ಅದ್ದೂರಿಯಾಗಿ ನಡೆದ ನೇಹಾ ಗೌಡ ಸೀಮಂತ ಶಾಸ್ತ್ರ
ಕಿರುತೆರೆಯ ಜನಪ್ರಿಯ ನಟಿ ನೇಹಾ ಗೌಡ ಹಾಗೂ ಕಿರುತೆರೆ ನಟ ಚಂದನ್ ಗೌಡ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ಆಗಸ್ಟ್ 21ರಂದು ನಟಿ ನೇಹಾ ಗೌಡರವರ ಸೀಮಂತ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನಡೆದಿದೆ. ನೇಹಾ ಗೌಡ ಹಾಗೂ ಚಂದನ್ ಗೌಡ 4-5 ವರ್ಷಗಳ ಹಿಂದೆ ಮದುವೆಯಾಗಿದ್ದರು. ಕೆಲವು ವರ್ಷಗಳ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ದಂಪತಿ ತುಂಬಾ ಖುಷಿಯಿಂದ ಬೇಬಿ ಶೋವರ್ ಕಾರ್ಯಕ್ರಮವನ್ನು ಏರ್ಪಾಡು ಮಾಡಿದ್ದರು. ಸೀಮಂತ ಸಮಾರಂಭದ ಕ್ಯೂಟ್ ಫೋಟೋ ಇಲ್ಲಿದೆ ನೋಡಿ.

ಕಿರುತೆರೆಯ ಸಾಕಷ್ಟು ಸೀರಿಯಲ್ ಗಳಲ್ಲಿ ನಟಿಸಿರುವ ನೇಹಾ ಗೌಡ ಮೊದಲ ಬಾರಿಗೆ ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಕಿರುತೆರೆಗೆ ಕಾಲಿಟ್ಟರು. ಅನಂತರ ಕೆಲವು ಸೀರಿಯಲ್ ಹಾಗೂ ಕೆಲವು ರಿಯಾಲಿಟಿ ಶೋಗಳು ಕೂಡ ಭಾಗಿಯಾಗಿದ್ದರು. ಇತ್ತೀಚಿಗೆ ನಮ್ಮ ಲಚ್ಚಿ ಸೀರಿಯಲ್ ನಲ್ಲೂ ಕೂಡ ನೇಹಾ ಗೌಡ ಕಾಣಿಸಿಕೊಂಡಿದ್ದರು. ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ನಟಿ ನೇಹಾ ಗೌಡ ಜೊತೆಯಲ್ಲಿ ಕಾಣಿಸಿಕೊಂಡಿದ್ದ ನಟಿ ಕವಿತಾ ಗೌಡ ಕೂಡ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ.

ನೇಹಾ ಗೌಡ ಸೀಮಂತ ಕಾರ್ಯಕ್ರಮದಲ್ಲಿ ಕಿರುತೆರೆಯ ಹಲವು ಕಲಾವಿದರು ಭಾಗಿಯಾಗಿ ನೇಹಾ ರವರಿಗೆ ಶುಭ ಹಾರೈಸಿದ್ದಾರೆ. ಇನ್ನು ಸೀಮಂತ ಸಮಾರಂಭದಲ್ಲಿ ನಟಿ ತಾರಾ, ಕವಿತಾ ಗೌಡ, ಅನುಪಮ ಗೌಡ, ನಟಿ ತನ್ವಿ ಬಾಲ್ರಾಜ್, ನಟ ಚಂದನ್ ಕುಮಾರ್, ನಿರಂಜನ್ ದೇಶಪಾಂಡೆ, ಸೋನು ಗೌಡ, ಹಾಗೂ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್, ಬಿಗ್ ಬಾಸ್ ಪಾರ್ಟಿ ನಮ್ರತಾ ಗೌಡ ಸೇರಿದಂತೆ ಇನ್ನೂ ಅನೇಕ ಕಲಾವಿದರು ಮತ್ತು ಸ್ನೇಹಿತರು ಕುಟುಂಬ ವರ್ಗದವರು ಭಾಗಿಯಾಗಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ನಟಿ ನೇಹಾ ಗೌಡರವರು ತಾಯಿಯಾಗುತ್ತಿದ್ದಾರೆ.