Kaatera first song : ಪಸಂದಾಗವನೆ ಸಾಂಗ್ ರಿಲೀಸ್.!
ಕನ್ನಡದ ಬಹುತಾರಾಗಣದ ಬಹು ನಿರೀಕ್ಷಿತ ಚಿತ್ರ ಕಾಟೇರ ಡಿಸೆಂಬರ್ 29ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕಾಟೇರ ಸಣ್ಣ ಝಲಕ್ ಮೂಲಕ ರಿಲೀಸ್ ಡೇಟ್ ಅನಾವರಣ ಗೊಳಿಸಿರುವ ಕಾಟೇರ ಚಿತ್ರತಂಡ ಈಗಾಗಲೇ ಪ್ರಮೋಷನ್ ನಲ್ಲಿ ತೊಡಗಿದ್ದಾರೆ. ಡಿಬಾಸ್ ದರ್ಶನ್ ಅಭಿಮಾನಿಗಳು ಕೂಡ ಕಾಟೇರ ಸಿನಿಮಾ ( Kaatera kannada Movie ) ನೋಡಲು ಕಾತುರದಿಂದ ಕಾಯುತ್ತಿದ್ದಾರೆ.ಈ ವರ್ಷ ಮೂವಿ ರಿಲೀಸ್ ಮಾಡೋದು ಡೌವ್ಟ್ ಎನ್ನುತ್ತಿದ್ದ ಅಭಿಮಾನಿಗಳು ಈ ಶಾಕಿಂಗ್ ಅನೌಂನ್ಸ್ ನೋಡಿ ದಿಲ್ ಖುಷ್ ಆಗಿದ್ದಾರೆ.
ನಟ ದರ್ಶನ್ ತೂಗುದೀಪ ಜೊತೆ ನಟಿ ಮಾಲಾಶ್ರೀ ಮಗಳು ಆರಾಧನಾ ರಾಮ್ ಮೊದಲ ಬಾರಿಗೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಜನಪ್ರಿಯ ನಟಿ ಮಾಲಾಶ್ರೀ ರವರು ಹಿಂದಿನ ಕಾಲದಲ್ಲಿ ಪಡ್ಡೆ ಹುಡುಗರ ಮನಸ್ಸು ಗೆದ್ದಿದ್ದರು. ಇದೀಗ ನಟಿ ಮಾಲಾಶ್ರೀ ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರೋದ್ರಿಂದ ಪ್ರೇಕ್ಷಕರಿಗೂ ಕುತೂಹಲ ಮೂಡಿಸಿದೆ. ನಟಿ ಆರಾಧನಾ ರಾಮ್ ( Actress Aradhana Ram) ರವರು ತಮ್ಮ ಚೊಚ್ಚಲ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ ಹಾಗೂ ಡಿಬಾಸ್ ಜೊತೆ ನಟನೆ ಹೇಗೆ ಮಾಡಿದ್ದಾರೆ ಅನ್ನೋದನ್ನ ಡಿಸೆಂಬರ್ ಅಂತ್ಯಕ್ಕೆ ಚಿತ್ರಮಂದಿರಗಳಲ್ಲಿ ನೋಡಬೇಕು.ನಿರ್ದೇಶಕ ತರುಣ್ ಸುಧೀರ್ ಕೂಡ ಆಡಿಷನ್ ಮೂಲಕ ಆರಾಧನಾ ರಾಮ್ ಅವರನ್ನು ಕಾಟೇರ ಸಿನಿಮಾ ಆಯ್ಕೆ ಮಾಡಿಕೊಂಡಿದ್ದು ಇನ್ನೂ ಆರಾಧನಾ ಕೂಡ ಸಿನಿಮಾದ ನಾಯಕಿ ಪಾತ್ರಕ್ಕೆ ಸರಿಹೊಂದುತ್ತಾರೆ ಎಂದಿದ್ದಾರೆ.

ಕಾಟೇರ ಬಿಡುಗಡೆಗೆ ಈಗಾಗಲೇ ಅಭಿಮಾನಿಗಳು ಕ್ಷಣಗಣನೆ ಶುರುಮಾಡಿದ್ದು ಈ ತಿಂಗಳು ಕಾಟೇರ ಸಿನಿಮಾದ ಸಾಂಗ್ಸ್ ಹಾಗೂ ಟ್ರೈಲರ್ ನೋಡಲು ಅಷ್ಟೇ ಕಾತುರರಾಗಿದ್ದಾರೆ ಡಿಬಾಸ್ ಸೆಲೆಬ್ರಿಟಿಸ್. ಕಾಟೇರ ಚಿತ್ರತಂಡ ಈಗಾಗಲೇ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದು ಮೊದಲ ಹಾಡು ಇನ್ನೇನೂ ಪ್ರೇಕ್ಷಕರ ಕೈಗೆ ಸಿಗಲಿದೆ.ಹೌದು ಈಗಾಗಲೇ ರಿಲೀಸ್ ಖುಷಿಯಲ್ಲಿರುವ ಫ್ಯಾನ್ಸ್ ಗೆ ಮೊದಲ ಸಾಂಗ್ ಬಿಡುಗಡೆಯ ಅಪ್ಡೇಟ್ ಸಿಕ್ಕಿದೆ.
ಡಿಬಾಸ್ ದರ್ಶನ್ ರವರ ಹೊಸ ಸಿನಿಮಾ ಕಾಟೇರದ ಮೊದಲು ಬಿಡುಗಡೆಯಾಗುತ್ತಿರುವ ಹಾಡು ` ಪಸಂದಾಗವನೆ ‘. ಇನ್ನೂ ಈ ಹಾಡಿನ ಸಣ್ಣ ತುಣುಕು ಇಂದು ದರ್ಶನ್ ಸಮಾಜಿಕ ಜಾಲತಾಣದ ಖಾತೆಯಲ್ಲಿ ಬಿಡುಗಡೆಯಾಗಿದೆ. ಪಸಂದಾಗವನೆ ಸಂಪೂರ್ಣ ಹಾಡು ಡಿಸೆಂಬರ್ 4ರಂದು ಮಧ್ಯಾಹ್ನ 12:30 ಕ್ಕೆ ಆನಂದ್ ಆಡಿಯೋ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಪೂರ್ತಿ ಹಾಡು ಹೇಗಿರಲಿದೆ ಅಭಿಮಾನಿಗಳ ರೆಸ್ಪಾನ್ಸ್ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪರಭಾಷೆಯ ಸಿನಿಮಾಗಳಿಗೆ ಸೆಡ್ಡು ಹೊಡೆದು ನಮ್ಮ ಕನ್ನಡದ ಸಿನಿಮಾ ಕಾಟೇರ ರಿಲೀಸ್ ಆಗುತ್ತಿರುವುದು ತುಂಬಾ ವಿಶೇಷವಾಗಿದೆ. ಕಳೆದ ವರ್ಷದಿಂದ ಬಹಳ ನಿರೀಕ್ಷೆ ಹುಟ್ಟಿಸಿರುವ ನಿರ್ದೇಶಕ ಪ್ರಶಾಂತ್ ನೀಲ್ ರವರ ಸಾಲರ್ ಚಿತ್ರ ಕೂಡ ಡಿಸೆಂಬರ್ 22ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಸಾಲರ್ ಚಿತ್ರವನ್ನು ಹೊಂಬಾಳೆ ಫಿಲ್ಮ್ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು ಈಗಾಗಲೇ ಟ್ರೈಲರ್ ಮೂಲಕ ಭಾರಿ ಸಂಚಲನ ಮೂಡಿಸಿದೆ. ಯೂಟ್ಯೂಬ್ ನಲ್ಲಿ ಈಗಾಗಲೇ 14 ಕೋಟಿ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಈ ಚಿತ್ರ ರಿಲೀಸ್ ಆದ ಒಂದೇ ವಾರಕ್ಕೆ ಕಾಟೇರ ಸಿನಿಮಾ ಬೆಳ್ಳಿತೆರೆಯಲ್ಲಿ ಧೂಳೆಬ್ಬಿಸಲಿದೆ.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಈ ಸಿನಿಮಾವನ್ನು ಕಥೆ ಕೇಳಿದ ತಕ್ಷಣ ಚಿತ್ರ ನಿರ್ಮಾಣ ಮಾಡಲು ಒಪ್ಪಿಕೊಂಡು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಕಾಟೇರ ಸಿನಿಮಾಗೆ ಬೇಕಾದ ಎಲ್ಲಾ ತಯಾರಿಗಳಿಗೂ ಯಾವುದನ್ನು ಕೊರತೆ ಮಾಡದೆ ಎಲ್ಲಾ ವ್ಯವಸ್ಥೆ ಗಳನ್ನು ಮಾಡಿದ್ದಾರೆ ನಿರ್ಮಾಪಕ ರಾಕ್ ಲೈನ್. ದರ್ಶನ್ ಚಿತ್ರ ಆಗಿರೊದ್ರಿಂದ ಕರ್ನಾಟಕದಲ್ಲಿ ಅದ್ದೂರಿಯಾಗಿ ಓಪನಿಂಗ್ ಪಡೆದುಕೊಂಡು ಮೊದಲ ದಿನವೇ 25 ರಿಂದ 30 ಕೋಟಿ ಬಾಚಿಕೊಳ್ಳುವ ಸಾಧ್ಯತೆಯಿದೆ. ಈ ಚಿತ್ರ ನೈಜ ಘಟನೆ ಆಧಾರಿತ ಸಿನಿಮಾ ವಾಗಿದ್ದು ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದೆ.