ಧ್ರುವಸರ್ಜಾ ಮಕ್ಕಳ ಅದ್ದೂರಿ ನಾಮಕರಣ
ನಟ ಧ್ರುವಸರ್ಜಾ ಹಾಗೂ ಪ್ರೇರಣಾ ರವರು ಕೆಲವು ವರ್ಷಗಳ ಹಿಂದೆ ಪ್ರೀತಿಸಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನೂ ಈ ಜೋಡಿಯ ಬಾಳಿಗೆ ಮೊದಲು ಮಗಳ ಆಗಮನವಾಯಿತು ಹಾಗೂ ಅನಂತರ ಮಗ ಜನಿಸಿದ್ದಾನೆ.ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ತಮ್ಮ ಇಬ್ಬರು ಮಕ್ಕಳ ನಾಮಕರಣವನ್ನು ಒಟ್ಟಿಗೆ ಮಾಡಿ ಮುಗಿಸಿದ್ದಾರೆ. ಧ್ರುವಸರ್ಜಾ ಮಕ್ಕಳ ನಾಮಕರಣದಲ್ಲಿ ಯಾರೆಲ್ಲ ಬಂದಿದ್ದರು ಹಾಗೂ ಮಕ್ಕಳ ಹೆಸರೇನು ಎಂದು ತಿಳಿದುಕೊಳ್ಳಲು ಪೂರ್ತಿಯಾಗಿ ಓದಿ.

ಧ್ರುವಸರ್ಜಾ ಮತ್ತು ಪ್ರೇರಣಾ ದಂಪತಿ ತಮ್ಮ ಮಗಳಿಗೆ ರುದ್ರಾಕ್ಷಿ ಡಿ ಸರ್ಜಾ ಹಾಗೂ ಮಗನಿಗೆ ಹಯಗ್ರೀವ ಡಿ ಸರ್ಜಾ ಎಂದು ತುಂಬಾ ವಿಭಿನ್ನವಾಗಿ ಹೆಸರಿಟ್ಟು ನಾಮಕರಣ ಮಾಡಿದ್ದಾರೆ. ಇನ್ನೂ ಧ್ರುವಸರ್ಜಾ ದಂಪತಿ ಈ ಹೆಸರುಗಳನ್ನು ತುಂಬಾ ಯೋಚನೆ ಮಾಡಿ ಹಾಗೂ ತುಂಬಾ ಸಮಯ ತೆಗೆದುಕೊಂಡು ಇಟ್ಟಿದ್ದಾರೆ.ನಾಮಕರಣ ಸಮಾರಂಭದಲ್ಲಿ ಕೆಡಿ ಚಿತ್ರತಂಡದ ಕೆಲವು ಕಲಾವಿದರು ಕೂಡ ಭಾಗಿಯಾಗಿದ್ದರು. ಕನ್ನಡದ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಜೋಗಿ ಪ್ರೇಮ್ ಕೂಡ ಪತ್ನಿ ರಕ್ಷಿತಾ ಜೊತೆ ಭಾಗಿಯಾಗಿ ಧ್ರುವಸರ್ಜಾ ಮಕ್ಕಳಿಗೆ ಶುಭ ಹಾರೈಸಿದ್ದಾರೆ. ನಟಿ ಮೇಘನಾರಾಜ್ ಮಗ ರಾಯನ್ ರಾಜ್ ಸರ್ಜಾ ಜೊತೆ ಧ್ರುವಸರ್ಜಾ ಮಕ್ಕಳ ನಾಮಕರಣ ಸಮಾರಂಭದಲ್ಲಿ ಭಾಗಿಯಾಗಿದ್ದು ತುಂಬಾ ವಿಶೇಷ. ಇನ್ನೂ ಈ ಸಮಯದಲ್ಲಿ ನಟಿ ರಕ್ಷಿತಾ ಹಾಗೂ ಪ್ರೇಮ್ ರವರು ಮೇಘನಾರಾಜ್ ಮಗನನ್ನು ಮುದ್ದಾಡಿ ಖುಷಿಪಟ್ಟರು.

ಮಕ್ಕಳ ನಾಮಕರಣ ಖುಷಿಯಲ್ಲಿ ಮಾತಾಡಿದ ಧ್ರುವಸರ್ಜಾ ಮಕ್ಕಳ ಹೆಸರುಗಳ ಬಗ್ಗೆ ಹಾಗೂ ದಿನದ ಬಗ್ಗೆ ವಿಶೇಷವಾಗಿ ಮಾತಾಡಿ ತಮ್ಮ ಖುಷಿಯನ್ನು ಹಂಚಿಕೊಂಡರು. ಸಮಾರಂಭದಲ್ಲಿ ಕೆಲವೆ ಕೆಲವು ಆಪ್ತರು ಹಾಗೂ ಸರ್ಜಾ ಕುಟುಂಬ ವರ್ಗದವರು ಮಾತ್ರ ಬಾಗಿಯಾಗಿದ್ದರು. ನಟ ಅರ್ಜುನ್ ಸರ್ಜಾ ಕುಟುಂಬದ ಜೊತೆ ಮಕ್ಕಳ ನಾಮಕರಣ ಸಮಾರಂಭದಲ್ಲಿ ಹಾಜರಾಗಿದ್ದರು. ಬಹುದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ತಮ್ಮ ನೆಚ್ಚಿನ ನಟನ ಮಕ್ಕಳ ಹೆಸರು ತಿಳಿದು ಖುಷಿಪಟ್ಟರು. ಸಮಾಜಿಕ ಜಾಲತಾಣದಲ್ಲಿ ನಟ ಧ್ರುವಸರ್ಜಾ ಮಕ್ಕಳ ನಾಮಕರಣದ ಫೋಟೊ ಹಾಗೂ ವಿಡಿಯೋ ಭಾರಿ ವೈರಲ್ ಆಗುತ್ತಿವೆ. ಕೆಲವು ದಿನಗಳ ಹಿಂದೆ ಅಷ್ಟೇ ಮಗಳ ಬರ್ತಡೇ ಕೂಡ ಬಹಳ ಸಂಭ್ರಮದಿಂದ ಮಾಡಿದ್ದರು. ಇದೀಗ ಮಗ ಹಾಗೂ ಮಗಳ ಹೆಸರನ್ನು ಕೂಡ ಬಹಳ ಅದ್ದೂರಿ ಸಮಾರಂಭದಲ್ಲಿ ರಿವಿಲ್ ಮಾಡಿದ್ದಾರೆ.