ಗರಡಿ ಕ್ಲೈಮಾಕ್ಸ್ ನಲ್ಲಿ ಡಿಬಾಸ್ ಅಬ್ಬರ..!
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇದೀಗ D57 ಸಿನಿಮಾದ ಶೂಟಿಂಗ್ ಸಲುವಾಗಿ ತಯಾರಿಯಲ್ಲಿ ಇದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿ ಕಾಟೇರ ಸಿನಿಮಾ ಕೂಡ ಬಿಡುಗಡೆ ಸಿದ್ಧವಾಗುತ್ತಿದೆ. ಇನ್ನೂ ದೀಪಾವಳಿ ಹಬ್ಬಕ್ಕೆ ಕಾಟೇರ ಸಿನಿಮಾ ತಂಡದಿಂದ ಚಿತ್ರದ ಬಗ್ಗೆ ಏನಾದರೂ ಮಾಹಿತಿಯನ್ನು ನಿರ್ದೇಶಕ ತರುಣ್ ಸುಧೀರ್ ಹಂಚಿಕೊಳ್ಳಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಈ ನಡುವೆ ಅಭಿಮಾನಿಗಳು ಈಗಾಗಲೇ ಸೆಲೆಬ್ರೇಷನ್ ನಲ್ಲಿ ತೊಡಗಿದ್ದಾರೆ ಯಾಕೆಂದರೆ ಡಿಬಾಸ್ ಅತಿಥಿ ಪಾತ್ರದಲ್ಲಿ ನಟಿಸಿರುವ ಗರಡಿ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ವಿ ಕಾಣುತ್ತಿದೆ. ಗರಡಿ ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ಮೊದಲ ಬಾರಿಗೆ ಯಶಸ್ ಸೂರ್ಯ ಅಭಿನಯ ಮಾಡಿದ್ದಾರೆ.ಇನ್ನೂ ತಮ್ಮನ ಈ ಚಿತ್ರದಲ್ಲಿ ದರ್ಶನ್ ರವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಯಶಸ್ ರವರಿಗೆ ಬೆಂಬಲ ಕೊಟ್ಟು ಬೆನ್ನು ತಟ್ಟಿದ್ದಾರೆ ಡಿಬಾಸ್. ಸ್ಯಾಂಡಲ್ ವುಡ್ ನ ಹೊಸ ಕಲಾವಿದರಿಗೆ ಯಾವಾಗಲೂ ಬೆಂಬಲ ನೀಡುವ ದರ್ಶನ್ ಅತಿಥಿ ಪಾತ್ರ ಮಾಡುವ ಮೂಲಕವು ಹೊಸ ಯುವ ನಟರಿಗೆ ಪರೋಕ್ಷವಾಗಿ ಅವರ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದರೆ ತಪ್ಪಾಗಲ್ಲ.
ಗರಡಿ ಸಿನಿಮಾದ ಪ್ರೀಮಿಯರ್ ಷೋ ನಲ್ಲಿ ಭಾಗಿಯಾಗಿದ್ದ ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಡಿಬಾಸ್ ಎಂಟ್ರಿ ಬಗ್ಗೆ ಮಾತಾಡಿ ತುಂಬಾ ಖುಷಿಯನ್ನು ಹಂಚಿಕೊಂಡಿದ್ದಾರೆ. ಪ್ರೀಮಿಯರ್ ಷೋನಲ್ಲಿ ಭಾಗಿಯಾಗಿದ್ದ ಕಾಟೇರ ಸಿನಿಮಾದ ನಿರ್ದೇಶಕ ತರುಣ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ರವರು ಡಿಬಾಸ್ ನಟನೆ ಹಾಗೂ ಫೈಟ್ ಬಗ್ಗೆ ತುಂಬಾ ಹೊಗಳಿದ್ದಾರೆ. ಗರಡಿ ಚಿತ್ರದ ಕೊನೆಯ 20 ನಿಮಿಷಗಳ ದರ್ಶನ್ ಎಂಟ್ರಿಯನ್ನು ಮಿಸ್ ಮಾಡ್ಕೋಬೇಡಿ ಡಿಬಾಸ್ ಎಂಟ್ರಿಯೇ ತುಂಬಾ ಚೆನ್ನಾಗಿದೆ ಎಂದು ತರುಣ್ ಸುಧೀರ್ ಹೇಳಿದ್ದಾರೆ. ನಟ ರಮೇಶ್ ಅರವಿಂದ್ ಡಿಬಾಸ್ ಬಗ್ಗೆ ಹಾಗೂ ಅವರ ಎಂಟ್ರಿ ಬಗ್ಗೆ ಚಿಂದಿಯಾಗಿದೆ ಎಂದು ರಿಯಾಕ್ಷನ್ ಕೊಟ್ಟಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ ಹೀರೊ ಆಗಿದ್ದು ಹೇಗೆ ಗೊತ್ತಾ?
ಬಿಗ್ ಬಾಸ್ ಸ್ಪರ್ಧಿ ಪ್ರಥಮ್ ಕೂಡ ಗರಡಿ ಸಿನಿಮಾ ನೋಡಿ ಚಿತ್ರದ ಬಗ್ಗೆ ಮಾತಾಡಿದ್ದಾರೆ. ಯಶಸ್ ಸೂರ್ಯ ಚೆನ್ನಾಗಿ ನಟನೆ ಮಾಡಿದ್ದಾರೆ ಹಾಗೂ ಡಿಬಾಸ್ ದೃಶ್ಯಗಳು ಅಧ್ಬುತ ವಾಗಿದೆ ಡಿಬಾಸ್ ಅಭಿಮಾನಿಗಳಿಗೆ ಇದೊಂದು ಹಬ್ಬ ಎಂದು ಹೇಳಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ರವರೇ ಪೂರ್ಣ ನಾಯಕನ ಪಾತ್ರ ಮಾಡಬೇಕಿತ್ತಂತೆ ಆದರೆ ತಮಗೆ ರೆಡಿಯಾಗಿದ್ದ ಗರಡಿ ಸಿನಿಮಾ ಪ್ರಾಜೆಕ್ಟ್ ಅನ್ನು ಯಶಸ್ ಸೂರ್ಯಾಗೆ ಸಿಗುವಂತೆ ಡಿಬಾಸ್ ಮಾಡಿದ್ದಾರೆ ಎಂದು ಚಿತ್ರತಂಡದವರು ಸಂದರ್ಶನದಲ್ಲಿ ಹೇಳಿದ್ದಾರೆ. ಇನ್ನೂ ಡಿಬಾಸ್ ರವರನ್ನು ಈ ವರ್ಷ ಎರಡನೇ ಬಾರಿ ಬೆಳ್ಳಿಪರದೆ ಮೇಲೆ ನೋಡಿ ದರ್ಶನ್ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಇನ್ನೂ ಕಾಟೇರ ಸಿನಿಮಾದ ಬಿಡುಗಡೆ ದಿನಾಂಕ ತಿಳಿದರೆ ಡಿಬಾಸ್ ಅಭಿಮಾನಿಗಳು ಈಗಿನಿಂದಲೇ ಹಬ್ಬ ಮಾಡೋದಂತು ನಿಜ!
ಗರಡಿ ಸಿನಿಮಾ ಕೂಡ ರಾಜ್ಯಾದ್ಯಂತ ಅದ್ದೂರಿ ಪ್ರದರ್ಶನ ಕಾಣುತ್ತಿದ್ದು. ಮೈಸೂರು ಮಂಡ್ಯ ಭಾಗದಲ್ಲಿ ಗರಡಿ ಸಿನಿಮಾದ ಚಿತ್ರಮಂದಿರಗಳು ಹೌಸ್ ಫುಲ್ ಆಗ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಗರಡಿ ಸಿನಿಮಾಗೆ ಒಳ್ಳೆಯ ವಿಮರ್ಶೆ ಸಿಗುತ್ತಿದ್ದು ಸಿನಿಮಾ ಚೆನ್ನಾಗಿದೆ ಎಂದು ಪ್ರೇಕ್ಷಕರು ರಿಯಕ್ಟ್ ಮಾಡುತ್ತಿದ್ದಾರೆ. ನೀವು ಕೂಡ ಮರೆಯದೆ ಈ ಚಿತ್ರವನ್ನು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಭೇಟಿ ನೀಡಿ ತಪ್ಪದೆ ನೋಡಿ ಎಂಜಾಯ್ ಮಾಡಿ.