Kaatera Release Date: ಕಾಟೇರ ಡಿಸೆಂಬರ್ ನಲ್ಲಿ ಭರ್ಜರಿ ಎಂಟ್ರಿ.!
ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಹುನಿರೀಕ್ಷೆಯ ಕಾಟೇರ ( Kaatera Kannada Movie Release Date ) ಸಿನಿಮಾಗಾಗಿ ಡಿಬಾಸ್ ಅಭಿಮಾನಿಗಳು ಕಾದು ಕುಳಿತಿದ್ದರು.ವರ್ಷದಿಂದ ದರ್ಶನ್ ಫ್ಯಾನ್ಸ್ ಕೂಡ ನೆಚ್ಚಿನ ನಟನ ಸಿನಿಮಾದ ಟ್ರೈಲರ್ ಹಾಗೂ ಸಾಂಗ್ ಗಳ ಹೊಸ ಅಪ್ಡೇಟ್ ಗಳ ಮಾಹಿತಿಗಾಗಿ ನಿರ್ದೇಶಕ ತರುಣ್ ಸುದೀರ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ( Rock line Venkatesh ) ಬಳಿ ಹಾಗಾಗ ಬೇರೆ ಸಿನಿಮಾಗಳ ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಕೇಳುತ್ತಿದ್ದರು.ಇದೀಗ ನಿರ್ದೇಶಕ ತರುಣ್ ( Tharun Sudir ) ಕೂಡ ನವೆಂಬರ್ 28ರಂದು ನಾಳೆ ಕಾಟೇರ ಸಿನಿಮಾದ ಬಿಗ್ ಅಪ್ಡೇಟ್ ಸಿಗಲಿದೆ ಎಂದು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.ಇನ್ನೂ ಈ ಗುಡ್ ನ್ಯೂಸ್ ನಿಂದ ಡಿ ಫ್ಯಾನ್ಸ್ ಕೂಡ ಖುಷಿಯಾಗಿದ್ದಾರೆ.
Devil – ಸದ್ದಿಲ್ಲದೆ ಡಿಬಾಸ್ ದರ್ಶನ್ D57 ಶೂಟಿಂಗ್ ಶುರು.!

ಕಾಟೇರ ಸಿನಿಮಾ ರಿಲೀಸ್ ಯಾವಾಗ ಗೊತ್ತಾ?
ನವೆಂಬರ್ 29ರಂದು ಸಂಜೆ 4:02ರಲ್ಲಿ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿರುವ ಸಣ್ಣ ಟೀಸರ್ ಮೂಲಕ ಅಭಿಮಾನಿಗಳಿಗೆ ಕಾಟೇರ ಬಿಡುಗಡೆ ದಿನಾಂಕವನ್ನು ಅನಾವರಣ ಮಾಡಿದೆ ಚಿತ್ರ ತಂಡ. ಇಷ್ಟು ದಿನ ಸೈಲೆಂಟ್ ಆಗಿದ್ದ ಕಾಟೇರ ಚಿತ್ರತಂಡ ಇದೀಗ ಧಿಡೀರ್ ಸಕ್ರಿಯವಾಗಿದೆ. ಅಭಿಮಾನಿಗಳು ಸಹ ಕಾಟೇರ ಸಿನಿಮಾ ಈ ವರ್ಷ ಬರಲ್ಲ ಮುಂದಿನ ವರ್ಷ ಫೆಬ್ರವರಿಗೆ ಡಿಬಾಸ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಬಹುದು ಅಂದುಕೊಂಡಿದ್ದರು.ಆದರೆ ಇದೀಗ ಅಭಿಮಾನಿಗಳಿಗೂ ಶಾಕ್ ಆಗುವಂತೆ ರಿಲೀಸ್ ಡೇಟ್ ಫಿಕ್ಸ್ ಆಗಿಹೋಗಿದೆ.ಹೌದು ಇದೆ ವರ್ಷಾಂತ್ಯಕ್ಕೆ ಅಂದರೆ ( Kaatera Releasing on December 29th 2023) ಡಿಸೆಂಬರ್ 29ಕ್ಕೆ ರಾಜ್ಯಾದ್ಯಂತ ಭರ್ಜರಿ ಬಿಡುಗಡೆಯಾಗಲಿದೆ.

ಈಗಾಗಲೇ ಈ ಸುದ್ದಿಯಿಂದ ಡಿಬಾಸ್ ಅಭಿಮಾನಿಗಳು ಬಾರಿ ಸಂತಸ ಗೊಂಡಿದ್ದು. ಮುಂದಿನ ತಿಂಗಳು ಕಾಟೇರ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಕಣ್ಣುಂಬ್ತಿಕೊಳ್ಳಲು ಕಾಯುತ್ತಿದ್ದಾರೆ.ಇನ್ನೂ ಈ ಸಿನಿಮಾದ ಸಾಂಗ್ಸ್ ಹಾಗೂ ಟ್ರೈಲರ್ ಕೂಡ ಇನ್ನೂ ರಿಲೀಸ್ ಆಗಿಲ್ಲ.ಸಿನಿಮಾ ಬಿಡುಗಡೆಗೆ ಇನ್ನೂ ಸರಿಯಾಗಿ ಒಂದು ತಿಂಗಳು ಈ ಕಡಿಮೆ ಅವಧಿಯಲ್ಲೇ ಸಿನಿಮಾದ ಎಲ್ಲಾ ಹಾಡುಗಳು ಹಾಗೂ ಟ್ರೈಲರ್ ಕೂಡ ಸದ್ಯದಲ್ಲೇ ನಿಮ್ಮ ಕೈಗೆ ಸಿಗಲಿದೆ.ಕಾಟೇರ ಸಿನಿಮಾದ ಎಲ್ಲಾ ಹಾಡುಗಳಿಗಾಗಿ ಆನಂದ್ ಆಡಿಯೋ ಚಾಲೆನ್ ನ ಭೇಟಿ ನೀಡಿ.( Kaatera Kannada songs on Anandh Audio ) ಕಾಟೇರ ಸಿನಿಮಾದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ.
ಕಾಟೇರ ಸಿನಿಮಾ ಬಹುತಾರಾಗಣ ಹೊಂದಿರುವ ಸಿನಿಮಾ, ಇನ್ನೂ ಈ ಚಿತ್ರದಲ್ಲಿ ನಾಯಕನಟ ದರ್ಶನ್ ಅವರಿಗೆ ಜೋಡಿಯಾಗುವ ಮೂಲಕ ಜನಪ್ರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ರವರು ಮೊದಲ ಬಾರಿಗೆ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಕಲಾವಿದರು ಅಭಿನಯ ಮಾಡಿದ್ದು ಜಗಪತಿ ಬಾಬು, ಅವಿನಾಶ್, ಶುತ್ರಿ,ಕುಮಾರ್ ಗೋವಿಂದು ಹಾಗೂ ಇನ್ನೂ ಹಲವು ಖ್ಯಾತ ನಟರು ಇದ್ದಾರೆ.ಈ ಸಿನಿಮಾ ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು ಹೇಗೆ ಮೂಡಿಬಂದಿದೆ ಎಂದು ಕಾದು ನೋಡಬೇಕಿದೆ.