ಮಕ್ಕಳ ಜೊತೆ ಫ್ಲೈಟ್ ನಲ್ಲಿ ಹೊರಟ ನಟಿ ಅಮೂಲ್ಯ
ನಟಿ ಅಮೂಲ್ಯ ಜಗದೀಶ್ ಹಾಗೂ ಕುಟುಂಬದವರು ಮಕ್ಕಳ ಎರಡನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ನಟ ನೆನಪಿರಲಿ ಪ್ರೇಮ್ ಹಾಗೂ ಪತ್ನಿ ಜ್ಯೋತಿ ಹಾಗೂ ಮಗಳು ಅಮೃತ ಕೂಡ ಅಮೂಲ್ಯ ರವರ ಕುಟುಂಬದ ಜೊತೆ ಜೊತೆಯಾಗಿದ್ದಾರೆ. ನಟಿ ಅಮೂಲ್ಯ ರವರು 2022 ಮಾರ್ಚ್ 1 ರಂದು ಶಿವರಾತ್ರಿ ಹಬ್ಬದಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು.
ಶ್ರೀ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ಹೋಗಲು ನಟಿ ಅಮೂಲ್ಯ ಜಗದೀಶ್ ಕುಟುಂಬದವರು ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅಮೂಲ್ಯ ಮಕ್ಕಳು ಕೂಡ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡಿ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಇನ್ನು ಆ ಸಂದರ್ಭದಲ್ಲಿ ವಿಡಿಯೋವನ್ನು ಅಮೂಲ್ಯ ಪತಿ ಜಗದೀಶ್ ರವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ತಮ್ಮ ಅವಳಿ ಮಕ್ಕಳ ಹುಟ್ಟು ಹಬ್ಬವನ್ನು ತುಂಬಾ ಗ್ರಾಂಡ್ ಆಗಿ ಮಾಡಿದ್ದ ಅಮೂಲ್ಯ ದಂಪತಿ. ಇನ್ನು ಈ ವರ್ಷ ಕೂಡ ಶ್ರೀ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಆಚರಣೆ ಮಾಡಿದ್ದಾರೆ. ಅಮೂಲ್ಯ ಜಗದೀಶ್ ದಂಪತಿ ತಮ್ಮ ಅವಳಿ ಮಕ್ಕಳಿಗೆ ಆಧವ್ ಹಾಗೂ ಆಥರ್ವ್ ಎಂದು ಹೆಸರನ್ನು ಇಟ್ಟಿದ್ದಾರೆ. ಕಳೆದ ವರ್ಷ ತಮ್ಮ ಮಕ್ಕಳ ನಾಮಕರಣವನ್ನು ಕೂಡ ತುಂಬಾ ಅದ್ದೂರಿಯಾಗಿ ಮಾಡಿದ್ದರು. ಇನ್ನು ನಾಮಕರಣ ಸಮಾರಂಭದಲ್ಲಿ ಸ್ಯಾಂಡಲ್ವುಡ್ ನ ಅನೇಕ ಗಣ್ಯರು ಭಾಗಿಯಾಗಿ ಅಮೂಲ್ಯ ಮಕ್ಕಳಿಗೆ ಶುಭ ಹಾರೈಸಿದ್ದರು. ನಟ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಅಮೂಲ್ಯ ಮಕ್ಕಳಿಗೆ ಗಿಫ್ಟ್ ಕೊಟ್ಟು ಖುಷಿಪಟ್ಟಿದ್ದರು. ನಟಿ ಅಮೂಲ್ಯ ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮಕ್ಕಳ ಆರೈಕೆಯಲ್ಲಿ ತೊಡಗಿರುವ ಅಮೂಲ್ಯ ರವರು ಕೆಲವು ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ನಟಿ ಅಮೂಲ್ಯ ಮನೆಯಲ್ಲಿ ಮಕ್ಕಳ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಕೆಲವು ಫೋಟೋ ಹಾಗೂ ವಿಡಿಯೋಗಳನ್ನು ಸದ್ಯದಲ್ಲೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಾರೆ. ಅಮೂಲ್ಯ ರವರು ತಮ್ಮ ಮಕ್ಕಳ ಇನ್ಸ್ಟಾಗ್ರಾಮ್ ಖಾತೆಯನ್ನು ಕೂಡ ಓಪನ್ ಮಾಡಿದ್ದಾರೆ. ಮಕ್ಕಳ instagram ಪೇಜ್ ನಲ್ಲಿ ಮಕ್ಕಳ ಫೋಟೋ ಹಾಗೂ ವಿಡಿಯೋಗಳು ಹಾಗೂ ರೀಲ್ಸ್ ಗಳನ್ನು ಆಗಾಗ ಅಪ್ಲೋಡ್ ಮಾಡುತ್ತಿರುತ್ತಾರೆ.