Devil – ಸದ್ದಿಲ್ಲದೆ ಡಿಬಾಸ್ ದರ್ಶನ್ D57 ಶೂಟಿಂಗ್ ಶುರು.!
ಕರುನಾಡ ಚಕ್ರವರ್ತಿ ಡಿ ಬಾಸ್ ದರ್ಶನ್ ರವರ ಸಿನಿಮಾಗಳೇ ಆಗೆ ಅಭಿಮಾನಿಗಳ ನಿರೀಕ್ಷೆಗೂ ಮೀರಿ ಸದ್ದಿಲ್ಲದೆ ಸೆಟ್ಟೇರುತ್ತವೆ. ಈ ಹಿಂದೆ ದರ್ಶನ್ ರವರು ಜೋಗಿ ಪ್ರೇಮ್ ಜೊತೆ ಮತ್ತೆ ಸಿನಿಮಾ ಮಾಡುತ್ತಾರೆ ಎನ್ನುವ ವಿಷಯ ಸರ್ಪ್ರೈಸ್ ಆಗಿ ಫ್ಯಾನ್ಸ್ಗೆ ತಿಳಿಯಿತು. ಈಗಾಗಲೇ ಕಾಟೇರ ಸಿನಿಮಾ ಶೂಟಿಂಗ್ ಮುಗಿಸಿರುವ ಡಿಬಾಸ್ ಮುಂದಿನ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇತ್ತಿಚಿಗಷ್ಟೇ ಬೆಂಗಳೂರಿನ ದೊಡ್ಡ ಗಣಪತಿ ದೇವಾಲಯದ ದೇವರ ಸಮ್ಮುಖದಲ್ಲಿ ದರ್ಶನ್ D57 ಸಿನಿಮಾದ ಮುಹೂರ್ತ ಸದ್ದಿಲ್ಲದೆ ನೆರವೇರಿದೆ.ಇನ್ನೂ ಸಿನಿಮಾ ಬಗ್ಗೆ ಕೆಲವು ವಿಷಯಗಳು ಬಹಿರಂಗವಾಗಿದೆ. ಅದೆನೆಂದು ತಿಳಿಯಲು ಮುಂದೆ ಕೊನೆವಾರ್ಗು ಓದಿ.
ಡಿಬಾಸ್ ರವರ ಮುಂದಿನ ಚಿತ್ರವನ್ನು ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶನ ಮಾಡಲಿದ್ದಾರೆ.ಮಿಲನ ಪ್ರಕಾಶ್ ರವರು ಈ ಹಿಂದೆ ದರ್ಶನ್ ಜೊತೆ ಜಗ್ಗುದಾದ ಹಾಗೂ ತಾರಕ್ ಸಿನಿಮಾಗಳನ್ನು ಮಾಡಿದ್ದಾರೆ. ದರ್ಶನ್ ಜೊತೆ ಕಾಮಿಡಿ ಓರಿಯೆಂಟ್ ಸಿನಿಮಾ ಜಗ್ಗುದಾದ ಮಾಡಿದ್ದ ಮಿಲನ ಪ್ರಕಾಶ್ ಆ ಸಿನಿಮಾ ಮೂಲಕ ತುಂಬಾ ವರ್ಷಗಳ ನಂತರ ದರ್ಶನ್ ರವರನ್ನು ಕಾಮಿಡಿ ಪಾತ್ರದಲ್ಲಿ ನಟನೆ ಮಾಡಿಸಿದ್ದರು. ಅನಂತರ ತಾರಕ್ ಸಿನಿಮಾ ಮೂಲಕ ಲವ್ ಮತ್ತು ಫ್ಯಾಮಿಲಿ ಡ್ರಾಮಾ ಮನರಂಜನೆಯ ಹಿಟ್ ನೀಡಿದ್ದ ಇವರು ಇದೀಗ ಮತ್ತೆ ಜೊತೆಯಾಗುತ್ತಿದ್ದಾರೆ. ಇನ್ನೂ ಈ ಸಿನಿಮಾ ಬಹಳ ಡಿಫರೆಂಟ್ ಆಗಿದ್ದು ಟೈಟಲ್ ಕೂಡ ಬಹಳ ಕುತೂಹಲ ಮೂಡಿಸುತ್ತದೆ.ಇದನ್ನು ಓದಲು ಕ್ಲಿಕ್ ಮಾಡಿ :Dboss – ನಟ ದರ್ಶನ್ ಡಿಬಾಸ್ ಆದ ಕಥೆ..!
ದರ್ಶನ್ ಹಾಗೂ ಮಿಲನ ಪ್ರಕಾಶ್ ರವರ D57 ಈ ಚಿತ್ರದ ಟೈಟಲ್ ಡೆವಿಲ್ – ದಿ ಹೀರೊ. ಇನ್ನೂ ಟೈಟಲ್ ನೋಡಿದ ಅಭಿಮಾನಿಗಳು ಸಹ ತುಂಬಾ ಖುಷಿಯಾಗಿದ್ದಾರೆ. ದರ್ಶನ್ ರವರು ಈ ಹಿಂದೆ ಸಂದರ್ಶನದಲ್ಲಿ ಹೇಳಿರುವಂತೆ ಒಂದು ಸಿನಿಮಾ ಬಿಡುಗಡೆ ಆಗುವತನಕ ಮುಂದಿನ ಸಿನಿಮಾಗಳ ಶೂಟಿಂಗ್ ಆಗಲಿ ಮುಹೂರ್ತವಾಗಲಿ ಆಗಲ್ಲ ಎಂದು. ಯಾಕೆಂದರೆ ಒಂದು ಸಿನಿಮಾ ರಿಲೀಸ್ ಆಗದೆ ಇನ್ನೂ ಇರುವಾಗಲೇ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ರೆ ಹಳೆ ಸಿನಿಮಾಗೆ ಸಮಸ್ಯೆ ಆಗುತ್ತೆ ಅನ್ನೊದು ನಟ ದರ್ಶನ್ ಅಭಿಪ್ರಾಯ. ಆದರೂ ಈ ನಡುವೆ D57 ಸಿನಿಮಾ ಮುಹೂರ್ತ ಆಗಿರೋದು ಎಲ್ಲರಲ್ಲೂ ಆಶ್ಚರ್ಯ ಮೂಡುವಂತೆ ಮಾಡಿದೆ.
ಕಾಟೇರ ಸಿನಿಮಾ ರಿಲೀಸ್ ಯಾವಾಗ?
ಡೆವಿಲ್ ದಿ ಹೀರೊ ಸಿನಿಮಾಗೆ ಕಾಂತಾರ ಸಿನಿಮಾದ ಸಂಗೀತ ನಿರ್ದೇಶಕರೇ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಮಿಲನ ಪ್ರಕಾಶ್ ರವರು ನಿರ್ದೇಶನ ಮಾಡಲಿದ್ದಾರೆ ಮತ್ತು ಇನ್ನುಳಿದ ಕಲಾವಿದರ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದೆ. ಡಿಸೆಂಬರ್ ನಲ್ಲೇ ಶೂಟಿಂಗ್ ಶುರುವಾಗುವ ಸಾಧ್ಯತೆ ಇದ್ದು ಡಿಬಾಸ್ ರವರ ಚಿತ್ರೀಕರಣ ಮುಂದಿನ ವರ್ಷ ಕಾಟೇರ ಬಿಡುಗಡೆಯ ನಂತರ ಶುರುವಾಗಲಿದೆ. ಡೆವಿಲ್ ಚಿತ್ರದ ಕಥೆ ಹಾಗೂ ಪ್ರಿ ಪ್ರೊಡಕ್ಷನ್ ಕೆಲಸಗಳು ಬಾಕಿ ಇರೋದ್ರಿಂದ ಕೆಲವು ತಿಂಗಳಲ್ಲೇ ಎಲ್ಲಾ ಫೈನಲ್ ಆಗುವ ಸಾಧ್ಯತೆ ಇದೆ. ಇನ್ನೂ ಡಿಬಾಸ್ ದರ್ಶನ್ ಅಭಿಮಾನಿಗಳು ಕಾಟೇರ ಸಿನಿಮಾಗಾಗಿ ಕಾಯುತ್ತಿದ್ದಾರೆ. ಕಾಟೇರ ಚಿತ್ರತಂಡದಿಂದ ಇನ್ನೂ ಬಿಡುಗಡೆ ದಿನಾಂಕ ಬಹಿರಂಗವಾಗಿಲ್ಲ. ಕಾಟೇರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಈ ಮೊದಲು ದಸರಾಗೆ ಸಿನಿಮಾ ಬರುತ್ತದೆ ಎಂದಿದ್ದರು ಆದರೆ ದಸರಾ ಮುಗಿದರೂ ಇನ್ನೂ ಸಾಂಗ್ಸ್ ಕೂಡ ರಿಲೀಸ್ ಆಗಿಲ್ಲ. ಈ ಚಿತ್ರ ಇನ್ನೂ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿದ್ದು ಫೈನಲ್ ಕಾಪಿ ರೆಡಿಯಾಗುತ್ತಿದಂತೆ ಬಿಡುಗಡೆ ದಿನಾಂಕ ಕೂಡ ಡಿಬಾಸ್ ಸೆಲೆಬ್ರಿಟಿಷ್ಗೆ ತಿಳಿಯಲಿದೆ. ಕಾಟೇರ ಬರುವುದಕ್ಕಿಂತ ಮೊದಲೇ ಡೆವಿಲ್ ಚಿತ್ರದ ಸರ್ಪ್ರೈಸ್ ನ್ಯೂಸ್ ಕೇಳಿದ ಅಭಿಮಾನಿಗಳು ಸಖತ್ ಕ್ರೇಜ್ ನಲ್ಲಿದ್ದಾರೆ.