Gattimela Serial : ಜನಪ್ರಿಯ ಸೀರಿಯಲ್ ಗಟ್ಟಿಮೇಳ ಮುಕ್ತಾಯ.!
ಕನ್ನಡದ ಜನಪ್ರಿಯ ಧಾರವಾಹಿ ಆಗಿರುವ ಗಟ್ಟಿಮೇಳ ( Gattimela Kannada serial ) ವೀಕ್ಷಕರಿಗೆ ಇದೀಗ ನಿರಾಶೆಯ ಸುದ್ದಿಯೊಂದು ಹೊರಬಿದ್ದಿದೆ. ಹೌದು ಕೆಲವು ವರ್ಷಗಳ ಹಿಂದೆ ಅಂದರೆ 2019 ಮಾರ್ಚ್ 11ರಿಂದ ಕಿರುತೆರೆ ಲೋಕಕ್ಕೆ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ ಗಟ್ಟಿಮೇಳ ಸೀರಿಯಲ್ ಇದೀಗ ಶುಭಂ ಹೇಳುತ್ತಿದೆ. ಈಗಾಗಲೇ ಅಂತಿಮ ಸಂಚಿಕೆಗಳ ಶೂಟಿಂಗ್ ಭರದಿಂದ ಸಾಗುತ್ತಿದ್ದು ಹೊಸ ವರ್ಷದ ಮೊದಲ ವಾರವೇ ಧಾರವಾಹಿ ಮುಕ್ತಾಯವಾಗುವ ಸಾಧ್ಯತೆಯಿದೆ. ಇನ್ನೂ ತಮ್ಮ ನೆಚ್ಚಿನ ಸೀರಿಯಲ್ ಗಟ್ಟಿಮೇಳ ಮಿಸ್ ಆಗ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ತಮ್ಮ ಫ್ಯಾನ್ ಪೇಜ್ ಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಗಟ್ಟಿಮೇಳ ಸೀರಿಯಲ್ ಸಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿತ್ತು.
ಗಟ್ಟಿಮೇಳ ಧಾರಾವಾಹಿಯನ್ನು ನಟ ನಿರ್ಮಾಪಕ ರಕ್ಷಿತ್ ಗೌಡ ಅವರು ತಮ್ಮ ಸ್ವಂತ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದರು. ಕಲರ್ಸ್ ವಾಹಿನಿಯ ಪುಟ್ಟಗೌರಿ ಮದುವೆ ( Puttagowri maduve Kannada serial ) ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ಪುಟ್ಟಗೌರಿ ಮದುವೆ ಕೂಡ ಸಾವಿರ ಸಂಚಿಕೆಗಳನ್ನು ಪೂರೈಸಿ ಜನಪ್ರಿಯ ಸೀರಿಯಲ್ ಆಗಿ ಹೊರಹೊಮ್ಮಿತ್ತು.
ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟ ರಕ್ಚಿತ್ ಗೌಡ ಹಾಗೂ ನಾಯಕಿನ ಪಾತ್ರದಲ್ಲಿ ನಟಿ ನಿಶಾ ಮಿಲನ ರವರು ಅಭಿನಯಿಸಿ ವೀಕ್ಷಕರಿಗೆ ಬಹಳ ಇಷ್ಟವಾಗಿದ್ದಾರೆ. ನಟಿ ನಿಶಾ ರವಿಕೃಷ್ಣನ್ ರವರು ಗಟ್ಟಿಮೇಳ ಸೀರಿಯಲ್ ನಲ್ಲಿ ಅಮೂಲ್ಯ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಕನ್ನಡ ಕಿರುತೆರೆ ಮಾತ್ರವಲ್ಲದೆ ತೆಲುಗು ಕಿರುತೆರೆ ಅಂಗಳದಲ್ಲೂ ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ನಂ1 ವಾಹಿನಿಯಾಗಿರುವ ಜೀ ಕನ್ನಡ ಚಾನೆಲ್ ಸೀರಿಯಲ್ ಗಳನ್ನು ಅದ್ಬುತವಾಗಿ ನಿರ್ಮಿಸಿ ವೀಕ್ಷಕರಿಗೆ ಅರ್ಪಿಸುತ್ತಿದೆ. ಗಟ್ಟಿಮೇಳ ಸೀರಿಯಲ್ ಜಾಗಕ್ಕೆ ಈಗಾಗಲೇ ಪ್ರೋಮೊ ಬಿಡುಗಡೆಯಾಗಿರುವ ಲಕ್ಷ್ಮೀ ನಿವಾಸ ಸೀರಿಯಲ್ ಕಾಲಿಡುವ ಸಾಧ್ಯತೆಯಿದೆ. ಇನ್ನೂ ಲಕ್ಷ್ಮೀನಿವಾಸ ಸೀರಿಯಲ್ ನಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಶ್ವೇತಾ ರವರು ಬಹಳ ದಿನಗಳ ನಂತರ ನಟನೆಗೆ ಮರಳಿದ್ದಾರೆ.