Drone prathap : ವೀಕ್ಷಕರ ನಂಬಿಕೆ ಕಳೆದುಕೊಂಡ್ರಾ ಪ್ರತಾಪ್.?
ಕಿರುತೆರೆಯ ಬಿಗ್ ಬಾಸ್ ಷೋ ಶುರುವಾಗಿ 50ದಿನಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.ಈ ಬಾರಿಯ 10ನೇ ಸೀಸನ್ ನಲ್ಲಿ ಭಾಗವಹಿಸಿರುವ ಸ್ಪರ್ಧಿಗಳಲ್ಲಿ ಕೆಲವು ಸ್ಪರ್ಧಿಗಳು ಕೆಲವೇ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರು ಏನಾದರೂ ಎಲಿಮೀನೆಟ್ ಆದರೆ ಭಾಗಶಃ 80% ಜನರು ಈ ಬಾರಿಯ ಬಿಗ್ ಬಾಸ್ ಷೋ ನೋಡುವುದೇ ಇಲ್ಲ.ಅದರಲ್ಲೂ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರೋದು ಡ್ರೋನ್ ಪ್ರತಾಪ್ ಹಾಗೂ ವರ್ತೂರ್ ಸಂತೋಷ್. ಮೊದಲ ವಾರದಲ್ಲೇ ಸಿಂಪತಿ ಗಿಟ್ಟಿಸಿಕೊಂಡ ಪ್ರತಾಪ್ ಜನರ ಆಲೋಚನೆ ಅನ್ನೇ ಬದಲಾಯಿಸಿದ್ದಾನೆ ಅಂದರೆ ತಪ್ಪಾಗಲ್ಲ.ಹೌದು ಕೆಲವು ವರ್ಷಗಳ ಹಿಂದೆ ಕರ್ನಾಟಕ ಜನತೆಗೆ ಭಾಷಣ ಮಾಡುವಾಗ ಮಾತಿನ ಬರದಲ್ಲಿ ಮಾತಾಡಿದ ಕೆಲವು ಸಂಭಾಷಣೆ ಹಾಗೂ ಸ್ಪೂರ್ತಿದಾಯಕ ಕಥೆಗಳು ನಿಜ ಎಂದು ಬಿಂಬಿಸಿ ಹೇಳಿ ಕೊಂಡಿದ್ದರು. ಅದರ ಜೊತೆಗೆ ಸಾಕಷ್ಟು ಗಣ್ಯರಿಂದ ದೇಣಿಗೆ ಮತ್ತು ಅನುದಾನವನ್ನು ಪಡೆದುಕೊಂಡಿದ್ದರು.
ಇದಲ್ಲದೇ ಹಲವು ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದ್ದರು.ಇದರಿಂದ ಎಲ್ಲರೂ ಈ ಹುಡುಗ ಏನೋ ಸಾಧನೆ ಮಾಡಿದ್ದಾನೆ ಇವನನ್ನು ನೋಡಿ ಎಲ್ಲರೂ ಕಲಿಯಬೇಕು ಎನ್ನುತ್ತಿದ್ದರು. ದಿನ ಕಳೆದಂತೆ ಡ್ರೋನ್ ಪ್ರತಾಪ್ ಹೇಳಿರುವ ವೈಯಕ್ತಿಕ ಕಥೆ ನಿಜ ಅಲ್ಲ ಅದೆಲ್ಲಾ ಸುಳ್ಳು. ಪ್ರತಾಪ್ ಯಾವ ಸಾಧನೆಯು ಮಾಡಿಲ್ಲ ಎಲ್ಲರನ್ನೂ ಮೂರ್ಖರನ್ನಾಗಿ ಮಾಡಿದ್ದಾನೆ ಎಂದು ಖಾಸಗಿ ಮಾಧ್ಯಮ ಫ್ಯಾಕ್ಟ್ ಚೇಕ್ ಮೂಲಕ ವರದಿ ಮಾಡಿತು.ಅಂದಿನಿಂದ ಜನರು ಪ್ರತಾಪ್ ಗೆ ಕಿಡಿಕಾರಿದರು ಅನಂತರ ಈ ವರ್ಷ ಬಿಗ್ ಬಾಸ್ ಷೋಗೆ ಹೋದಮೇಲೆ ಎಲ್ಲರ ಗಮನ ಸೆಳೆದಿದ್ದಾರೆ.ಜೊತೆಗೆ ಎಲ್ಲರ ಮನಸ್ಸನ್ನು ಕೂಡ ಕೆಲವೇ ದಿನಗಳಲ್ಲಿ ಗೆದ್ದಿದ್ದಾರೆ.ಜನರು ಕೂಡ ಹಳೆಯದನ್ನು ಮರೆತು ಪ್ರತಾಪ್ ಗೆ ಮತ್ತೊಂದು ಚಾನ್ಸ್ ಕೊಟ್ಟಿದ್ದಾರೆ.

ಮೊದಲ ದಿನದಿಂದ 50 ದಿನಗಳ ವರೆಗೆ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡು ಗ್ರಾಫ್ ಮೇಲೆರುತ್ತಿತ್ತು ಆದರೆ ಇದೀಗ ಪ್ರತಾಪ್ 50ದಿನಗಳ ಬಳಿಕ ಗ್ರಾಫ್ ಡೌನ್ ಆಗುತ್ತಿರುವ ರೀತಿ ಕಾಣುತ್ತಿದೆ. ಯಾಕೆಂದರೆ ಈ ವಾರ ಟಾಸ್ಕ್ ಆಡಲು ಎರಡು ಟೀಮ್ ಗಳ ಅವಶ್ಯಕತೆ ಇರುತ್ತದೆ ಜೊತೆಗೆ ಇಬ್ಬರು ಕ್ಯಾಪ್ಟನ್ ಕೂಡ ಬೇಕಾಗಿರುತ್ತದೆ. ಅದರಂತೆ ಮನೆಯವರ ಬಳಿ ಕೇಳಿಕೊಂಡು ಅನಂತರ ಮನೆಯವರ ಹೆಚ್ಚಿನ ಮತಗಳಿಂದ ಪ್ರತಾಪ್ ಹಾಗೂ ಮೈಕಲ್ ಕ್ಯಾಪ್ಟನ್ ಆಗುತ್ತಾರೆ. ಪ್ರತಾಪ್ ತಮ್ಮ ತಂಡಕ್ಕೆ ಮಣ್ಣಿನ ಮಕ್ಕಳು ಹಾಗೂ ಮೈಕಲ್ ತಮ್ಮ ತಂಡಕ್ಕೆ ವಿಕ್ರಾಂತ್ ಎಂದು ಹೆಸರಿಟ್ಟಿಕೊಳ್ಳುತ್ತಾರೆ. Bigg boss Kannada 10 : 50ನೇ ದಿನ ಬಿಗ್ ಮನೆಯಲ್ಲಿ ಸಂಭ್ರಮ
ಬಿಗ್ ಬಾಸ್ ನಲ್ಲಿ ಈ ವಾರ ಟಾಸ್ಕ್ ಗಳು ಶುರುವಾಗುವುದಕ್ಕೂ ಮೊದಲು ಟೀಮ್ ಸದಸ್ಯರ ಆಯ್ಕೆ ಆಗುತ್ತದೆ. ಆ ಸಂದರ್ಭದಲ್ಲಿ ನಮ್ರತಾ ಗೌಡ ತುಂಬಾ ಖುಷಿಯಿಂದ ಪ್ರತಾಪ್ ತಂಡಕ್ಕೆ ಸೇರಿಕೊಳ್ಳುತ್ತಾರೆ.ಅದರಂತೆ ಎಲ್ಲರೂ ಜಾಸ್ತಿ ಸದಸ್ಯರು ಪ್ರತಾಪ್ ತಂಡಕ್ಕೆ ಸೇರಿದ ಪರಿಣಾಮ ಎದುರು ತಂಡಕ್ಕಿಂತ ಒಬ್ಬರು ಜಾಸ್ತಿ ಸದಸ್ಯ ಮಣ್ಣಿನ ಮಕ್ಕಳು ತಂಡದಲ್ಲಿ ಇರುತ್ತಾರೆ. ಅಂತ ಸಂದರ್ಭದಲ್ಲಿ ಬಿಗ್ ಬಾಸ್ ನಿಮ್ಮ ತಂಡದಲ್ಲಿ ಚರ್ಚಿಸಿ ಒಬ್ಬ ಸ್ಪರ್ಧಿಯನ್ನು ತಂಡದಿಂದ ಹೊರಗೆ ಹಾಕಲು ಹೇಳುತ್ತಾರೆ. ನಂತರ ಎಲ್ಲರೂ ಚರ್ಚೆ ಮಾಡಿ ಪ್ರತಾಪ್ ನಿರ್ಧಾರದ ಮೇಲೆ ಬಿಡುತ್ತಾರೆ ಅನಂತರ ಪ್ರತಾಪ್ ಎಲ್ಲರಿಗೂ ಶಾಕ್ ಆಗುವ ರೀತಿಯಲ್ಲಿ ತಮ್ಮ ನಿರ್ಧಾರವನ್ನು ಹೇಳುತ್ತಾರೆ. ಪ್ರತಾಪ್ ಕಾರ್ತಿಕ್ ಮಹೇಶ್ ಅವರನ್ನು ತಂಡದಿಂದ ಹೊರಹಾಕುತ್ತೇವೆ ಬಿಗ್ ಬಾಸ್ ಎಂದಾಗ ಪ್ರತಾಪ್ ತಂಡದವರೇ ಒಂದು ಕ್ಷಣ ಶಾಕ್ ಆಗಿ ನಿರಾಶೆಯಾದರು.

ಎರಡು ತಂಡದಿಂದ ಹೊರಗುಳಿದ ಕಾರ್ತಿಕ್ ಅವರಿಗೆ ಬಿಗ್ ಬಾಸ್ ಟಾಸ್ಕ್ ಗಳ ಉಸ್ತುವಾರಿ ನೋಡಿಕೊಳ್ಳಲು ಹೇಳುತ್ತಾರೆ. ನಂತರ ಗೇಮ್ ಶುರುವಾಗುತ್ತವೆ ಮೊದಲ ಟಾಸ್ಕ್ನಲ್ಲಿ ಪ್ರತಾಪ್ ತಂಡ ಸೋತ ಪರಿಣಾಮ ತಮ್ಮ ತಂಡದಿಂದಲೇ ಒಬ್ಬರನ್ನು ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರಗಿಡುವ ಪರಿಸ್ಥಿತಿ ಎದುರಾಗುತ್ತದೆ. ಆ ಸಂದರ್ಭದಲ್ಲಿ ಪ್ರತಾಪ್ ಡೈರೆಕ್ಟ್ ಆಗಿ ನಮ್ರತಾ ಗೌಡರನ್ನು ಹೊರಗಿಡುತ್ತಾರೆ. ಇದರಿಂದ ನಮ್ರತಾಗೌಡ ಪ್ರತಾಪ್ ವಿರುದ್ಧ ಬೇಸರಗೊಳ್ಳುತ್ತಾರೆ. ಪ್ರತಾಪ್ ಮಾಡಿದ ಈ ನಿರ್ಧಾರಗಳು ಕೆಲವು ವೀಕ್ಷಕರಿಗೆ ಸಾಕಷ್ಟು ತಲೆ ಕೆಡಿಸಿದೆ ಹಾಗೂ ಇನ್ನೂ ಕೆಲವು ಬಿಗ್ ಬಾಸ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ ಇದರಿಂದ ಪ್ರತಾಪ್ ಜನರ ನಂಬಿಕೆ ಕಳೆದುಕೊಂಡ್ರ ಅನ್ನುವ ಪ್ರಶ್ನೆ ಮೂಡಿದೆ.
ಬಿಗ್ ಬಾಸ್ ಷೋನ ಕೆಲವು ವೀಕ್ಷಕರು ಪ್ರತಾಪ್ ಸರಿಯಾಗೆ ಆಟವಾಡುತ್ತಿದ್ದಾನೆ ಅನ್ನುವ ವರ್ಗವು ಇರೋದ್ರಿಂದ ಪ್ರತಾಪ್ ಒಳ್ಳೆಯ ಗೇಮ್ ಪ್ಲೇಯರ್ ಆಗಿದ್ದಾರೆ. ದಿನದಿಂದ ದಿನಕ್ಕೆ ಬರುವ ಕೆಲವು ಟಾಸ್ಕ್ ಗಳು ಹಾಗೂ ಅವು ರಚನೆ ಆಗಿರುವ ಪ್ರಕಾರ ಎಲ್ಲರ ಮನಸ್ಥಿತಿ ಹಾಗೂ ನಡತೆಗಳು ಬದಲಾಗುತ್ತದೆ. ಇದರಿಂದ ಸಾಮಾನ್ಯ ಜನರು ಕೂಡ ಒಬ್ಬರನ್ನು ಅರ್ಥ ಮಾಡಿಕೊಳ್ಳಲು ಅಷ್ಟಾಗಿ ಸಾಧ್ಯವಿಲ್ಲ ಎನ್ನುವುದು ಅಷ್ಟೇ ಸತ್ಯ. ಮುಂದಿನ ದಿನಗಳಲ್ಲಿ ಪ್ರತಾಪ್ ಹೇಗೆ ತಮ್ಮ ಗೇಮ್ ಆಡುತ್ತಾರೆ ಎನ್ನುವುದನ್ನು ಕಾದು ನೋಡೋಣ. ಈಗಾಗಲೇ ಸಮಾಜಿಕ ಜಾಲತಾಣದಲ್ಲಿ ಪ್ರತಾಪ್ ಅವರೇ ಬಿಗ್ ಬಾಸ್ 10ರ ವಿಜೇತ ಎಂದು ಪೋಸ್ಟ್ ಹಾಕುತ್ತಿದ್ದಾರೆ. ಆದರೆ ಯಾರು ಗೆಲ್ಲುತ್ತಾರೆ ಎನ್ನುವ ಪ್ರಶ್ನೆಗೆ ಫಿನಾಲೆಯಲ್ಲಿ ಉತ್ತರ ಸಿಗಲಿದೆ.
ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಹಿಂದಿನ ಎಲ್ಲಾ ಒಂಭತ್ತು ಸೀಸನ್ ಗಳಿಗಿಂತಲೂ ಹೆಚ್ಚಿನ ಟಿವಿಆರ್ ಅನ್ನೂ ಪಡೆದುಕೊಳ್ಳುವ ಮೂಲಕ ಬಿಗ್ ಬಾಸ್ ಷೋ ದಾಖಲೆ ಬರೆದಿದೆ.ಈ ಸಲ ಹ್ಯಾಪಿ ಬಿಗ್ ಬಾಸ್ ಆಗಿರೋದ್ರಿಂದ ಸಾಕಷ್ಟು ಬದಲಾವಣೆ ಮಾಡಿಕೊಂಡಿದೆ ಬಿಗ್ ಬಾಸ್ ಟೀಮ್ ಹಾಗೂ ಬಿಗ್ ಮನೆಯಲ್ಲಿ ಅಷ್ಟೇನು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುವಂತೆ ಮಾಡಿಲ್ಲ. ಇದರಿಂದ ಸ್ಪರ್ಧಿಗಳು ಕೂಡ ಈ ಸೀಸನ್ ನಲ್ಲಿ ಅಷ್ಟೇನು ಶಿಕ್ಷೆಗೆ ಗುರಿಯಾಗಿಲ್ಲ.ಈ ಬಾರಿಯ ಹ್ಯಾಪಿ ಬಿಗ್ ಬಾಸ್ ಭಾರೀ ಜನಪ್ರಿಯತೆ ಪಡೆದುಕೊಂಡಿದೆ.