ಗಿಣಿ ರಾಮ ಸೀರಿಯಲ್ ನಟಿ ನಯನ ನಿಶ್ಚಿತಾರ್ಥ
ಕಿರುತೆರೆಯ ಜನಪ್ರಿಯ ನಟಿ ನಯನ ನಾಗರಾಜ್ ರವರು ಇಂದು ತಮ್ಮ ಮನೆಯಲ್ಲಿ ತುಂಬಾ ಸರಳವಾಗಿ ನಿಶ್ಚಿತಾರ್ಥವನ್ನು ಮಾಡಿಕೊಡಿದ್ದಾರೆ. ನಟಿ ನಯನ ರವರು ಮೊದಲ ಬಾರಿಗೆ ಕಲರ್ಸ್ ಕನ್ನಡ ವಾಹಿನಿಯ ಗಿಣಿ ರಾಮ ಸೀರಿಯಲ್ನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಗಿಣಿ ರಾಮ ಸೀರಿಯಲ್ ಮೂಲಕ ನಯನಾರವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ನಟಿ ನಯನಾರವರು ಪ್ರೀತಿಸಿ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನಟಿ ನಯನಾರವರು ಹಿಂದೆ ಸಾಕಷ್ಟು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಪಾಪ ಪಾಂಡು, ಗಿಣಿ ರಾಮ ಹಾಗೂ ಇನ್ನೂ ಅನೇಕ ಕಿರುತೆರೆಯ ಕನ್ನಡ ಸೀರಿಯಲ್ ಗಳಲ್ಲಿ ಅಭಿನಯಿಸಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ನಯನ ರವರ ನಿಶ್ಚಿತಾರ್ಥದ ಬಗ್ಗೆ ಕಂಪ್ಲೀಟ್ ಆಗಿ ತಿಳಿದುಕೊಳ್ಳಲು ಮುಂದೆ ಓದಿ. ನಟಿ ನಯನ ರವರು ಸುಹಾಸ್ ಶಿವಣ್ಣ ಎಂಬುವರ ಜೊತೆ ಪ್ರೀತಿಯಲ್ಲಿದ್ದರೂ ಇದೀಗ ಕುಟುಂಬದವರ ಒಪ್ಪಿಗೆ ಪಡೆದು ಕುಟುಂಬದವರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಎರಡು ಕುಟುಂಬಗಳ ಸಂಬಂಧಿಕರು ಹಿರಿಯರು ಹಾಗೂ ಕುಟುಂಬ ವರ್ಗದವರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ನಯನ ಹಾಗೂ ಸುಹಾಸ್ ರವರ ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಕಿರುತೆರೆಯ ಸಾಕಷ್ಟು ಕಲಾವಿದರು ಭಾಗಿಯಾಗಿದ್ದರು. ಇನ್ನು ನಿಶ್ಚಿತಾರ್ಥ ಕಾರ್ಯಕ್ರಮದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ನಟಿ ನಯನಾರವರು ಹಂಚಿಕೊಂಡಿದ್ದಾರೆ. ಫೋಟೋ ಹಾಗೂ ವಿಡಿಯೋ ನೋಡಿದ ಅಭಿಮಾನಿಗಳು ಒಂದು ಕ್ಷಣ ಶಾಕ್ ಆಗಿ ಅನಂತರ ಕಾಮೆಂಟ್ ಬಾಕ್ಸ್ ನಲ್ಲಿ ವಿಶ್ ಮಾಡಿದ್ದಾರೆ. ನಯನ ಮನೆಯವರು ತುಂಬಾ ಸಂಪ್ರದಾಯಕ ಬದ್ಧವಾಗಿ ನಿಶ್ಚಿತಾರ್ಥವನ್ನು ಸರಳವಾಗಿ ಮಾಡಿದ್ದಾರೆ. ನಿಶ್ಚಿತಾರ್ಥದ ಕೆಲವು ಸುಂದರ ಕ್ಷಣಗಳು ಇಲ್ಲಿವೆ ನೋಡಿ ಜೋಡಿ ನಿಮಗೂ ಇಷ್ಟ ಆಗಿದ್ದರೆ ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ವಿಶ್ ಮಾಡಿ.
