Sushmita Jagappa marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಜೋಡಿ
ಕನ್ನಡ ಕಿರುತೆರೆ ಜನಪ್ರಿಯ ಕಾಮಿಡಿ ಷೋ ಆಗಿದ್ದ ಮಜಾಭಾರತ ಕಾರ್ಯಕ್ರಮ ಮೂಲಕ ಕಿರುತೆರೆ ಇಂಡಸ್ಟ್ರಿ ಗೆ ಕಾಲಿಟ್ಟ ಸುಷ್ಮೀತಾ ಹಾಗೂ ಜಗಪ್ಪ ರವರು ಕಾಮಿಡಿ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ.ಮಜಾಭಾರತ ಕಾಮಿಡಿ ಕಾರ್ಯಕ್ರಮದಲ್ಲಿ ಪ್ರಯಣ ಶುರುಮಾಡಿದ ಸುಷ್ಮೀತಾ ಹಾಗೂ ಜಗಪ್ಪರವರು ಮೊದಲಿಗೆ ಸ್ನೇಹಿತರಾಗಿ ಪರಿಚಯರಾಗಿದ್ದರು. ವರ್ಷ ಕಳೆದಂತೆ ಸ್ನೇಹ ಪ್ರೀತಿಗೆ ಜಾರಿತು ಹಾಗೂ ಯಾವ ಕಾರ್ಯಕ್ರಮದಲ್ಲೂ ಈ ವಿಚಾರವನ್ನು ಅವರು ಪ್ರಸ್ತಾಪ ಮಾಡಿಲ್ಲವಾದರು ನೋಡಗರಿಗೆ ಇವರು ಪ್ರೀತಿ ಮಾಡುತ್ತಿದ್ದಾರೆ ಎನ್ನುವುದು ತಿಳಿದಿತ್ತು, ಇದೀಗ ಇವರ ಪ್ರೀತಿ ವಿಚಾರ ಬಹಿರಂಗವಾಗಿದೆ.
ಹೌದು ಈಗಾಗಲೇ ಸುಷ್ಮೀತಾ ಮತ್ತು ನಟ ಜಗಪ್ಪ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದ್ದು. ಕಾಮಿಡಿ ನಟಿ ಸುಷ್ಮೀತಾ ಕಲ್ಯಾಣ ಮಂಟಪಕ್ಕೆ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.ಇನ್ನೂ ಪ್ರೀತಿಸಿ ಮದುವೆಯಾಗುತ್ತಿರುವ ಈ ಜೋಡಿ ಮನೆಯವರ ಒಪ್ಪಿಗೆ ಪಡೆದು ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ.
Sushmita jagappa marriage : ಯಾರೆಲ್ಲಾ ಗಣ್ಯರು ಬಂದಿದ್ರು ಗೊತ್ತಾ

ನಟಿ ಸುಷ್ಮೀತಾರವರ ಮದುವೆ ಸಂಭ್ರಮದ ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರ ಸೇರಿದಂತೆ ಮದುವೆಯ ಕೆಲವು ಸಂಪ್ರದಾಯದ ಕಾರ್ಯಕ್ರಮದಲ್ಲಿ ತೊಡಗಿರುವ ಫೋಟೊಗಳು ಇಲ್ಲಿವೆ ನೋಡಿ.ಸುಷ್ಮೀತಾ ಹಾಗೂ ಜಗಪ್ಪರವರ ಮದುವೆ ಕ್ಷಣಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.ಕಾಮಿಡಿ ಜೋಡಿಯ ಮದುವೆ ಸಮಾರಂಭದಲ್ಲಿ ಮಜಾಭಾರತ ಹಾಗೂ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಷೋಗಳ ಕಲಾವಿದರು ಮತ್ತು ಸ್ನೇಹಿತರು ಭಾಗಿಯಾಗಿ ಶುಭ ಹಾರೈಸಲಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಭಾಗಿಯಾಗಿ ವಿನ್ನರ್ ಆಗಿದ್ದ ಮಂಜು ಪಾವಗಡ ಕೂಡ ಕಾಮಿಡಿ ಷೋ ಸ್ನೇಹಿತರಾಗಿದ್ದು ಇವರು ಕೂಡ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.ಈಗಾಗಲೇ ಕಲ್ಯಾಣ ಮಂಟಪದಲ್ಲಿರುವ ಈ ನವಜೋಡಿಗಳು ನವೆಂಬರ್ 18 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.ಜೊತೆಗೆ ಗಿಚ್ಚಿ ಗಿಲಿಗಿಲಿ ಕಲಾವಿದರಾದ ಶಿವು, ವಂಶಿಕಾ, ಪ್ರಶಾಂತ್, ದಿವ್ಯಾ ವಸಂತ್, ನಿರಂಜನ್ ದೇಶಪಾಂಡೆ ಹಾಗೂ ಅನೇಕ ಕಿರುತೆರೆ ನಟ ನಟಿಯರು ಈ ಮದುವೆಗೆ ಬರಲಿದ್ದಾರೆ.