ಸ್ಯಾಂಡಲ್ ವುಡ್ ನಟ-ನಟಿಯರ ನಿಜವಾದ ಹೆಸರುಗಳೇನು ನೋಡಿ.!
ಕನ್ನಡ ಚಿತ್ರರಂಗದ ಸಾಕಷ್ಟು ನಟ ನಟಿಯರು ತಮ್ಮ ಬಾಲ್ಯದಲ್ಲಿ ಬೇರೆ ಹೆಸರು ಹಾಗೂ ಚಿತ್ರರಂಗಕ್ಕೆ ಬಂದ ಮೇಲೆ ಇನ್ನೊಂದು ಹೆಸರು. ಇನ್ನೂ ಕೆಲವು ಕಲಾವಿದರು ತಮ್ಮ ಸಿನಿ ಜೀವನದ ಯಶಸ್ಸಿಗಾಗಿ ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡಿರುವ ಸಾಕಷ್ಟು ನಟ ನಟಿಯರು ನಮ್ಮ ಕನ್ನಡ ಚಿತ್ರರಂಗದಲ್ಲಿದ್ದಾರೆ.ಅವರು ಯಾರು ಅವರ ಮೊದಲ ಹೆಸರೇನು ಎಲ್ಲವನ್ನೂ ಕಂಪ್ಲೀಟ್ ಆಗಿ ಈ ಪುಟದ ಮೂಲಕ ತಿಳಿಸಿಕೋಡ್ತಿವಿ ನೋಡಿ.
ಕಿರುತೆರೆಯಲ್ಲಿ ನಂ1 ಸ್ಥಾನ ಬಿಟ್ಟು ಕೊಡದ ಸೀರಿಯಲ್ ಇದು
ಕನ್ನಡ ನಟರ ಮೊದಲ ಹೆಸರಿನ ಪಟ್ಟಿ
- ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೊದಲ ಹೆಸರು – ಲೋಹಿತ್
- ಸತೀಶ್ ನಿನಸಾಂ ರವರ ಮೊದಲ ಹೆಸರು – ಶಿವಕುಮಾರ್
- ರೆಬೆಲ್ ಸ್ಟಾರ್ ಅಂಬರೀಶ್ ಮೊದಲ ಹೆಸರು – ಮಳವಳ್ಳಿ ಹುಚ್ಚೇಗೌಡ ಅಮರ್ ನಾಥ್
- ಸಾಹಸ ಸಿಂಹ ವಿಷ್ಣುವರ್ಧನ್ ರ ಇನ್ನೊಂದು ಹೆಸರು – ಸಂಪತ್ ಕುಮಾರ್
- ಕರ್ನಾಟಕ ಆರಾಧ್ಯ ದೈವ ಡಾ.ರಾಜ್ ಕುಮಾರ್ ಮೊದಲ ಹೆಸರು -ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು
- ಕಾಂತಾರ (Kantara Chapter-1) ಖ್ಯಾತಿಯ ಜನಪ್ರಿಯ ನಟ ರಿಷಬ್ ಶೆಟ್ಟಿ ಮೊದಲ ಹೆಸರು – ಪ್ರಶಾಂತ್ ಶೆಟ್ಟಿ
- ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಹೆಸರು – ಹೇಮಂತ್ ಕುಮಾರ್
- ಕೆ ಜಿ ಎಫ್ (KGF chapter-3) ರಾಕಿಂಗ್ ಸ್ಟಾರ್ ಯಶ್ ಮೊದಲ ಹೆಸರು – ನವೀನ್ ಕುಮಾರ್
- ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮೊದಲ ಹೆಸರು – ನಾಗರಾಜು ಶಿವ ಪುಟ್ಟಸ್ವಾಮಿ
ಕನ್ನಡ ನಟಿಯರ ಮೊದಲ ಹೆಸರಿನ ಪಟ್ಟಿ
- ಪೂಜಾ ಗಾಂಧಿ ಮೊದಲ ಹೆಸರು – ಸಂಜನಾ ಗಾಂಧಿ
- ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲ ಹೆಸರು – ಬಿಂದಿಯಾ ರಾಮ್
- ಸ್ಯಾಂಡಲ್ ವುಡ್ ಕ್ವೀನ್ ಹಾಗೂ ಮೋಹಕ ತಾರೆ ರಮ್ಯಾ ರವರ ಮೊದಲ ಹೆಸರು – ದಿವ್ಯಾ ಸ್ಪಂದನಾ
- ಜೋಗಿ ಪ್ರೇಮ್ ಪತ್ನಿ ರಕ್ಷಿತಾರವರ ಮೊದಲ ಹೆಸರು – ಶ್ವೇತಾ
- ಕನ್ನಡದ ಜನಪ್ರಿಯ ನಟಿ ಶ್ರುತಿ ಮೊದಲ ಹೆಸರು – ಗಿರಿಜಾ
- ನಟಿ ಮಾಲಾಶ್ರೀ ರವರ ಮೊದಲ ಹೆಸರು – ಶ್ರೀದುರ್ಗಾ
- ಆರಾಧನಾ ರಾಮ್ ಮೊದಲ ಹೆಸರು – ರಾಧನಾ ರಾಮ್
ಕನ್ನಡ ಚಿತ್ರರಂಗದ ಜನಪ್ರಿಯ ಕಲಾವಿದರು ತಮ್ಮ ವಯಕ್ತಿಕ ಹಾಗೂ ಯಶಸ್ಸಿನ ಕಾರಣಗಳಿಗೆ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಮೇಲೆ ಜೀವನದಲ್ಲಿ ತುಂಬಾ ಪಾಸಿಟಿವ್ ವೈಬ್ಸ್ ಹೆಚ್ಚಾಗಿದೆ ಎನ್ನುತಾರೆ ಕೆಲವು ನಟ ನಟಿಯರು. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟರ ಮೊದಲ ಹೆಸರುಗಳನ್ನು ಕೇಳಿದಾಗ ಖುಷಿಯಾಗುತ್ತಾರೆ. ಇನ್ನೂ ನಟ ನಟಿಯರಿಗೆ ಈ ಹೆಸರುಗಳಲ್ಲದೇ ಸಾಕಷ್ಟು ಬಿರುದುಗಳು ಹಾಗೆನೇ ಇನ್ನಷ್ಟು ಹೆಸರಿಂದ ಅಭಿಮಾನಿಗಳು ಕರೆಯುವುದರಿಂದ ಕಲಾವಿದರಿಗೆ ತುಂಬಾ ಹೆಸರುಗಳಿವೆ.ನಿಮಗೂ ಈ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇವೆ ಇನ್ನಷ್ಟು ಹೊಸ ಮಾಹಿತಿಗಳ ಆಸಕ್ತಿದಾಯಕ ಲೇಖನಗಳಿಗೆ ನಮ್ಮ ಪುಟವನ್ನು ಕಂಪ್ಲೀಟ್ ಆಗಿ ನೋಡಿ, ಧನ್ಯವಾದಗಳು.