಾನೆ. ಇದೀಗ 2023 ಅಕ್ಟೋಬರ್ ನಲ್ಲಿ ಮೂರನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಮೇಘನಾ ರಾಜ್ ರವರು 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಹಾಗೂ ಇತ್ತೀಚಿಗೆ ಅಷ್ಟೇ ನಟಿ ಮೇಘನಾ ರಾಜ್ ಅಭಿನಯದ ತತ್ಸಮ ತದ್ಭವ ಸಿನಿಮಾ ಕೂಡ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈ ಸಿನಿಮಾವನ್ನು ಚಿರಂಜೀವಿ ಸರ್ಜಾ ಸ್ನೇಹಿತರೇ ಸೇರಿ ಮಾಡಿದ್ದು ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಪ್ರಶಂಸೆ ಪಡೆದುಕೊಂಡಿದೆ.

ನಟಿ ಮೇಘನಾ ರಾಜ್ ರವರು ಬೆಳ್ಳಿತರೆ ಮಾತ್ರವಲ್ಲದೆ ಕಿರುತೆರೆಯ ರಿಯಾಲಿಟಿ ಶೋ ನಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ ವಿಶೇಷ ಅತಿಥಿಯಾಗಿ ಕೂಡ ಭಾಗಿಯಾಗುತ್ತಾರೆ. ಕನ್ನಡ ಚಿತ್ರರಂಗ ಸೇರಿದಂತೆ ತಮಿಳ್ ಮಲಯಾಳಂ ಸಿನಿಮಾದಲ್ಲಿ ಅಭಿನಯಿಸಿ ಸಾಕಷ್ಟು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ. ಮೇಘನಾ ರಾಜ್ ರವರು ಇದೀಗ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ ಇನ್ನು ಮುಂದೆ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಶ್ರೀನಗರ ಕಿಟ್ಟಿ ಜೊತೆ ಸಿನಿಮಾ ಕೂಡ ಅನೌನ್ಸ್ ಆಗಿದೆ. ಇದಿಷ್ಟು ನಟಿ ಮೇಘನಾ ರಾಜ್ ಬಗ್ಗೆ ತಿಳಿಸಿಕೊಡುವ ಸಣ್ಣ ಪ್ರಯತ್ನವಾಗಿದ್ದು ಇನ್ನೂ ಸಾಕಷ್ಟು ವಿಚಾರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಿದ್ದೇವೆ.

You may also like...

Leave a Reply

Your email address will not be published. Required fields are marked *

You cannot copy content of this page