Kaatera Unbreakable Collection : ಒಂದೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿದ ಕಾಟೇರ
ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಕಾಟೇರ ಸಿನಿಮಾ ಡಿಸೆಂಬರ್29ರಂದು ಕರ್ನಾಟಕ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ಕಾಟೇರ ಸಿನಿಮಾವನ್ನು ಮೊದಲ ದಿನವೇ ಮೆಚ್ಚಿಕೊಂಡ ಕರುನಾಡ ಪ್ರೇಕ್ಷಕರು ಕಾಟೇರ ಚಿತ್ರವನ್ನು ವಿಜೃಂಭಣೆಯಿಂದ ಮೆರಸುತ್ತಿದ್ದಾರೆ. ಡಿಬಾಸ್ ಅಭಿಮಾನಿಗಳು ಕೂಡ ಕಾಟೇರ ಸಿನಿಮಾವನ್ನು ಮಧ್ಯರಾತ್ರಿ ಯಿಂದಲೇ ನೋಡಿ ಖುಷಿಪಟ್ಟರು. ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈ ಚಿತ್ರದಲ್ಲಿ ಇಂದೆಂದೂ ಅಭಿನಯಿಸದ ಲುಕ್ ನಲ್ಲಿ ಎಲ್ಲರನ್ನೂ ಮನರಂಜಿಸಿದ್ದಾರೆ. ಕಾಟೇರ ಸಿನಿಮಾದ ಮೊದಲ ವಾರದ ಕಲೆಕ್ಷನ್ ಬಗ್ಗೆ ತಿಳಿದುಕೊಳ್ಳಲು ಮುಂದೆ ನೋಡಿ.
ಕಾಟೇರ ಮೊದಲ ವಾರದ ಕಲೆಕ್ಷನ್ ಪಟ್ಟಿ.!
ಕಾಟೇರ ಸಿನಿಮಾ ಮೂಲಕ ಡಿಬಾಸ್ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ ನಾನೇ ಎಂದು ಸಾಬೀತು ಮಾಡಿದ್ದಾರೆ. ಕರ್ನಾಟಕದಲ್ಲಿ ಡಿಬಾಸ್ ದರ್ಶನ್ ಸಿನಿಮಾಗಳು ಹಿಟ್ ಆಗಲಿ ಅಥವಾ ಫ್ಲಪ್ ಆಗಲಿ ಕಲೆಕ್ಷನ್ ವಿಚಾರದಲ್ಲಿ ಎಂದಿಗೂ ಹಿಂದೆ ಸರಿಯುವುದಿಲ್ಲ.ಇನ್ನೂ ಕಾಟೇರ ಸಿನಿಮಾ ಮೊದಲ ವಾರವೇ 100+ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಅದ್ದೂರಿ ಪ್ರದರ್ಶನ ಕಾಣುತ್ತಿರುವ ಕಾಟೇರ ಚಿತ್ರದ ಕಲೆಕ್ಷನ್ ವಿವರ ಇಲ್ಲಿದೆ ನೋಡಿ
- ಮೊದಲ ದಿನ : 19.79 ಕೋಟಿ
- ಎರಡನೇ ದಿನ : 17.35 ಕೋಟಿ
- ಮೂರನೇ ದಿನ : 20.94 ಕೋಟಿ
- ನಾಲ್ಕನೇ ದಿನ : 18.26 ಕೋಟಿ
- ಐದನೇ ದಿನ : 9.24 ಕೋಟಿ
- ಆರನೇ ದಿನ : 9.78 ಕೋಟಿ
- ಏಳನೇ ದಿನ : 9.35 ಕೋಟಿ
ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಕಾಟೇರ ಸಿನಿಮಾ ಕೇವಲ ಒಂದು ವಾರದಲ್ಲಿ 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿ. 104 ಕೋಟಿಗೂ ಅಧಿಕ ಹಣವನ್ನು ಗಳಿಸಿ ದಾಖಲೆ ಮುರಿದಿದೆ ಹಾಗೂ ಹೊಸ ದಾಖಲೆ ನಿರ್ಮಿಸಿದೆ.

ಕರ್ನಾಟಕದಲ್ಲಿ ಅಬ್ಬರಿಸ್ತ ಇರುವ ಕಾಟೇರ ಚಿತ್ರ ಇಂದಿನಿಂದ ವಿದೇಶಗಳಲ್ಲೂ ಪ್ರದರ್ಶನ ಕಾಣಲಿದೆ. ಹೌದು ಈಗಾಗಲೇ ವಿದೇಶದ ವಿತರಣಾ ಕಂಪನಿ ಕಾಟೇರ ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದ್ದು ಇಂದಿನಿಂದ ವಿದೇಶದ ಹಲವು ಪ್ರಾಂತ್ಯಗಳಲ್ಲಿ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾಗುತ್ತಿದೆ. ಈ ಸಂದರ್ಭದಲ್ಲಿ ನಟ ದರ್ಶನ್ ಸೇರಿದಂತೆ ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ,ನಟಿ ಮಾಲಾಶ್ರೀ ಹಾಗೂ ಕಾಟೇರ ಚಿತ್ರದ ನಾಯಕನಟಿ ಆರಾಧನಾ ರಾಮ್ ವಿದೇಶಕ್ಕೆ ತೆರಳಿ ಅಲ್ಲಿ ಆಯೋಜನೆ ಮಾಡಿರುವ ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ.ಜೊತೆಗೆ ವಿದೇಶ ಕನ್ನಡಿಗರ ಜೊತೆ ಕಾಟೇರ ಚಿತ್ರವನ್ನು ವೀಕ್ಷಣೆ ಮಾಡಿ ಅಲ್ಲಿನ ಅಭಿಮಾನಿಗಳ ಜೊತೆ ಸಂವಾದ ನಡೆಸಲಿದ್ದಾರೆ.
ಕಾಟೇರ ಚಿತ್ರದ ಯಶಸ್ಸಿನ ಬೆನ್ನಲ್ಲೇ ಬೆಂಗಳೂರಿನ ಮಾಲ್ ನಲ್ಲಿ Celebrity special show ಆಯೋಜನೆ ಮಾಡಿದ್ದರು. ಇನ್ನೂ ಈ ವಿಶೇಷ ಪ್ರದರ್ಶನದಲ್ಲಿ ಕನ್ನಡ ಚಿತ್ರರಂಗದ ನಟ ನಟಿಯರು ಹಾಗೂ ಹಿರಿಯ ನಿರ್ದೇಶಕರು ಬಾಗಿಯಾಗಿದ್ದರು.ನಿರ್ದೇಶಕ ಎಸ್ ನಾರಾಯಣ್ , ಸಾಧುಕೋಕಿಲ, ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ, ಪ್ರಜ್ವಲ್ ದೇವರಾಜ್ , ಆಭಿಷೇಕ್ ಅಂಬರೀಶ್, ಸುಮಲತಾ,ಚಿಕ್ಕಣ್ಣ , ಧನ್ವಿರ್, ನಟಿ ಅಮೂಲ್ಯ, ಪನ್ನಗಭರಣ ,ಶ್ರುತಿ ,ಶ್ರೀಮುರಳಿ , ಹಾಗೂ ಕಾಟೇರ ಚಿತ್ರತಂಡದ ಕಲಾವಿದರು ಭಾಗಿಯಾಗಿದ್ದರು. ಷೋ ಮುಗಿದ ಬಳಿಕ ಡಿಬಾಸ್ ದರ್ಶನ್ ಅವರಿಗೆ ಚಿತ್ರ ವೀಕ್ಷಣೆ ಮಾಡಿದ ಕಲಾವಿದರು ವಿಶ್ ಮಾಡಿ ಶುಭ ಹಾರೈಸಿದ್ದಾರೆ. ಅನಂತರ ಕೇಕ್ ಕಟ್ ಮಾಡಿ ಡಿಬಾಸ್ ಹಾಗೂ ಕೆಲವು ಕಲಾವಿದರು ಸಂಭ್ರಮಾಚರಣೆ ಮಾಡಿದರು.
ಕಾಟೇರ ಚಿತ್ರವನ್ನು ಮೊದಲ ದಿನವೇ ಅಭಿಮಾನಿಗಳು ಹಾಗೂ ಕರ್ನಾಟಕ ಜನತೆ ಮೆಚ್ಚಿಕೊಂಡಿದ್ದಾರೆ. ಕಾಟೇರ ನೋಡಿದ ಪ್ರೇಕ್ಷಕರು ಉತ್ತಮವಾಗಿ ವಿಮರ್ಶೆ ಮಾಡುತ್ತಿದ್ದಾರೆ.ಇದರಿಂದ ಕಾಟೇರ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು ಚಿತ್ರತಂಡ ಸೇರಿದಂತೆ ಚಿತ್ರಮಂದಿರ ಮಾಲೀಕರು ಕೂಡ ಖುಷಿಯಲ್ಲಿದ್ದಾರೆ. ಇನ್ನೂ ಬಹಳ ದಿನಗಳ ನಂತರ ಪ್ರೇಕ್ಷಕರು ಕುಟುಂಬದ ಸಮೇತ ಬಂದು ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ. ಕೆಲಸದ ದಿನಗಳಲ್ಲೂ ಅದ್ದೂರಿ ಕಲೆಕ್ಷನ್ ಮಾಡುತ್ತಿದೆ ಕಾಟೇರ. ಇನ್ನೂ ಕೆಲವು ವಾರಗಳ ನಂತರ ಕಾಟೇರ ಸಿನಿಮಾ ತೆಲುಗು ಹಾಗೂ ತಮಿಳು ಭಾಷೆಯಲ್ಲೂ ಬಿಡುಗಡೆಯಾಗಲಿದೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಿಳಿಸಿದ್ದಾರೆ.