Devil First Look : ಡಿಬಾಸ್ ಹುಟ್ಟುಹಬ್ಬಕ್ಕೆ ರಿಲೀಸ್

Spread the love

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರವಾದ D57 – ಡೆವಿಲ್ ( Devil – the hero ) ಸಿನಿಮಾ ಈಗಾಗಲೇ ಮುಹೂರ್ತ ಮುಗಿಸಿ ಶೂಟಿಂಗ್ ಶುರುವಾಗಿದೆ. ಕಾಟೇರ ಸಿನಿಮಾ ಅದ್ದೂರಿ ಯಶಸ್ಸು ಕಂಡು 50 ದಿನಗಳನ್ನು ಪೂರೈಸಿ ಈಗಾಗಲೇ ಓಟಿಟಿ ಗೆ ಕಾಲಿಟ್ಟು ಸಂಚಲನ ಮೂಡಿಸಿದೆ.ಹೌದು ಫೆಬ್ರವರಿ 9ರಂದು ಜೀ5 ಓಟಿಟಿ ಗೆ ಕಾಲಿಟ್ಟ ಕಾಟೇರ 100ಮಿಲಿಯನ್ ಗೂ ಹೆಚ್ಚು ಮಿನಿಟ್ಸ್ ಕಂಪ್ಲೀಟ್ ಮಾಡಿದೆ.ಇನ್ನೂ ಈ ಬೆನ್ನಲ್ಲೇ ಪೆಬ್ರವರಿ ಯಲ್ಲಿ ಡಿಬಾಸ್ ಹುಟ್ಟುಹಬ್ಬ ಇದ್ದು ಹುಟ್ಟುಹಬ್ಬದ ಸಂಭ್ರಮದಲ್ಲಿ ಡೆವಿಲ್ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಲಿದೆ. ಫೆಬ್ರವರಿ 15 ರಂದು ಮಧ್ಯರಾತ್ರಿ 11:59 ಕ್ಕೆ ಸರಿಗಮ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

ಡೆವಿಲ್ ಚಿತ್ರ ಡಿಬಾಸ್ ಸಿನಿ ಪ್ರಯಾಣದಲ್ಲಿ ಒಂದೊಳ್ಳೆ ವಿಭಿನ್ನ ಸಿನಿಮಾ ವಾಗಲಿದೆ. ಇನ್ನೂ ಈ ಚಿತ್ರ ಪರಭಾಷೆಯಲ್ಲೂ ಬಿಡುಗಡೆಯಾಗುವ ಸಾಧ್ಯತೆಯಿದೆ. ಅದು ಕೂಡ ಡಿಬಾಸ್ ಹುಟ್ಟುಹಬ್ಬದಂದು ಗೊತ್ತಾಗಲಿದೆ.ಈಗಾಗಲೇ ಡಿಬಾಸ್ ಬರ್ತಡೇ ಗೆ ಡಿಬಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.ನಟ ದರ್ಶನ್ ಮನೆ ಬಳಿ ತಯಾರಿ ಶುರುವಾಗಿದ್ದು ಮಧ್ಯರಾತ್ರಿಯಿಂದಲೇ ಊಟ ಕೂಡ ಏರ್ಪಡಿಸಲಾಗಿದೆ. ದರ್ಶನ್ ಮನವಿಯಂತೆ ಡಿಬಾಸ್ ಅಭಿಮಾನಿಗಳು ಕೇಕ್ ,ಹಾರ ,ಗಿಫ್ಟ್ ಬದಲು ಆಹಾರ ಸಾಮಾಗ್ರಿಗಳನ್ನು ತಂದು ಕೊಟ್ಟಿದ್ದಾರೆ ಹಾಗೂ ಬರ್ತಡೇ ದಿನ ಇನ್ನೂ ಅನೇಕ ಅಭಿಮಾನಿಗಳು ತಮ್ಮ ಕೈಲಿ ಆದಷ್ಟು ಸಾಮಾಗ್ರಿಗಳನ್ನು ತಂದು ಕೊಟ್ಟು ಕೈಜೋಡಿಸಲಿದ್ದಾರೆ.ಈ ಆಹಾರ ಸಾಮಾಗ್ರಿಗಳನ್ನು ನಟ ದರ್ಶನ್ ಕುದ್ದು ತಾವೆ ಅನಾಥ ಆಶ್ರಮ ಗಳಿಗೆ ತಲುಪಿಸಲಿದ್ದಾರೆ. ಇನ್ನೂ ಈ ಬಾರಿ ದರ್ಶನ್ ಬರ್ತಡೇ ದಿನದಂದು ಟನ್ ಗಟ್ಟಲೆ ಆಹಾರ ಸಾಮಾಗ್ರಿಗಳು ಡಿಬಾಸ್ ಗೋಡಾನ್ ಸೇರಲಿದೆ.

ಡಿಬಾಸ್ ಮುಂದಿನ ಸಿನಿಮಾ ಡೆವಿಲ್ ಸಿನಿಮಾಗೆ ಯಾರು ನಾಯಕಿಯಾಗುತ್ತಾರೆ ಎಂಬುದು ಸದ್ಯದಲ್ಲೇ ತಿಳಿಸಲಿದೆ ಅಂತೆ ಡೆವಿಲ್ ಚಿತ್ರತಂಡ. ಡೆವಿಲ್ ಚಿತ್ರವನ್ನು ತಾರಕ್ ಸಿನಿಮಾ ನಿರ್ದೇಶನ ಮಾಡಿದ್ದ ಪ್ರಕಾಶ್ ರವರು ನಿರ್ದೇಶನ ಮಾಡಲಿದ್ದಾರೆ.ಇನ್ನೂ ಈ ಚಿತ್ರದ ತಾರಾಗಣದ ಬಗ್ಗೆ ಡಿಬಾಸ್ ಬರ್ತಡೇ ದಿನ ನಿರ್ದೇಶಕ ಪ್ರಕಾಶ್ ಮಾತಾಡುವ ಸಾಧ್ಯತೆಯಿದೆ. ಈಗಾಗಲೇ ಬಂದಿರುವ ಮಾಹಿತಿ ಪ್ರಕಾರ ಡೆವಿಲ್ ಚಿತ್ರದ ಆಡಿಯೋ ರೈಟ್ಸ್ ಕೂಡ ಸರಿಗಮ ಆಡಿಯೋ ಕಂಪನಿ ತೆಗೆದುಕೊಂಡಿದೆ ಅಂತೆ.

ಡೆವಿಲ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಜೊತೆಗೆ ಬೇರೆ ಪ್ರೊಡಕ್ಷನ್ ಸಿನಿಮಾಗಳ ಪೋಸ್ಟರ್ ಬಿಡುಗಡೆಯಾಗಲಿದೆ. ಡೆವಿಲ್ ಚಿತ್ರ ತುಂಬಾ ಡಿಫರೆಂಟ್ ಇರಲಿದ್ದು ಟೀಸರ್ ಮೂಲಕವೇ ಸಿನಿಮಾದ ಸ್ಟೋರಿ ಏನಿರಬಹುದು ಎಂದು ಹಿಂಟ್ ಸಿಗಲಿದೆ. ಡೆವಿಲ್ ಚಿತ್ರವನ್ನು ಹೆಸರಾಂತ ಪ್ರೊಡಕ್ಷನ್ ಕಂಪನಿ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ಈ ಪ್ರೊಡಕ್ಷನ್ ಕಂಪನಿ ವಂಶಿ, ತಾರಕ್, ಮಿಲನ, ಹಾಗೂ ಇನ್ನೂ ಅನೇಕ ಸಿನಿಮಾಗಳ ಜೊತೆಗೆ ಕಿರುತೆರೆಯ ಸಾಕಷ್ಟು ಸೀರಿಯಲ್ ಗಳನ್ನೂ ನಿರ್ಮಾಣ ಮಾಡಿ ಯಶಸ್ಸು ಕಂಡಿದೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ, ಲಕ್ಷ್ಮೀ ಬಾರಮ್ಮ ಸೀರಿಯಲ್ ಅನ್ನು ಕೂಡ ಈ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿದೆ.

You may also like...

Leave a Reply

Your email address will not be published. Required fields are marked *

You cannot copy content of this page