ನಟಿ ಅಮೂಲ್ಯ ಮನೆಯಲ್ಲಿ ಮಕ್ಕಳ ಜೊತೆ ದೀಪಾವಳಿ
ಕನ್ನಡ ಚಿತ್ರರಂಗದ ಮುದ್ದಾದ ನಟಿ ಅಮೂಲ್ಯ ಜಗದೀಶ್ ಮನೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಅಮೂಲ್ಯ ಕಳೆದ ವರ್ಷ ಶಿವರಾತ್ರಿ ಹಬ್ಬದಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇನ್ನೂ ಇಬ್ಬರು ಮಕ್ಕಳಿಗೂ ಅದ್ದೂರಿಯಾಗಿ ನಾಮಕರಣ ಮಾಡಿದ್ದರು. ನಾಮಕರಣ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಕಲಾವಿದರು ಭಾಗಿಯಾಗಿ ಅವಳಿ ಮಕ್ಕಳಿಗೆ ಶುಭ ಹಾರೈಸಿದ್ದರು. ಪ್ರತಿ ಹಬ್ಬಕ್ಕೂ ನಟಿ ಅಮೂಲ್ಯ ದಂಪತಿ ಮಕ್ಕಳಿಗೆ ವಿಶೇಷ ಫೋಟೋಶೂಟ್ ಮಾಡಿಸಿ ಪೋಟೋ ಹಾಗೂ ವಿಡಿಯೋಗಳನ್ನು ಸಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇನ್ನೂ ಈ ವರ್ಷ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿರುವ ಅಮೂಲ್ಯ ಜಗದೀಶ್ ದಂಪತಿ ತಮ್ಮ ಮಕ್ಕಳ ಜೊತೆಗೂಡಿ ದೀಪಾವಳಿ ಹಬ್ಬಕ್ಕೆ ವಿಶೇಷವಾಗಿ ಫೋಟೋಶೂಟ್ ಮಾಡಿಸಿ ಶೇರ್ ಮಾಡಿದ್ದಾರೆ.ಜೊತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಮೂಲ್ಯ ಮನೆಯ ಹಬ್ಬದ ಸುಂದರ ಕ್ಷಣಗಳು ಇಲ್ಲಿವೆ ನೋಡಿ.

ಇತ್ತಿಚೆಗೆ ನಟಿ ಅಮೂಲ್ಯ ಜಗದೀಶ್ ಕುಟುಂಬ ಹಾಸನದ ಹಾಸನಾಂಬೆ ದೇವಸ್ಥಾನಕ್ಕೆ ಭೇಟಿ ದೇವಿಯ ದರ್ಶನ ಪಡೆದುಕೊಂಡಿದ್ದರು. ಅಮೂಲ್ಯ ಪತಿ ಜಗದೀಶ್ ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದು ಒಳ್ಳೆಯ ಜನ ಬೆಂಬಲ ಪಡೆದುಕೊಂಡಿದ್ದಾರೆ.ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಆಧವ್ ಹಾಗೂ ಅಥರ್ವ್ ಎಂದು ಮುದ್ದಾದ ಹೆಸರಿಟ್ಟಿದ್ದಾರೆ.ನಟಿ ಅಮೂಲ್ಯ ಕೂಡ ತಮ್ಮ ಮಕ್ಕಳ ಹಾರೈಕೆಯಲ್ಲಿ ತೊಡಗಿದ್ದು ಮದುವೆಯ ನಂತರ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.ಆದರೆ ಅಮೂಲ್ಯ ಅಭಿಮಾನಿಗಳು ಇವರನ್ನು ಮತ್ತೆ ಬೆಳ್ಳಿಪರದೆ ಮೇಲೆ ನೋಡಲು ಬಯಸುತ್ತಿದ್ದಾರೆ.ರಾಧಿಕಾ ಪಂಡಿತ್ ದೀಪಾವಳಿ ಸಂಭ್ರಮ

ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಮೂಲ್ಯ ಕನ್ನಡ ಅನೇಕ ಸ್ಟಾರ್ ನಟರ ಜೊತೆ ಸ್ರ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.ಅಮೂಲ್ಯ ತಮ್ಮ ಮಕ್ಕಳು ಹಾಗೂ ಕುಟುಂಬದ ಜೊತೆ ತಂಬಾ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಸ್ನೇಹಿತರು ಮತ್ತು ಪತಿ ಜಗದೀಶ್ ಜೊತೆ ಇತ್ತೀಚಿಗೆ ವಿದೇಶಿ ಪ್ರವಾಸ ಕೂಡ ಹೋಗಿ ಬಂದಿದ್ದಾರೆ.
ಅಮೂಲ್ಯ ಜಗದೀಶ್ ಈಗಾಗಲೇ ಮಕ್ಕಳ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಗಳನ್ನು ಸಹ ತೆರೆದಿದ್ದಾರೆ.ಇನ್ನೂ ಆ ಖಾತೆಗೆ atharv.adhav ಎಂದು ಹೆಸರಿಟ್ಟಿದ್ದಾರೆ ಮಕ್ಕಳ ಅಕೌಂಟ್ ಅನ್ನು ಅಮೂಲ್ಯ ಅವರೇ ನಿರ್ವಹಣೆ ಮಾಡುತ್ತಿದ್ದಾರೆ.