ನಟಿ ಸೌಂದರ್ಯ ಅಂತ್ಯಕ್ರಿಯೆ ಆಗಿದ್ದು ಎಲ್ಲಿ? ಆ ದಿನ ಏನೆಲ್ಲ ಆಯ್ತು ಗೊತ್ತಾ.
ಭಾರತ ಚಿತ್ರರಂಗದ ಪ್ರಖ್ಯಾತ ನಟಿ ಸೌಂದರ್ಯನವರ ಅಂತ್ಯಕ್ರಿಯೆ ಆಗಿದ್ದು ಎಲ್ಲಿ, ಹಾಗೂ ಅವತ್ತು ಅಲ್ಲಿ ಏನೆಲ್ಲಾ ಆಯ್ತು ಎಂಬುದರ ಬಗ್ಗೆ ನಾವಿವತ್ತು ಕಂಪ್ಲೀಟ್ ಆಗಿ ತಿಳಿಸ್ತೀವಿ ಕೊನೆವರೆಗೂ ಓದಿ.
ನಿಮಗೆಲ್ಲಾ ತಿಳಿದಿರುವ ಹಾಗೆ ನಟಿ ಸೌಂದರ್ಯ ರವರು ಫ್ಲೈಟ್ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ದರು ಜೊತೆಗೆ ಸೌಂದರ್ಯವರ ಅಣ್ಣ ಅಮರನಾಥ್ ಕೂಡ ಅವರ ಜೊತೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದರಿಂದ ಅವರು ಕೂಡ ತಂಗಿಯ ಜೊತೆಯಲ್ಲೇ ಸಾವನ್ನಪ್ಪಿದ್ದರು. ಇನ್ನು ಸೌಂದರ್ಯ ಹಾಗೂ ಅವರ ಸಹೋದರನ ದೇಹಗಳು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಹೋಗಿದ್ದವು. ಪೋಸ್ಟ್ ಮಾರ್ಟಂ ನಂತರ ಬಾಡಿಯನ್ನು ಅವರ ಬೆಂಗಳೂರಿನ ಮನೆಗೆ ತರಲಾಗಿತ್ತು. ಅಷ್ಟೊತ್ತಿಗೆ ಪೊಲೀಸ್ ಹಾಗೂ ಸರ್ಕಾರದ ಕಡೆಯಿಂದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಬಹಳ ಜನಪ್ರಿಯತೆ ಪಡೆದಿದ್ದ ನಟಿ ಸೌಂದರ್ಯ ದಿಡೀರ್ ಸಾವನ್ನಪ್ಪಿದ್ದರಿಂದ ಅಭಿಮಾನಿಗಳು ಕೂಡ ಶಾಕ್ ಗೆ ಒಳಗಾಗಿದ್ದರು. ಇನ್ನು ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಮನೆ ಬಳಿ ಬಂದು ಕಣ್ಣೀರ್ ಹಾಕಿದ್ದರು. ಅನಂತರ ಮೆರವಣಿಗೆ ಮೂಲಕ ಶ್ರೀರಾಂಪುರದಲ್ಲಿರುವ ಸ್ಮಶಾನಕ್ಕೆ ಅಂದರೆ ಹರಿಚಂದ್ರ ಘಾಟ್ ವಿದ್ಯುತ್ ಚಿತಗಾರ ಕ್ಕೆ ನಟಿ ಸೌಂದರ್ಯ ಹಾಗೂ ಅವರ ಅಣ್ಣನ ಪಾರ್ಥಿರ್ವ ಶರೀರವನ್ನು ತರುತ್ತಾರೆ. ಇನ್ನೂ ಅಲ್ಲೂ ಕೂಡ ಪೊಲೀಸ್ ಹಾಗೂ ಸರ್ಕಾರದ ಕಡೆಯಿಂದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

ನಟಿ ಸೌಂದರ್ಯ ರವರು ಬ್ರಾಹ್ಮಿನ್ಸ್ ಫ್ಯಾಮಿಲಿಯಿಂದ ಬಂದವರು ಹಾಗಾಗಿ ಅವರ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನವನ್ನು ಮಾಡಿದರು. ಅದ್ರಲ್ಲೂ ಸೌಂದರ್ಯ ಅವರದು ಮುತ್ತೈದೆ ಸಾವು ಆಗಿರೋದ್ರಿಂದ ಬಳೆ ತೊಡಿಸಿ ಮಾಡಬೇಕಿತ್ತು ಅಂತೆಲ್ಲ ಇತ್ತು ಆದ್ರೆ ದೇಹ ಎಲ್ಲಾ ಸುಟ್ಟು ಕರುಕಲು ಆಗಿತ್ತು ಆದ್ದರಿಂದ ಅವರ ಮೇಲೆಯೇ ಬಳೆ ಇಡುವಂತಹ ಪರಿಸ್ಥಿತಿ ಎದುರಾಗಿತ್ತು. ಇನ್ನೂ ಆ ದಿನ ಬಿಜೆಪಿ ಗೌರ್ಮೆಂಟ್ ಇದ್ದಿದ್ರಿಂದ ತುಂಬಾ ಸುಲಭವಾಗಿ ಹಾಗೂ ಯಾವುದೇ ಕಾಂಪ್ಲಿಕೇಟೆಡ್ ಇಲ್ಲದೆ ಪೊಲೀಸ್ ಸೆಕ್ಯೂರಿಟಿಯೊಂದಿಗೆ ಮತ್ತೆ ದೇಹ ದಹನ ಮಾಡಲಾಯಿತು. ಏಕೆಂದರೆ ಆಲ್ರೆಡಿ ಸುಟ್ಟು ಹೋಗಿದ್ದ ದೇಹವನ್ನು ಮತ್ತೆ ಸಂಪ್ರದಾಯದ ಪ್ರಕಾರ ದಹನ ಮಾಡಬೇಕಾಯಿತು. ಇನ್ನು ಆ ಸಂದರ್ಭದಲ್ಲಿ ಸೌಂದರ್ಯ ಕುಟುಂಬದವರು ಸೌಂದರ್ಯ ಗಂಡ ಎಲ್ಲರೂ ಇದ್ದರು.
ಇನ್ನೂ ಆ ದಿನ ಕನ್ನಡದ ಫ್ಯಾನ್ಸ್ ಅಲ್ಲದೆ ಬೇರೆ ರಾಜ್ಯದಿಂದಲೂ ಅಭಿಮಾನಿಗಳು ಸೌಂದರ್ಯ ಮನೆಯ ಬಳಿ ಬಂದಿದ್ದರು. ಜೊತೆಗೆ ಪರಭಾಷೆಯ ಕಲಾವಿದರಾದ ನಟ ಚಿರಂಜೀವಿ, ಮೋಹನ್ ಬಾಬು, ಶ್ರೀಕಾಂತ್ ಹಾಗೂ ಅನೇಕ ಪ್ರಮುಖ ನಟರು ಹಾಗೂ ರಾಜಕೀಯ ಲೀಡರ್ಗಳು ಬಂದಿದ್ರು. ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಕೂಡ ನಟಿ ಸೌಂದರ್ಯ ರವರ ಅಂತಿಮ ದರ್ಶನಕ್ಕೆ ಬಂದಿದ್ದರು. ಸೌಂದರ್ಯ ರವರ ಕೊನೆಯ ಚಿತ್ರ ಆಪ್ತಮಿತ್ರ ಕೂಡ ಚಿತ್ರೀಕರಣ ಮುಗಿಸಿತ್ತು. ಚಿತ್ರ ಬಿಡುಗಡೆಯಾದ ನಂತರ ಸೌಂದರ್ಯರವರ ಪಾತ್ರವನ್ನು ನೋಡಿ ಎಲ್ಲರೂ ರೋಮಾಂಚನ ಗೊಂಡರು.