Bigg boss Kannada 10 : 50ನೇ ದಿನ ಬಿಗ್ ಮನೆಯಲ್ಲಿ ಸಂಭ್ರಮ

Spread the love

ಕಿರುತೆರೆಯ ಅತೀದೊಡ್ಡ ಜನಪ್ರಿಯ ರಿಯಾಲಿಟಿ ಷೋ ಆಗಿರುವ ಬಿಗ್ ಬಾಸ್ ಸೀಸನ್ 10 ( bigg boss Kannada season 10 ) ಕಾರ್ಯಕ್ರಮ ಇದೀಗ 50 ದಿನಗಳನ್ನು ಪೂರೈಸಿದೆ. ಇನ್ನೂ ಈ ಸಂದರ್ಭದಲ್ಲಿ ಬಿಗ್ ಬಾಸ್ ಸುದೀಪ್ ರವರು ಬಿಗ್ ಮನೆಯಲ್ಲಿರುವ ಸ್ಪರ್ಧಿಗಳಿಗೆ 50 ದಿನಗಳ ಪಯಣದ ವಿಡಿಯೋ ಜಲಕ್ ತೋರಿಸಿ ಮತ್ತು ಕೇಕ್ ಕಟ್ ಮಾಡಿಸಿ ಸಂಭ್ರಮಾಚರಣೆ ಮಾಡಿಸಿದ್ದಾರೆ.

ಸೂಪರ್ ಸಂಡೇ ವಿತ್ ಸುದೀಪ ಸಂಚಿಕೆಯಲ್ಲಿ ಮಾತಾಡಿದ ಕಿಚ್ಚ ಸುದೀಪ್ 50ದಿನದಿಂದ ಮನೆಯಲ್ಲಿ ಇದ್ದೀರಾ? ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆ ಏನು ಅಂತ ಬಿಗ್ ಬಾಸ್ ಸ್ಪರ್ಧಿಗಳಿಗೆ ಕೇಳುತ್ತಾರೆ. ಅವಾಗ ಎಲ್ಲಾ ಸ್ಪರ್ಧಿಗಳು ತಮಗೆ 50ದಿನಗಳಲ್ಲಿ ಆದ ಅನುಭವ ಹೇಗಿತ್ತು ಎಲ್ಲವನ್ನೂ ಬಿಗ್ ಬಾಸ್ ನೊಂದಿಗೆ ಹಂಚಿಕೊಂಡಿದ್ದಾರೆ. ಇನ್ನೂ ಈ ವಾರ ಮೈಕಲ್, ಕಾರ್ತಿಕ್, ವರ್ತೂರ್ ಸಂತೋಷ್ ಬಿಟ್ಟು ಇನ್ನುಳಿದ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಶನಿವಾರದ ಸಂಚಿಕೆಯಲ್ಲಿ ಜಾಸ್ತಿ ವೋಟಿಂಗ್ ಮಾಡಿರುವ ಪ್ರಕಾರ ಸೇವ್ ಮಾಡಿದ್ದು ಎಲ್ಲರಿಗೂ ಶಾಕ್ ಆಗಿತ್ತು.ಮೊದಲಿಗೆ ಈವಾರ ಅತೀ ಹೆಚ್ಚು ಮತ ಪಡೆದುಕೊಂಡಿರೋದು ಡ್ರೋನ್ ಪ್ರತಾಪ್ ( Drone prathap ) ಹಾಗೂ ಸುದೀಪ್ ರವರು ಕೂಡ ಮೊದಲಿಗೆ ಪ್ರತಾಪ್ ಅವರನ್ನು ಬಿಗ್ ಮನೆಯಲ್ಲಿ ಉಳಿಸಿದರು.ಅನಂತರ ತನಿಷಾ, ಸಂಗೀತಾ, ವಿನಯ್ ರವರನ್ನು ಸೇವ್ ಮಾಡಿದರು.

ತನಿಷಾ ವಿರುದ್ಧ ತಿರುಗಿ ಬಿದ್ದ ಡ್ರೋನ್ ಪ್ರತಾಪ್

ಭಾನುವಾರದ ಸಂಚಿಕೆಯಲ್ಲಿ ಸುದೀಪ್ ರವರು ಬಿಗ್ ಮನೆಯ ಸ್ಪರ್ಧಿಗಳ ಜೊತೆ ತಮಾಷೆ ಮಾಡುತ್ತ ಎಲ್ಲರನ್ನೂ ಮನರಂಜಿಸಿದರು. ಪ್ರತಿವಾರವು ವಿಭಿನ್ನ ರೀತಿಯ ಗೇಮ್ ಆಡಿಸುವ ಬಿಗ್ ಬಾಸ್, ಗೇಮ್ ಮೂಲಕವೇ ಅವರ ಅಭಿಪ್ರಾಯ ಹಾಗೂ ಭಾವನೆಗಳನ್ನು ಹೊರ ಹಾಕಿಸುತ್ತಾರೆ. ತುಕಾಲಿ ಸಂತೋಷ್ ಗುಂಪಿನ ಜೊತೆ ನೊಂದವರ ಗುಂಪಿನಲ್ಲಿ ಯಾರೆಲ್ಲಾ ಇದ್ದಾರೆ ಹಾಗೂ ಅವರ ಸ್ಥಾನ ಏನು ಅನ್ನೊದನ್ನು ತಮಾಷೆಗಾಗಿ ತೋರಿಸಿದ್ದು ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ.ಇದರಲ್ಲಿ ನೊಂದವರ ಗುಂಪಿನ ಅಧ್ಯಕ್ಷ ಕಾರ್ತಿಕ್, ಖಜಾಂಚಿ ತನಿಷಾ, ಉಪಾಧ್ಯಕ್ಷ ವರ್ತೂರ್ ಸಂತೋಷ್, ಕಾರ್ಯದರ್ಶಿ ಡ್ರೋನ್ ಪ್ರತಾಪ್ ಕಾನೂನು ಸಲಹೆಗಾರ ಸಿರಿ,ವ್ಯವಸ್ಥಾಪಕರು ನೀತು ವನಜಾಕ್ಷಿ ಹಾಗೂ ಗೌರವಧ್ಯಾಕ್ಷ ತುಕಾಲಿ ಸಂತೋಷ್.

ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ( Bigg boss Kannada captain) ಆಗಿರುವ ಸ್ಪರ್ಧಿಯೆ ಎಲಿಮೀನೆಟ್ ಆಗಿದ್ದಾರೆ, ಹೌದು ಬಿಗ್ ಬಾಸ್ ಸೀಸನ್ 10ನಲ್ಲಿ ಈ ರೀತಿ ಆಗಿದ್ದು ನೀತು ವನಜಾಕ್ಷಿರವರು ಈ ವಾರ ಅಧ್ಬುತವಾಗಿ ಕ್ಯಾಪ್ಟನ್ಸಿ ಟಾಸ್ಕ್ ಕಂಪ್ಲೀಟ್ ಮಾಡಿ ಗೆದ್ದು ಕ್ಯಾಪ್ಟನ್ ಆಗಿದ್ದರು. ಆದರಿದೀಗ ಬಿಗ್ ಮನೆಯಿಂದ ಈ ವಾರ ನಾಯಕರಾಗಿದ್ದವರೇ ಮೊದಲ ಬಾರಿಗೆ ಬಿಗ್ ಮನೆಯಿಂದ ಔಟ್ ಆಗಿದ್ದಾರೆ.‌ಇದರಿಂದ ವೀಕ್ಷಕರು ಕೂಡ ಶಾಕ್ ಆಗಿದ್ದಾರೆ ಹಾಗೂ ನೀತು ಹೊರ ಹೋಗಲಿದ್ದಾರೆ ಎಂದು ಕಿಚ್ಚ ಸುದೀಪ್ ಹೇಳಿದ ತಕ್ಷಣ ಡ್ರೋನ್ ಪ್ರತಾಪ್ ಕಣ್ಣೀರಾಕಿದ್ದಾರೆ. ಈ ಹಿಂದೆ ಕ್ಯಾಪ್ಟನ್ ಟಾಸ್ಕ್ ಆಡುವಾಗ ನೀತು ಗೆದ್ದಾಗ ನೀತು ಅವರನ್ನು ಎತ್ತಿಕೊಂಡು ಸಂತಸ ವ್ಯಕ್ತಪಡಿಸಿದ್ದರು ಡ್ರೋನ್ ಪ್ರತಾಪ್. ಇದೀಗ ನೀತು ಹೋಗುವಾಗ ಅಳುತ್ತಾ ಹೋಗಬೇಡಿ ಇಲ್ಲೆ ಇರಿ ಎಂದು ಕಣ್ಣೀರು ಹಾಕಿದ್ದು ನೀತು ಕಣ್ಣಲ್ಲು ನೀರು ಬರಿಸಿತು.

Puttakkana Makkalu Serial : ಕಂಠಿ ಸ್ನೇಹಾ ನಿಜಜೀವನದ ಕಿರು ಪರಿಚಯ

50 ದಿನಗಳು ಕೂಡ ಸಂಪೂರ್ಣ ಆಗಿರುವುದರಿಂದ ಹೊಸದಾಗಿ ಎರಡು ಸ್ಪರ್ಧಿಗಳು ಮನೆಗೆ ಎಂಟ್ರಿ ( bigg boss Kannada 10 wildcard entry) ಕೊಡಲು ರೆಡಿಯಾಗಿದ್ದಾರೆ.ಇನ್ನೂ ಅವರು ಕೂಡ ಜನಪ್ರಿಯರಾಗಿದ್ದು ಬಿಗ್ ಬಾಸ್ ಸ್ಪರ್ಧಿಗಳಿಗೆ ಟಕ್ಕರ್ ಕೊಡ್ತಾರ ಅಥವಾ ಅವರ ಮುಂದೆ ಡಮ್ಮಿ ಆಗ್ತಾರ ಕಾದು ನೋಡಬೇಕಿದೆ.ಬಿಗ್ ಬಾಸ್ ಹಾಗೂ ಸ್ಯಾಂಡಲ್ ವುಡ್ ಸಿನಿಮಾಗಳ ನಟ ನಟಿಯರ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳಲು ನಮ್ಮ ಪುಟವನ್ನು ಸಂಪೂರ್ಣ ನೋಡಿ, ಧನ್ಯವಾದಗಳು.

You may also like...

Leave a Reply

Your email address will not be published. Required fields are marked *

You cannot copy content of this page