Bigg boss Kannada: ವಿನಯ್ ನ ಟಾಸ್ಕ್ ನಿಂದ ಹೊರಗಿಟ್ಟ ನಮ್ರತಾ
Bigg boss Kannada season 10 ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ಹಂತಕ್ಕೆ ತಲುಪಲಿದೆ. ಇನ್ನೂ ಇವಾಗ ಬಿಗ್ ಮನೆಯಲ್ಲಿ ಉಳಿದಿರುವ 8 ಸ್ಪರ್ದಿಗಳು ಪ್ರತಾಪ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ಸಂಗೀತಾ, ನಮ್ರತಾ ಗೌಡ ,ತನಿಷಾ ,ವರ್ತೂರ್ ಸಂತೋಷ್ ಹಾಗೂ ತುಕಾಲಿ ಸಂತೋಷ್. ಎಲ್ಲಾ ಸ್ಪರ್ಧಿಗಳು ಫಿನಾಲೆ ಟಿಕೆಟ್ ಪಡೆಯಲು ಟಾಸ್ಕ್ ಗಳಲ್ಲಿ ಭಾಗವಹಿಸಲು ಮುಗಿಬಿದ್ದಿದ್ದಾರೆ. ಆದರೂ ಬಿಗ್ ಬಾಸ್ ನಿಯಮಗಳು ಸರ್ಧಿಗಳು ಅಂಕಗಳನ್ನು ಪಡೆಯಲು ಎಲ್ಲಾ ರೀತಿಯ ಮಾರ್ಗಗಳನ್ನು ಮಾಡಿಕೊಟ್ಟಿದೆ.ಅಂದರೆ ಸ್ಪರ್ಧಿಗಳು ಟಾಸ್ಕ್ ನಲ್ಲಿ ಭಾಗವಹಿಸದೆ ಇದ್ದರು ಕೂಡ ಯಾರು ಗೆಲ್ಲುತ್ತಾರೆ ಎಂಬುದನ್ನು ಊಹಿಸಿದರು ಅಂಕ ಗೆಲ್ಲಬಹುದು.
ಟಿಕೆಟ್ ಟು ಫಿನಾಲೆಯಲ್ಲಿ ಈಗಾಗಲೇ ಪ್ರತಾಪ್ ಹಾಗೂ ಸಂಗೀತಾರವರು ಎಲ್ಲರಿಗಿಂತಲೂ ಮುಂದೆ ಇದ್ದಾರೆ. ಮೊದಲ ಟಾಸ್ಕ್ ನಿಂದಲೂ ಎಷ್ಟು ಕೇಳಿಕೊಂಡರು ವಿನಯ್ ಹಾಗೂ ಕಾರ್ತಿಕ್ ಅವರಿಗೆ ಯಾರು ಟಾಸ್ಕ್ ಆಡಲು ಅವಕಾಶ ಕೊಟ್ಟಿಲ್ಲ.ಇನ್ನೂ ಮುಂದಿನ ಟಾಸ್ಕ್ ಗಳಲ್ಲಿ ನಮ್ರತಾ ಅವರು ವಿನಯ್ ಗೌಡರನ್ನು ಟಾಸ್ಕ್ ನಿಂದ ಹೊರಗಿಡುವ ಸನ್ನಿವೇಶ ಎದುರಾಗುತ್ತದೆ.ಆ ಸಮಯದಲ್ಲಿ ನಮ್ರತಾ ಗೌಡ ಸ್ವಲ್ಪವೂ ಯೋಚಿಸದೆ ಹಾಗೂ ಸ್ನೇಹಿತ ಎಂದು ಕೂಡ ಲೆಕ್ಕಿಸದೆ ವಿನಯ್ ಅವರನ್ನು ನಮ್ರತಾ ಹೊರಗಿಡುತ್ತಾರೆ.
ಇದರಿಂದ ಬೇಜಾರದ ವಿನಯ್ ನಮ್ರತಾ ಜೊತೆ ಮುನಿಸಿಕೊಂಡಿದ್ದಾರೆ. ಈ ಸಂದರ್ಭಗಳ ನಂತರ ನಮ್ರತಾ ಗೌಡ ಕೂಡ ಬೇಜಾರಾಗಿದ್ದಾರೆ, ಹೌದು ಬಿಗ್ ಬಾಸ್ ಶುರುವಾದಗಿನಿಂದ ತುಂಬಾ ಆತ್ಮೀಯ ರಾಗಿದ್ದ ನಮ್ರತಾ ಗೌಡ ಹಾಗೂ ವಿನಯ್ ಗೌಡ ನಡುವೆ ಇದೀಗ ಬಿರುಕು ಮೂಡಿದೆ. ಎಷ್ಟೇ ಆದರೂ ಎಲ್ಲವೂ ಟಾಸ್ಕ್ ನಿಂದ ಆಗಿದೆ ಅದರಿಂದ ಬಿಗ್ ಮನೆಯಲ್ಲಿ ಎಲ್ಲವೂ ಕೆಲವೇ ದಿನಗಳಲ್ಲಿ ಸರಿಯಾಗುತ್ತದೆ ಎನ್ನುತ್ತಾರೆ ಕೆಲವು ವೀಕ್ಷಕರು. ಇದಲ್ಲದೆ ಈ ವಾರ ಸಂಗೀತಾ ಹಾಗೂ ಪ್ರತಾಪ್ ರವರನ್ನು ಬಿಟ್ಟು ಎಲ್ಲರೂ ನಾಮಿನೇಟ್ ಆಗಿದ್ದಾರೆ. ತುಂಬಾ ವಾರಗಳ ನಂತರ ನಮ್ರತಾ ಗೌಡ ಇದೀಗ ನಾಮಿನೇಟ್ ಆಗಿರೋದು ನಮ್ರತಾ ರವರಿಗೆ ಬೇಸರವಾಗಿದೆ ಹಾಗೂ ಒಂದು ಕಡೆ ನಮ್ರತಾ ರವರು ಈ ವಾರ ನಾನೇ ಹೋಗುತ್ತಿನೇನೂ ಅಂತೆಲ್ಲಾ ಸಂಚಿಕೆಗಳಲ್ಲಿ ಮಾತಾಡಿದ್ದಾರೆ.
ವರ್ತೂರ್ ಹಾಗೂ ತುಕಾಲಿ ಸ್ನೇಹದಲ್ಲಿ ಮೂಡಿತು ಬಿರುಕು.!
ಬಿಗ್ ಬಾಸ್ ಸೀಸನ್ 10ರಲ್ಲಿ ಮೊದಲ ಸಂಚಿಕೆಗಳಿಂದಲೂ ತುಕಾಲಿ ಹಾಗೂ ವರ್ತೂರ್ ಸಂತೋಷ್ ರವರು ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ಇದೀಗ ಟಿಕೆಟ್ ಟು ಫಿನಾಲೆ ಟಾಸ್ಕ್ ಗಳಿಂದ ವರ್ತೂರ್ ಸಂತೋಷ್ ಹಾಗೂ ತುಕಾಲಿ ಸಂತೋಷ್ ಸ್ನೇಹದಲ್ಲಿ ಬಿರುಕು ಮೂಡಿದಂತಿದೆ. ಟಾಸ್ಕ್ ವಿಚಾರಗಳಿಂದ ಹಾಗೂ ಟಾಸ್ಕ್ ನಿಂದ ವರ್ತೂರ್ ರವರು ತುಕಾಲಿಯನ್ನು ಹೊರಗಿಟ್ಟ ಕಾರಣ ವರ್ತೂರ್ ವಿರುದ್ಧ ತುಕಾಲಿರವರು ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದ ಬಿಗ್ ಮನೆಯಲ್ಲಿ ವರ್ತೂರ್ ಹಾಗೂ ತುಕಾಲಿ ಜೊತೆ ಇರುವ ಸನ್ನಿವೇಶಗಳು ಕಡಿಮೆಯಾಗಿವೆ ಎಂದರು ತಪ್ಪಾಗಲ್ಲ. ಬಿಗ್ ಬಾಸ್ ಮನೆಯಲ್ಲಿ ವರ್ತೂರ್ ಹಾಗೂ ತುಕಾಲಿ ಸಂತು- ಪಂತು ಎಂಬ ಅಡ್ಡ ಹೆಸರುಗಳ ಮೂಲಕ ಪರಿಚಿತರಾಗಿರೋದು ತುಂಬಾ ವಿಶೇಷ.
ಬಿಗ್ ಬಾಸ್ ಫಿನಾಲೆಯನ್ನು ಈಗಾಗಲೇ ಎರಡು ವಾರಗಳ ಕಾಲ ಮುಂದೂಡಿದೆ ಬಿಗ್ ಬಾಸ್ ಟೀಮ್. ಇದೇ ಜನವರಿ ಕೊನೆಯ ವಾರಗಳಲ್ಲಿ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಇನ್ನೂ ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರ ಪಾಲಗಲಿದೆ ಹಾಗೂ 50 ಲಕ್ಷ ರೂಪಾಯಿ ಯಾರ ಕೈಸೇರಲಿದೆ ಎಂದು ಕಾದು ನೋಡಬೇಕಿದೆ.ಕರ್ನಾಟಕದ ಬಿಗ್ ಬಾಸ್ ವೀಕ್ಷಕರ ಪ್ರಕಾರ ಟಾಪ್ ಐದರಲ್ಲಿ ಪ್ರತಾಪ್ , ಸಂಗೀತಾ , ವಿನಯ್ ,ಕಾರ್ತಿಕ್ ಹಾಗೂ ವರ್ತೂರ್ ಬರುವ ಸಾಧ್ಯತೆ ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಡ್ರೋನ್ ಪ್ರತಾಪ್ ಹಾಗೂ ವರ್ತೂರ್ ಸಂತೋಷ್ ಅವರಿಗೆ ಅಭಿಮಾನಿ ಬಳಗ ಹೆಚ್ಚಾಗಿದೆ. ಇದರಿಂದ ಇವರು ಗೆಲ್ಲುವ ಸಾಧ್ಯತೆ ಕೂಡ ಕೆಲವರಲ್ಲಿ ಮೂಡಿದೆ.