Sushmita jagappa marriage : ಯಾರೆಲ್ಲಾ ಗಣ್ಯರು ಬಂದಿದ್ರು ಗೊತ್ತಾ
ಕಿರುತೆರೆ ಕಾಮಿಡಿ ಕಲಾವಿದರಾದ ಸುಶ್ಮೀತಾ (Sushmita) ಹಾಗೂ ಜಗದೀಶ್ ಕುಮಾರ್ (Jagappa) ರವರು ನವೆಂಬರ್ 20ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಇವರ ಮದುವೆ ಕಾರ್ಯಕ್ರಮದಲ್ಲಿ ಸಿನಮಾರಂಗದ ಕಲಾವಿದರು ಹಾಗೂ ಕನ್ನಡ ಕಿರುತೆರೆ ಕಾಮಿಡಿ ರಿಯಾಲಿಟಿ ಷೋ , ಸೀರಿಯಲ್ ಕಲಾವಿದರು ಕೂಡ ಭಾಗಿಯಾಗಿ ಶುಭಹಾರೈಸಿದ್ದಾರೆ. ಮದುವೆ ಸಮಾರಂಭದಲ್ಲಿ ಯಾರೆಲ್ಲಾ ಬಂದಿದ್ರು ಎಂದು ತಿಳಿದುಕೊಳ್ಳಲು ಮುಂದೆ ಓದಿ.
ಸುಶ್ಮೀತಾ ಮತ್ತು ಜಗಪ್ಪರವರು ಬಹಳ ವರ್ಷದಿಂದ ಪ್ರೀತಿಸಿ ಇದೀಗ ಕುಟುಂಬದವರ ಒಪ್ಪಿಗೆ ಪಡೆದು ತುಂಬಾ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ.ನವೆಂಬರ್ 19ರಂದು ಶನಿವಾರ ರಾತ್ರಿ ಆಯೋಜನೆ ಮಾಡಿದ್ದ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಕೂಡ ಕೆಲವು ಸ್ನೇಹಿತರು ಬಂದಿದ್ದರು, ರಾತ್ರಿ ನಡೆದ ಆರತಕ್ಷತೆಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ಪ್ರಜ್ವಲ್ ದೇವರಾಜ್ , ಅಮೂಲ್ಯ ಪತಿ ಜಗದೀಶ್, ಸಿಹಿ ಕಹಿ ಚಂದ್ರು ದಂಪತಿ , ವಿಜಯ್ ಸೂರ್ಯ, ನೇಹಾ ಗೌಡ, ಅನುಪಮಾ ಗೌಡ ಸೇರಿದಂತೆ ಇನ್ನೂ ಕೆಲವು ಕಿರುತೆರೆ ನಟರುಗಳು ಆರತಕ್ಷತೆಯಲ್ಲಿ ಭಾಗಿಯಾಗಿದ್ದರು.Vasuki Vaibhav Marriage : ಸಂಭ್ರಮದಲ್ಲಿ ನಟಿ ಮೇಘನಾರಾಜ್ ಭಾಗಿ

ನಟಿ ಸುಶ್ಮೀತಾ ಮದುವೆಯಲ್ಲಿ ಜನಪ್ರಿಯ ನಟಿ ಸುಧಾರಾಣಿ
ನಟಿ ಸುಧಾರಾಣಿ ಸಿನಿಮಾ ಮಾತ್ರವಲ್ಲದೆ ಇದೀಗ ಕೆಲವು ವರ್ಷಗಳಿಂದ ಕಿರುತೆರೆ ಧಾರಾವಾಹಿಗಳಲ್ಲೂ ನಟನೆ ಮಾಡುತ್ತಿದ್ದಾರೆ. ಈ ಹಿಂದೆ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡ ಸುಧಾರಾಣಿ ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ತುಳಸಿ ಪಾತ್ರದಲ್ಲಿ ನಟನೆ ಮಾಡುತ್ತ ಇನ್ನಷ್ಟು ಜನಪ್ರಿಯರಾಗಿದ್ದಾರೆ. ಇನ್ನೂ ಈ ಸೀರಿಯಲ್ ನಲ್ಲಿ ನಟಿ ಸುಶ್ಮೀತಾ ಕೂಡ ಚಿಕ್ಕ ಪಾತ್ರ ಮಾಡಿದ್ದು. ಮಾಧವ ರವರ ಕೆಫೆಯಲ್ಲಿ ಬರುವ ಪಾತ್ರದಲ್ಲಿ ನಟನೆ ಮಾಡಿದ್ದಾರೆ, ಇದರಿಂದ ಪರಿಚಯವಾಗಿರುವ ಸುಶ್ಮೀತಾ ಮತ್ತು ನಟಿ ಸುಧಾರಾಣಿ ತುಂಬಾ ಆತ್ಮೀಯರಾಗಿದ್ದಾರೆ. ಹಾಗಾಗಿ ಸುಶ್ಮೀತಾ ಜಗಪ್ಪ ಮದುವೆಯಲ್ಲಿ ಸುಧಾರಾಣಿ ಕೂಡ ಭಾಗಿಯಾಗಿ ನವದಂಪತಿಗೆ ವಿಶ್ ಮಾಡಿದ್ದಾರೆ.
ಭಾನುವಾರ ಮದುವೆಯಾದ ಜಗಪ್ಪ ಸುಶ್ಮೀತಾ ಮದುವೆಯಲ್ಲಿ ಲಚ್ಚಿ ಸೀರಿಯಲ್ ಕಲಾವಿದರು ಹಾಗೂ ಮಜಾಭಾರತ ,ಗಿಚ್ಚಿ ಗಿಲಿಗಿಲಿ , ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚುಲರ್ ರಿಯಾಲಿಟಿ ಷೋಗಳ ಸ್ನೇಹಿತರು ಆದ ಮಂಜು ಪಾವಗಡ, ನಿರಂಜನ್ ದೇಶಪಾಂಡೆ ದಂಪತಿ, ಚಂದನ್ ಕುಮಾರ್, ಕವಿತಾ ಗೌಡ, ಶಿವು , ಸಿತಾರ, ನಟ ಡಾರ್ಲಿಂಗ್ ಕೃಷ್ಣ, ಮಾಸ್ಟರ್ ಆನಂದ್ ದಂಪತಿ, ವಂಶಿಕಾ ಸೇರಿದಂತೆ ಸಾಕಷ್ಟು ಕಿರುತೆರೆ ನಟರು ಬಂದಿದ್ದರು.
Sushmita Jagappa marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಜೋಡಿ
ನಟಿ ಸುಶ್ಮೀತಾ ಮಜಾಭಾರತ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು, ಇದೀಗ ಕಾಮಿಡಿ ಷೋಗಳ ಜೊತೆಗೆ ನಮ್ಮ ಲಚ್ಚಿ , ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಪಾತ್ರ ನಿರ್ವಹಣೆ ಮಾಡಿದ್ದಾರೆ. ಜೊತೆಗೆ ಯೂಟ್ಯೂಬ್ ನಲ್ಲಿ ಸಾಕಷ್ಟು ಕಾಮಿಡಿ ಕಿರುಚಿತ್ರಗಳಲ್ಲಿ ನಟನೆ ಮಾಡಿ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.ಇದೀಗ ತಮ್ಮ ಇಷ್ಟದ ಕಾಮಿಡಿ ನಟನನ್ನೇ ಮದುವೆಯಾಗಿರುವ ಸುಶ್ಮೀತಾ ಮುಂದೆ ಜಗಪ್ಪ ಜೊತೆ ಸಂತೋಷವಾಗಿರಲಿ ಎಂದು ನಮ್ಮ ಮಸ್ತ್ ಕನ್ನಡ ಪೇಜ್ ಮೂಲಕ ಶುಭ ಹಾರೈಸುತ್ತೇವೆ.