ತನಿಷಾ ವಿರುದ್ಧ ತಿರುಗಿ ಬಿದ್ದ ಡ್ರೋನ್ ಪ್ರತಾಪ್
ಬಿಗ್ ಬಾಸ್ ಕನ್ನಡ ಸೀಸನ್10 ಶುರುವಾಗಿ ಇದೀಗ 5ನೇ ವಾರಕ್ಕೆ ಷೋ ಕಾಲಿಟ್ಟಿದೆ.ಅಕ್ಟೋಬರ್ 8ರಂದು ಅದ್ದೂರಿಯಾಗಿ ಗ್ರ್ಯಾಂಡ್ ಓಪನಿಂಗ್ ಆದ ಬಿಗ್ ಬಾಸ್ ಕನ್ನಡ ಆವೃತ್ತಿ 10 ಮೊದಲ ವಾರದಲ್ಲೇ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ.ಇನ್ನೂ ಈ ಕಾರ್ಯಕ್ರಮ ದಲ್ಲಿ ಡ್ರೋನ್ ಪ್ರತಾಪ್ ಕೂಡ ಭಾಗವಹಿಸಿದ್ದು ಷೋ ಶುರುವಾದಾಗ ನೆಗೆಟಿವ್ ಟಾಕ್ ಕೇಳಿ ಬಂದಿತ್ತು ತದನಂತರ ಕೆಲವು ಸಂಚಿಕೆಗಳು ಪ್ರಸಾರವಾದ ನಂತರ ನೆಗೆಟಿವ್ ಎಲ್ಲಾ ಪಾಸಿಟಿವ್ ಆಗಿ ಬದಲಾಗಿದ್ದೆ ರೋಚಕ. ಬಿಗ್ ಬಾಸ್ 10 ಆರಂಭದಲ್ಲಿ ಡ್ರೋನ್ ಪ್ರತಾಪ್ ಗೆ ಎಲ್ಲಾ ಸ್ಪರ್ಧಿಗಳು ಡ್ರೋನ್ ವಿಚಾರವಾಗಿ ಟಾರ್ಗೆಟ್ ಮಾಡಿ ವ್ಯಂಗ್ಯವಾಗಿ ಮಾತಾಡಿ ಬೇಸರ ಮಾಡುತ್ತಿದ್ದರು. ಏನೆಲ್ಲಾ ಬೇಸರ ಮಾಡಿದರು ಅದಕ್ಕೆಲ್ಲಾ ಪ್ರತಾಪ್ ರವರು ಸೌಮ್ಯ ಸ್ವಭಾವದಿಂದಲೇ ಮಾತನಾಡಿದ್ದು ಎಲ್ಲಾ ವೀಕ್ಷಕರಿಗೆ ಬಹಳ ಇಷ್ಟವಾಯಿತು ಇದರಿಂದ ಪ್ರತಾಪ್ ಗೆ ಜನಬೆಂಬಲ ಹೆಚ್ಚಾಯಿತು. ಜೊತೆಗೆ ಸಮಾಜಿಕ ಜಾಲತಾಣದಲ್ಲೂ ಡ್ರೋನ್ ಪ್ರತಾಪ್ ಹೆಸರಿನಲ್ಲಿ ಸಾಕಷ್ಟು ಫ್ಯಾನ್ಸ್ ಫೇಜ್ ಗಳು ಶುರುವಾಗಿ ಪ್ರತಾಪ್ ಬೆಂಬಲಕ್ಕೆ ನಿಂತಿವೆ.
ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ದಲ್ಲಿ ಡ್ರೋನ್ ಪ್ರತಾಪ್ ರವರು ಚೆನ್ನಾಗಿ ಟಾಸ್ಕ್ ಆಡುತ್ತಾ ಎಲ್ಲರೋಂದಿಗೆ ಬೆರೆತು ಬಿಗ್ ಮನೆಯಲ್ಲಿ ಮಿಂಚುತ್ತಿದ್ದಾರೆ. ಮೊದಲ ವಾರದಿಂದಲೂ ಮಹಿಳಾ ಸ್ಪರ್ಧಿಗಳಾದ ತನಿಷಾ ನಮ್ರತಾಗೌಡ, ಸಂಗೀತ ಶೃಂಗೇರಿ, ಸಿರಿ, ಭಾಗ್ಯಶ್ರೀ, ನೀತು ಜೊತೆ ದೀದಿ ಎಂದು ಕರೆಯುತ್ತಾ ಎಲ್ಲರಾ ಮನಸ್ಸಲ್ಲೂ ಸಹೋದರನ ಸ್ಥಾನವನ್ನು ಪಡೆದುಕೊಂಡಿದ್ದರು.
ವರ್ತೂರ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್
ಇಲ್ಲಿವಾರ್ಗೂ ಚೆನ್ನಾಗಿ ಇದ್ದ ತನಿಷಾ ಹಾಗು ಪ್ರತಾಪ್ ಮಧ್ಯ ಮುನಿಸು ಶುರುವಾದಂತೆ ಇದೆ. ಇದೀಗ 5ನೇ ವಾರದ ಮೊದಲ ದಿನವೇ ತನಿಷಾ ವಿರುದ್ದ ಮಾತಿನ ಮೂಲಕವೇ ತಿರುಗಿ ಬಿದ್ದಿದ್ದಾರೆ ಪ್ರತಾಪ್. ನಮ್ಮ ಟೀಮ್ ನಲ್ಲಿ ಇದ್ದುಕೊಂಡು ನನ್ನ ಬಗ್ಗೆ ಬೇರೆ ಟೀಮ್ ಜೊತೆ ನೆಗೆಟಿವ್ ಆಗಿ ಮಾತಾಡಿದ್ದೀರಿ ಎನ್ನುವುದು ಪ್ರತಾಪ್ ವಾದ. ಇದಕ್ಕೆ ಪ್ರತಿಕ್ರಿಯೆ ನೀಡಿದ ತನಿಷಾ ಇದನ್ನು ಬೆನ್ನಿಗೆ ಚೂರಿ ಹಾಕೋದು ಅನ್ತಾಂರೆ ಅಂತ ಹೇಳುತ್ತಾ ಪ್ರತಾಪ್ ವಿರುದ್ಧ ಗರಂ ಆಗಿದ್ದಾರೆ ಜೊತೆಗೆ ದೀದಿ ಸ್ಥಾನಕ್ಕೆ ಫುಲ್ ಸ್ಟಾಫ್ ಇಟ್ಟಿದ್ದಾರೆ. ಇನ್ನೂ ಈ ಸಂಚಿಕೆ ಇಂದು ಪ್ರಸಾರವಾಗಲಿದ್ದು ಎಲ್ಲರೂ ನೋಡಲು ಕಾತುರರಾಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10 ಎಲ್ಲರ ಗಮನ ಸೆಳೆದಿದ್ದು 24 ಗಂಟೆಗಳ ನೇರಪ್ರಸಾರ ವೀಕ್ಷಣೆ ಮಾಡಲು ಜಿಯೋ ಸಿನಿಮಾ ವೆಬ್ ಸೈಟ್ ಗೆ ಲಾಗಿನ್ ಮಾಡಿ ಉಚಿತವಾಗಿ ನೋಡಿ. ಈ ಸಲ ಬಿಗ್ ಬಾಸ್ ಷೋನಲ್ಲಿ ಡ್ರೋನ್ ಪ್ರತಾಪ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು ಅಭಿಮಾನಿ ಬಳಗವನ್ನೇ ಹೆಚ್ಚಿಸಿಕೊಂಡಂತೆ ಇದೆ.