ಹಾಸ್ಯ ನಟ ಚಿಕ್ಕಣ್ಣ ಹೀರೊ ಆಗಿದ್ದು ಹೇಗೆ ಗೊತ್ತಾ?
ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ಕಾಮಿಡಿ ನಟ ಚಿಕ್ಕಣ್ಣ ರವರು ತಮ್ಮ ವಿಶೇಷ ಮ್ಯಾನರಿಸಂ ಮೂಲಕ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದ್ದಾರೆ, ಹಾಸ್ಯ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಚಿಕ್ಕಣ್ಣ ಇದೀಗ ನಾಯಕ ನಟನಾಗಿ ಮಿಂಚಲು ರೆಡಿಯಾಗಿದ್ದಾರೆ. ಹೌದು ಉಮಾಪತಿ ಗೌಡ ನಿರ್ಮಾಣದ ಉಪಾಧ್ಯಕ್ಷ ಸಿನಿಮಾ ಮೂಲಕ ನಾಯಕನಾಗಿದ್ದಾರೆ ಇನ್ನೂ ಈ ಸಿನಿಮಾ ಬಿಡುಗಡೆಗೂ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರೆ ಸಾಮಾನ್ಯ ಕೆಲಸ ಮಾಡ್ಕೊಂಡು ಇದ್ದ ಚಿಕ್ಕಣ್ಣ ನಟನಾಗಿದ್ದರು ಹೇಗೆ? ಹಾಗೂ ಚಿಕ್ಕಣ್ಣನವರ ಕಷ್ಟದ ಸಮಯದ ಬಗ್ಗೆ ತಿಳಿದುಕೊಳ್ಳಲು ಈ ಪುಟವನ್ನು ಕೊನೆವಾರ್ಗು ಓದಿ.
ಒಂದು ಪುಟ್ಟ ಹಳ್ಳಿಯಿಂದ ಚಿತ್ರರಂಗಕ್ಕೆ ಬಂದು ಸಣ್ಣ ಪುಟ್ಟ ಕನಸುಗಳನ್ನು ಕಾಣುತ್ತ ಅನಂತರ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ಇದೀಗ ಬೆಳ್ಳಿಪರದೆ ಮೇಲೆ ರಾರಜಿಸುತ್ತಿದ್ದಾರೆ. ಚಿಕ್ಕಣ್ಣನವರು ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂದರೆ ಇದರ ಹಿಂದೆ ಸಾಕಷ್ಟು ಕಹಿ ಘಟನೆಗಳಿವೆ. ತಮ್ಮ ಊರಿನ ಕಡೆ ಗಾರೆ ಕೆಲಸ ಮಾಡ್ತಿದ್ದ ಚಿಕ್ಕಣ್ಣ ನವರು ಈ ಸ್ಥಾನಕ್ಕೆ ಬರಲು ಎಷ್ಟು ಕಷ್ಟ ಪಟ್ಟಿದ್ದಾರೆ ಹೇಳ್ತಿವಿ ನೋಡಿ.
ಇದನ್ನು ಓದಲು ಕ್ಲಿಕ್ ಮಾಡಿ : ಮೊದಲ ಮಗುವಿಗೆ ಜನ್ಮ ನೀಡಿದ ಕಾಮಿಡಿ ಕಿಲಾಡಿಗಳು ನಯನ..!
ಚಿಕ್ಕಣ್ಣನವರು 22 ಜೂನ್ 1984 ರಲ್ಲಿ ಮೈಸೂರಿನ ಬಲ್ಲಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಭೈರೇಗೌಡ ತಾಯಿ ನಿಂಗಮ್ಮ ಈ ದಂಪತಿಯ ಆರು ಜನ ಮಕ್ಕಳಲ್ಲಿ ಐದನೇಯವರು ಚಿಕ್ಕಣ್ಣ. ಕಡುಬಡತನದ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೂ ಕಷ್ಟಗಳನ್ನು ಎದುರಿಸುತ್ತ ಬೆಳೆಯುತ್ತಾರೆ ತಮ್ಮ ಊರಿನಲ್ಲಿ ವಿದ್ಯಾಭ್ಯಾಸ ಮಾಡುವಾಗಲು ಸಹ ವಿದ್ಯಾಭ್ಯಾಸದ ಜೊತೆಗೆ ಮನೆಯ ಆರ್ಥಿಕ ಸಮಸ್ಯೆಯಿಂದ ರಜಾದಿವಸಗಳಲ್ಲಿ ಮನೆ ಗಾರೆ ಕೆಲಸಗಳನ್ನೂ ಕೂಡ ಚಿಕ್ಕಣ್ಣ ಮಾಡಿದ್ದಾರೆ.
SSLC ಓದುವಾಗ ತಮ್ಮ ಗೆಳೆಯರ ಜೊತೆ ಸೇರಿ ನಾಟಕವೊಂದನ್ನು ಮಾಡುತ್ತಾರೆ ನಾಟಕದಲ್ಲಿ ಚಿಕ್ಕಣ್ಣನವರು ಮೊದಲ ಬಾರಿಗೆ ಚಾರ್ಲಿ ಚಾಪ್ಲಿನ್ ಪಾತ್ರವನ್ನು ಮಾಡುತ್ತಾರೆ. ಚಿಕ್ಕಣ್ಣ ಶಾಲೆಯಲ್ಲಿ ಓದುವಾಗ ಮನೆಯಲ್ಲಿ ಬಡತನ ಇದುದ್ರಿಂದ ಸರಿಯಾಗಿ ಊಟ ಸಹ ಸಿಗುತ್ತಿರಲಿಲ್ಲ ಮನೆಯಲ್ಲಿದ್ದ ಬಡತನ ದಿಂದ sslc ಆದಮೇಲೆ ಚಿಕ್ಕಣ್ಣ ವಿದ್ಯಾಭ್ಯಾಸ ನಿಲ್ಲಿಸಿ ಗಾರೆ ಕೆಲಸ ಮಾಡುತ್ತಾರೆ. ಕೆಲಸ ಮಾಡುತ್ತಲೇ ಇವರು ಮೈಸೂರು ದೃಶ್ಯ ಕಲಾವಿದೆ ನಾಟಕ ಮಂಡಳಿಯನ್ನು ಸೇರುತ್ತಾರೆ ಹಾಗೂ ಅನೇಕ ನಾಟಕಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ದಿನವಿಡಿ ಗಾರೆ ಕೆಲಸ ಮಾಡಿ ರಾತ್ರಿ ವೇಳೆ ನಾಟಕ ನಾಟಕ ತರಬೇತಿ ಪಡೆದು ನಾಟಕಗಳಲ್ಲಿ ಅಭಿನಯಿಸುತ್ತಾರೆ.ಅನಂತರ ನಾಟಕಗಳಲ್ಲಿ ಮಾತ್ರವಲ್ಲದೆ ಕಿರುತೆರೆ ಧಾರಾವಾಹಿಗಳಲ್ಲೂ ನಟನೆ ಮಾಡುತ್ತಾರೆ. ಸುವರ್ಣ ವಾಹಿನಿಯ ಕ್ಲಾಸ್ ಮೆಟ್ಸ್ ಸೀರಿಯಲ್ ನಲ್ಲಿ ಅಭಿನಯಿಸಿದ್ದಾರೆ.ನಾಟಕಗಳಲ್ಲಿ ಇವರ ಅಭಿನಯ ಕಂಡು ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಷೋನಲ್ಲಿ ಅವಕಾಶ ಸಿಗುತ್ತದೆ.
ಇನ್ನೂ ಈ ಕಾಮಿಡಿ ಷೋನಲ್ಲಿ ಇವರು ಮತ್ತು ಕುರಿ ಪ್ರತಾಪ್ ಕಾಮಿಡಿಗೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುತ್ತದೆ. ಇದರ ನಂತರ ಅನೇಕ ಅವಕಾಶಗಳು ಸಿಗುತ್ತವೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳತ್ತ ಬಂದ ಹಣದಲ್ಲಿ ಬೆಂಗಳೂರಿನಲ್ಲಿ ಒಂದು ರೂಮ್ ಮಾಡುತ್ತಾರೆ. ಮಂಡ್ಯ ಜಿಲ್ಲೆಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ಆಯೋಜನೆ ಮಾಡಿದ್ದ ಅಮೃತ ಮಹೋತ್ಸವ ಎಂಬ ಕಾರ್ಯಕ್ರಮದಲ್ಲಿ ಚಿಕ್ಕಣ್ಣನ ಹಾಸ್ಯ ನಟನೆ ನೋಡಿ ರಾಕಿಂಗ್ ಸ್ಟಾರ್ ಯಶ್ ರವರು ತಾವು ನಟನೆಯಲ್ಲಿ ತೊಡಗಿದ್ದ ಕಿರಾತಕ ಸಿನಿಮಾದಲ್ಲಿ ಅವಕಾಶ ನೀಡುವಂತೆ ಚಿತ್ರದ ನಿರ್ದೇಶಕರಿಗೆ ಹೇಳಿ ಅವಕಾಶ ಕೊಡಿಸುತ್ತಾರೆ.ಕಿರಾತಕ ಸಿನಿಮಾ ಒಳ್ಳೆಯ ಯಶಸ್ಸನ್ನು ಕಾಣುತ್ತದೆ ಇದಾದ ನಂತರ ಚಿಕ್ಕಣ್ಣ ಹಲವಾರು ನಟರ ಜೊತೆ ನಟಿಸಲು ಅವಕಾಶ ಒದಗಿಬರುತ್ತದೆ.
ಚಿಕ್ಕಣ್ಣನವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಕಿಚ್ಚ ಸುದೀಪ್ ಶ್ರೀ ಮುರಳಿ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಶರಣ್ ಸೇರಿದಂತೆ ಸ್ಯಾಂಡಲ್ ವುಡ್ ಎಲ್ಲಾ ಕಲಾವಿದರ ಜೊತೆಗೆ ಬೆಳ್ಳಿಪರದೆ ಹಂಚಿಕೊಳ್ಳುತ್ತಾರೆ.ಇಲ್ಲಿಯವರೆಗೂ ಕನ್ನಡದ 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಇವರ ಅಭಿನಯಕ್ಕೆ ಸಾಕಷ್ಟು ಪ್ರಶಸ್ತಿಗಳು ಕೂಡ ಬಂದಿವೆ. 2013-14 ರಲ್ಲಿ ರಾಜಾಹುಲಿ ಮತ್ತು ಅಧ್ಯಕ್ಷ ಸಿನಿಮಾಗೆ 2ಬಾರಿ ಸೈಮಾ ಉತ್ತಮ ಹಾಸ್ಯನಟ ಪ್ರಶಸ್ತಿ, 2017ರಲ್ಲಿ ಐಫಾ ಉತ್ಸವ ಉತ್ತಮ ಹಾಸ್ಯನಟ ಪ್ರಶಸ್ತಿ ಮತ್ತು 2019ರಲ್ಲಿ ಜೀಕನ್ನಡ ಹೆಮ್ಮೆಯ ಹಾಸ್ಯನಟ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇದನ್ನು ಓದಲು ಕ್ಲಿಕ್ ಮಾಡಿ :Dboss – ನಟ ದರ್ಶನ್ ಡಿಬಾಸ್ ಆದ ಕಥೆ..!
ಚಿಕ್ಕಣ್ಣ ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನಕ್ಕೆ ಬಂದ ಮೇಲೆ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಆಸೆಯನ್ನು ಹೊಂದಿರುತ್ತಾರೆ.ಆದರೆ ಆಕಸ್ಮಿಕವಾಗಿ ತಂದೆ ಗಾಡಿಯಲ್ಲಿ ಹೋಗುವಾಗ ಅಪಘಾತವಾಗಿ ತುಂಬಾ ಸೀರಿಯಸ್ ಆಗುತ್ತಾರೆ. ಆಗ ಚಿಕ್ಕಣ್ಣ ಶೂಟಿಂಗ್ ನಲ್ಲಿ ಇರುತ್ತಾರೆ ಶೂಟಿಂಗ್ ಮುಗಿದ ನಂತರ ಆಸ್ಪತ್ರೆಗೆ ಹೋಗುತ್ತಾರೆ. ಚಿಕಿತ್ಸೆಯ ನಂತರ ಚಿಕ್ಕಣ್ಣನವರ ತಂದೆಯ ಆರೋಗ್ಯ ಸುಧಾರಿಸುತ್ತದೆ ಇದಾದ ಒಂದು ವರ್ಷದ ಬಳಿಕ ಚಿಕ್ಕಣ್ಣನವರ ತಂದೆ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ.ನನ್ನ ಕಷ್ಟ ಕಾಲದಲ್ಲಿ ನನ್ನ ತಂದೆನ ಚೆನ್ನಾಗಿ ನೋಡಿಕೊಳ್ಳಲು ಆಗಲಿಲ್ಲ ಈಗ ಜೀವನದಲ್ಲಿ ಚೆನ್ನಾಗಿ ಇದ್ದೇನೆ ಎನ್ನುವಾಗ ನನ್ನ ತಂದೆನೇ ಇಲ್ಲ ಎಂದು ಷೋ ಒಂದರಲ್ಲಿ ಕಣ್ಣೀರು ಹಾಕಿದ್ದಾರೆ ನಟ ಚಿಕ್ಕಣ್ಣ.
ಕಡುಬಡತನದ ಕುಟುಂಬದಲ್ಲಿ ಹುಟ್ಟಿ ತನ್ನ ಸ್ವಂತ ಪರಿಶ್ರಮದಿಂದ ಚಿಕ್ಕಣ್ಣ ನವರು ಡಿಬಾಸ್ ರೀತಿಯೇ ಫಾರ್ಮ್ ಹೌಸ್ ಕೂಡ ಮಾಡಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸಬೇಕು ಅನ್ನೋರಿಗೆ ಇವರು ಆದರ್ಶವಾಗಿದ್ದಾರೆ.ಒಬ್ಬ ಗಾರೆ ಕೆಲಸಗಾರ ಇಂದು ಸ್ಟಾರ್ ನಟರಿಗೆ ಸರಿಸಮಾನವಾಗಿ ಅಭಿನಯಿಸುವ ಮಟ್ಟಕ್ಕೆ ಬೆಳೆಯಬೇಕು ಅಂದರೆ ಅವರ ಪರಿಶ್ರಮವೇ ಇದಕ್ಕೆಲ್ಲಾ ಕಾರಣ. ಇದೀಗ ಕೆಲವೇ ದಿನಗಳಲ್ಲಿ ನಟ ಚಿಕ್ಕಣ್ಣ ತಮ್ಮ ಹೊಸ ಚಿತ್ರ ಉಪಾಧ್ಯಕ್ಷ ಸಿನಿಮಾ ಮೂಲಕ ನಟನಾಗಿ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ ಇನ್ನೂ ಈ ಚಿತ್ರದಲ್ಲಿ ಇವರಿಗೆ ನಾಯಕಿಯಾಗಿ ಕಿರುತೆರೆ ನಟಿ ಮಲೈಕಾ ರವರು ಜೊತೆಯಾಗಿದ್ದಾರೆ.