ಜೊತೆ ಜೊತೆಯಲಿ ಮೇಘ ಶೆಟ್ಟಿ ಅಕ್ಕನ ಮದುವೆ ಸಂಭ್ರಮದಲ್ಲಿ
ಕನ್ನಡ ಕಿರುತೆರೆಯ ಲೋಕಕ್ಕೆ 2019ರಲ್ಲಿ ಎಂಟ್ರಿ ಕೊಟ್ಟಿದ್ದ ಜೀ ವಾಹಿನಿಯ ಜನಪ್ರಿಯ ಸೀರಿಯಲ್ ಜೊತೆ ಜೊತೆಯಲಿ ದಾರಾವಾಹಿಯ ಪ್ರಮುಖ ನಟಿ ಮೇಘ ಶೆಟ್ಟಿ ರವರು ಇದೀಗ ತಮ್ಮ ಸಹೋದರಿಯ ಮದುವೆಯ ಸಂಭ್ರಮದಲ್ಲಿದ್ದಾರೆ.ಮೇಘ ಶೆಟ್ಟಿ ರವರನ್ನು ನೀವು ಕಿರುತೆರೆಯ ಸೀರಿಯಲ್ ಗಳಲ್ಲಿ ನೋಡಿರುತ್ತೀರಾ. ಮೇಘ ಶೆಟ್ಟಿ ರವರಿಗೆ ಇಬ್ಬರು ಸಹೋದರಿಯರು ಇದ್ದಾರೆ. ಇನ್ನೂ ಒಬ್ಬ ಸಹೋದರಿಯಾದ ಸುಷ್ಮಾ ಶೆಟ್ಟಿ ಮದುವೆ 2022 ರಲ್ಲಿ ತುಂಬ ಗ್ರಾಂಡ್ ಆಗಿ ಮಾಡಿದ್ದರು. ಇದೀಗ ಇನ್ನೊಬ್ಬ ಸಹೋದರಿಯ ಮದುವೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ತುಂಬ ಗ್ರಾಂಡ್ ಆಗಿ ನಡೆದಿದೆ.
ಇನ್ನು ಮದುವೆ ಕಾರ್ಯಕ್ರಮದಲ್ಲಿ ನಟಿ ಮೇಘ ಶೆಟ್ಟಿ ರವರ ಕಿರುತೆರೆಯ ಕಲಾವಿದ ಸ್ನೇಹಿತರು ಹಾಗೂ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಇನ್ನು ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಮೇಘ ಶೆಟ್ಟಿ ರವರು ತಮ್ಮ ಸಹೋದರಿಯರ ಜೊತೆ ತುಂಬಾ ಖುಷಿಯಾಗಿ ಸಮಯ ಕಳೆದಿರುವ ಸುಂದರ ಕ್ಷಣಗಳು ಇಲ್ಲಿವೆ ನೋಡಿ.

ನಟಿ ಮೇಘ ಶೆಟ್ಟಿ ರವರು ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿ. ಇದೀಗ ಕನ್ನಡದ ಕೆಲವು ಸಿನಿಮಾಗಳನ್ನು ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೇಘ ಶೆಟ್ಟಿ ಅಭಿನಯದ ಮೊದಲ ಸಿನಿಮಾ ತ್ರಿಬಲ್ ರೈಡಿಂಗ್ ಅನಂತರ ದಿಲ್ ಪಸಂದ್ ಸಿನಿಮಾದಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ಅದಲ್ಲದೆ ನಟ ದನ್ವೀರ್ ಅಭಿನಯದ ಸಿನಿಮಾದಲ್ಲೂ ಕೂಡ ನಟನೆ ಮಾಡಿದ್ದಾರೆ.