ಗಿಚ್ಚಿ ಗಿಲಿಗಿಲಿ ಷೋಗೆ ಎಂಟ್ರಿ ಕೊಟ್ಟ ಡ್ರೋನ್ ಪ್ರತಾಪ್
ಬಿಗ್ ಬಾಸ್ ಕನ್ನಡ ಸೀಸನ್ ೧೦ ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ಡ್ರೋನ್ ಪ್ರತಾಪ್ ( Drone Prathap ) ಇದೀಗ ಕಿರುತೆರೆಯ ಜನಪ್ರಿಯ ಕಾಮಿಡಿ ರಿಯಾಲಿಟಿ ಷೋ ಆಗಿರುವ ಗಿಚ್ಚಿ ಗಿಲಿಗಿಲಿ ಸೀಸನ್3 ಗೆ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ. ಫೆಬ್ರವರಿ 1ರಂದು ಶೂಟಿಂಗ್ ಶುರುವಾಗಿದ್ದು ಶೂಟಿಂಗ್ ದಿನದಂದೇ ಷೋನ ವಿಶೇಷತೆಗಳನ್ನು ಸುದ್ದಿಗೋಷ್ಠಿ ಮೂಲಕ ಗಿಚ್ಚಿ ಗಿಲಿಗಿಲಿ ತಂಡ ಹಂಚಿಕೊಂಡಿದೆ.ಇನ್ನೂ ಈ ಕಾರ್ಯಕ್ರಮ ಇದೇ ಪೆಬ್ರವರಿ 3 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
ಗಿಚ್ಚಿ ಗಿಲಿಗಿಲಿ ಷೋ ಬಗ್ಗೆ ಮಾತಾಡಿದ ಷೋನ ತೀರ್ಪುಗಾರರಾದ ಸಾಧುಕೋಕಿಲ , ಶ್ರುತಿ ಹಾಗೂ ಇದೀಗ ಹೊಸದಾಗಿ ತಂಡಕ್ಕೆ ಸೇರಿಕೊಂಡಿರುವ ಕೋಮಲ್ ರವರು ಷೋ ಬಗ್ಗೆ ಮಾತಾಡಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.Gicchi Giligili comedy reality show ನಿರೂಪಕರಾಗಿರುವ ನಿರಂಜನ್ ದೇಶಪಾಂಡೆ ಮಾತಾಡುತ್ತ ಈ ಷೋನಲ್ಲಿ ಡ್ರೋನ್ ಪ್ರತಾಪ್ ಕೂಡ ಇರಲಿದ್ದಾರೆ ಎಂದು ತಿಳಿಸಿದರು. ಗಿಚ್ಚಿ ಗಿಲಿಗಿಲಿ ಷೋ ಫಾರ್ಮೆಟ್ ಇರೋದೆ ಹಾಗೆ ಆಕ್ಟರ್ ಜೊತೆ ನಾನ್ ಆಕ್ಟರ್ ಕಾಮಿಡಿ ನಟನೆ ಮಾಡೋದು. ಡ್ರೋನ್ ಪ್ರತಾಪ್ ಕೂಡ ಮಾಡ್ತರೆ ಅಂತ ಹೋಳೊಕೆ ಇಷ್ಟ ಪಡ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಗ್ ಬಾಸ್ ಷೋನಲ್ಲಿ ಡ್ರೋನ ಪ್ರತಾಪ್ ಬಗ್ಗೆ ಕೆಟ್ಟದಾಗಿ ಮಾತಾಡಿದ್ದ ಇಶಾನಿ ಕೂಡ ಗಿಚ್ಚಿ ಗಿಲಿಗಿಲಿ ಷೋನಲ್ಲಿ ಕಾಣಿಸಿಕೊಳ್ಳುತ್ತಿರೋದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಇನ್ನೂ ಇಶಾನಿಗೆ ಡ್ರೋನ್ ಪ್ರತಾಪ್ ಜೋಡಿ ಎಂದು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದೆಲ್ಲಾ ಸುಳ್ಳು ಡ್ರೋನ್ ಪ್ರತಾಪ್ ಹಾಗೂ ಇಶಾನಿ ಇಬ್ಬರು ನಾನ್ ಆಕ್ಟರ್ ಆಗಿರೋದ್ರಿಂದ ಇಬ್ಬರು ಜೋಡಿ ಆಗೋದು ಸ್ವಲ್ಪ ಡೌಟ್. ಈ ಇಬ್ಬರೂ ಬೇರೆ ಕಾಮಿಡಿ ಆಕ್ಟರ್ ಜೊತೆ ಜೋಡಿಯಾಗೋದು ಪಕ್ಕಾ ಆದರೆ ಇವರಿಗೆ ಯಾರು ಜೋಡಿಯಾಗುತ್ತಾರೆ ಎಂದು ವೀಕೆಂಡ್ ಸಂಚಿಕೆಯಲ್ಲಿ ಕಾದು ತಿಳಿದುಕೊಳ್ಳಬೇಕಿದೆ.ಇವರ ಜೊತೆಗೆ ತುಕಾಲಿ ಸಂತೋಷ್ ಹಾಗೂ ಅವರ ಪತ್ನಿ ಕೂಡ ಗಿಚ್ಚಿ ಗಿಲಿಗಿಲಿ ಕಾಮಿಡಿ ಷೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೆಲ್ಲರ ಕಾಮಿಡಿ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.
ಬಿಗ್ ಬಾಸ್ ಷೋನಲ್ಲಿ ಡಾನ್ಸ್ ಮಾಡುವ ಮೂಲಕ ಜಾಸ್ತಿ ಸಕ್ರಿಯರಾಗಿದ್ದ ಡ್ರೋನ್ ಇದೀಗ ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಡಾನ್ಸ್ ಮೂಲಕವೇ ಎಂಟ್ರಿ ಕೊಡಲಿದ್ದಾರೆ. ಬಿಗ್ ಬಾಸ್ ನಿಂದ ಬಂದ ಬಳಿಕ ಜಾಸ್ತಿ ಅಭಿಮಾನಿಗಳ ಪ್ರೀತಿಕಂಡು ಡ್ರೋನ್ ಪ್ರತಾಪ್ ಮೂಕವಿಸ್ಮಿತರಾಗಿದ್ದಾರೆ. ಈಗಾಗಲೇ ಹಲವು ಸಂದರ್ಶನದಲ್ಲಿ ಮಾತಾಡಿರುವ ಪ್ರತಾಪ್ ರವರು ಅಭಿಮಾನಿಗಳ ಪ್ರೀತಿಯನ್ನು ಹಾಡಿ ಹೊಗಳಿದ್ದಾರೆ. ಇದೀಗ ಜನರು ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ ಅದನ್ನು ಉಳಿಸಿಕೊಳ್ಳುತ್ತೇನೆ ಎಂದಿದ್ದಾರೆ.ಸಮಾಜಿಕ ಜಾಲತಾಣದ ಖಾತೆಯಲ್ಲಿ 1ಲಕ್ಷ ಬೆಂಬಲಿಗರನ್ನು ಹೊಂದಿದ್ದ ಪ್ರತಾಪ್ ಇದೀಗ ಬಿಗ್ ಬಾಸ್ ಬಳಿಕ 5 ಲಕ್ಷ ಬೆಂಬಲಿಗರನ್ನು ಹೊಂದಿದ್ದಾರೆ. ಇದರ ಅರ್ಥ ಅವರನ್ನು ಇಷ್ಟ ಪಡವು ಜನರು ಹಾಗೂ ಅಭಿಮಾನಿಗಳು ಹೆಚ್ಚಾಗಿದ್ದಾರೆ ಎಂದರೆ ತಪ್ಪಾಗಲಾರದು.