Kaatera Trailer Views : 15 ಮಿಲಿಯನ್ ವಿವ್ಸ್ ದಾಟಿದ ಕಾಟೇರ ಟ್ರೈಲರ್.!
ಕರುನಾಡ ಚಕ್ರವರ್ತಿ ಡಿಬಾಸ್ ದರ್ಶನ್ ರವರ ಬಹು ನಿರೀಕ್ಷಿತ ಚಲನಚಿತ್ರ ಕಾಟೇರ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಡಿಸೆಂಬರ್ 29ರಂದು ಕರ್ನಾಟಕ ರಾಜ್ಯಾದ್ಯಂತ ಹಾಗೂ ವಿಶ್ವದೆಲ್ಲೆಡೆ ಬಿಡುಗಡೆಯಾಗಲಿದೆ. ಇತ್ತಿಚಿಗಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಕಾಟೇರ ಚಲನಚಿತ್ರ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಟ್ರೈಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆ ಪಡೆದು ಇದೀಗ 20 ಮಿಲಿಯನ್ ನತ್ತ ಮುನ್ನುಗ್ಗುತ್ತಿದೆ. ಇನ್ನೂ ಚಿತ್ರದ ತುಣುಕುಗಳನ್ನು ನೋಡಿದ ಅಭಿಮಾನಿಗಳು ಸಖತ್ ಕ್ರೇಜ್ ನಲ್ಲಿದ್ದಾರೆ. ಬಿಡುಗಡೆ ದಿನವು ಟ್ರೈಲರ್ ತುಂಬಾ ತಡವಾಗಿ ಬಿಡುಗಡೆಯಾಯಿತು ಯಾಕೆಂದರೆ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದ ರಾಮಯ್ಯ ರವರನ್ನು ಆಹ್ವಾನಿಸಿತ್ತು ಅವರು ತಡವಾಗಿ ಕಾರ್ಯಕ್ರಮಕ್ಕೆ ಬಂದ ಕಾರಣ ಟ್ರೈಲರ್ ಬಿಡುಗಡೆ ತಡವಾಯಿತು. ಟ್ರೈಲರ್ ನೋಡಲು ಕಾದು ಕುಳಿತ್ತಿದ್ದ ಅಭಿಮಾನಿಗಳು ಕೊನೆಗೂ ನೋಡಿ ಆನಂದಿಸಿದರು.
ಕಾಟೇರ ಸಿನಿಮಾದ ಟ್ರೈಲರ್ ರಿಲೀಸ್ ಸಮಾರಂಭದಲ್ಲಿ ಚಿತ್ರದ ಅನೇಕ ಕಲಾವಿದರು ಭಾಗಿಯಾಗಿದ್ದರು. ಕಾಟೇರ ಚಿತ್ರದಲ್ಲಿ ಅಭಿನಯಿಸಿರುವ ಖಳನಟ ವಿನೋದ್ ಆಳ್ವಾ, ನಟಿ ಆರಾಧನಾ ರಾಮ್ ,ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೇರಿದಂತೆ ಕೆಲವು ಕಲಾವಿದರು ಭಾಗವಹಿಸಿದ್ದರು. ಇನ್ನೂ ಚಿತ್ರದಲ್ಲಿ ದೊಡ್ಡಣ್ಣ, ಉಮಾಶ್ರೀ, ಶ್ರುತಿ, ಕುಮಾರ್ ಗೋವಿಂದು, ಪದ್ಮ ವಸಂತಿ,ಅವಿನಾಶ್, ಜಗಪತಿ ಬಾಬು ಸೇರಿದಂತೆ ಹಲವು ರಂಗಭೂಮಿ ಕಲಾವಿದರು ನಟಿಸಿರುವುದು ವಿಶೇಷ.
ನಿರ್ದೇಶಕ ತರುಣ್ ಸುಧೀರ್ ರವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡುವಾಗ ಟ್ರೈಲರ್ ನಲ್ಲಿ ಸರ್ಪ್ರೈಸ್ ಇದೆ ಮಿಸ್ ಮಾಡ್ದೆ ನೋಡಿ ಎಂದಿದ್ದರು. ಅದರಂತೆ ಟ್ರೈಲರ್ ವೀಕ್ಷಣೆ ಮಾಡಿದ ಅಭಿಮಾನಿಗಳು ಡಿಬಾಸ್ ವಯಸ್ಸಾದ ಲುಕ್ ನೋಡಿ ಶಾಕ್ ಆದರು. ಇನ್ನೂ ಅಭಿಮಾನಿಗಳಿಗೂ ಈ ಸರ್ಪ್ರೈಸ್ ಬಹಳ ಇಷ್ಟವಾಗಿದೆ. ಡಿಬಾಸ್ ದರ್ಶನ್ ರವರ ನೆಚ್ಚಿನ ನಿರ್ದೇಶಕರಾದ ತರುಣ್ ಕೂಡ ಈ ಸಿನಿಮಾ ಮೂಲಕ ದರ್ಶನ್ ಅವರನ್ನು ವಿಭಿನ್ನ ಗೆಟಪ್ ನಲ್ಲಿ ತೋರಿಸಿದ್ದಾರೆ.
ಕಾಟೇರ ಚಿತ್ರತಂಡ ಹುಬ್ಬಳ್ಳಿಯಲ್ಲಿ ಈಗಾಗಲೇ ಟ್ರೈಲರ್ ಲಾಂಚ್ ಮಾಡಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ಮುಗಿಸಿದೆ. ಇನ್ನೂ ಕಾಟೇರ ಸಿನಿಮಾದ ಫ್ರೀ ರಿಲೀಸ್ ಇವೆಂಟ್ ಕೂಡ ಮುಂದಿನ ದಿನಗಳಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ. ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಿದ ಕಾರಣ ನಂತರ ಫ್ರೀ ರಿಲೀಸ್ ಇವೆಂಟ್ ಅನ್ನು ಸರಳವಾಗಿ ಬೆಂಗಳೂರಿನ ಮಾಲ್ ನಲ್ಲಿ ನಡೆಸಬಹುದು. ಅಥವಾ , ಈಗಾಗಲೇ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯಂತೆ ಮುಂದಿನ ಕಾರ್ಯಕ್ರಮ ಡಿಸೆಂಬರ್ 23ರಂದು ಮಂಡ್ಯ ಅಥವಾ ಮೈಸೂರಿನಲ್ಲಿ ನಡೆಯುವ ಸಾಧ್ಯತೆಯಿದೆ. ಇನ್ನೂ ಕೆಲವೇ ದಿನಗಳಲ್ಲಿ ಈ ಬಗ್ಗೆ ಕಾಟೇರ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿಳಲಿದೆ.
ಕಾಟೇರ ಚಿತ್ರದ ಫ್ರಿ ರಿಲೀಸ್ ಕಾರ್ಯಕ್ರಮ ಮೈಸೂರು ಅಥವಾ ಮಂಡ್ಯದಲ್ಲಿ ನಡೆದರೆ ಅಭಿಮಾನಿಗಳು ಹೆಚ್ಚಾಗೆ ಸೇರೊದಂತು ಪಕ್ಕಾ ಆಗಿದೆ.ಈಗಾಗಲೇ ಕಟೌಟ್ ಗಳು ಕೂಡ ರೆಡಿಯಾಗಿದ್ದು ಚಿತ್ರತಂಡ ಗ್ರೀನ್ ಸಿಗ್ನಲ್ ಕೊಡುತ್ತಿದಂತೆ ಚಿತ್ರಮಂದಿರಗಳ ಕಡೆ ಕಟೌಟ್ ಗಳು ಹೋಗಲಿವೆ. ಬೆಂಗಳೂರಿನ ಮೈನ್ ಚಿತ್ರಮಂದಿರ ಆಗಿರುವ ನರ್ತಕಿಯಲ್ಲಿ ಬರೋಬ್ಬರಿ 80-90 ಅಡಿ ಕಟೌಟ್ ಹಾಕಲಿದ್ದಾರೆ. ಕಾಟೇರ ದರ್ಶನ್ ಕೆರಿಯರ್ ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ ಎಂದರೆ ತಪ್ಪಾಗಲಾರದು.