ಕಿರುತೆರೆಯಲ್ಲಿ ನಂ1 ಸ್ಥಾನ ಬಿಟ್ಟು ಕೊಡದ ಸೀರಿಯಲ್ ಇದು

Spread the love

ಕನ್ನಡ ಕಿರುತೆರೆ ಲೋಕದಲ್ಲಿ ಹಿಂದಿನಿಂದಲೂ ಸಾಕಷ್ಟು ಧಾರವಾಹಿಗಳನ್ನು ನಾವು ನೀವೆಲ್ಲರೂ ನೋಡಿ ಮನರಂಜನೆ ಪಡೆದುಕೊಂಡಿದ್ದೇವೆ. ಕೆಲವು ವರ್ಷಗಳ ಹಿಂದಿನ ಧಾರವಾಹಿಗಳಿಗೂ ಇವಾಗಿನ ಸೀರಿಯಲ್ ಗಳಿಗೂ ಬೇಜಾನ್ ವ್ಯತ್ಯಾಸವನ್ನು ಕಾಣಬಹುದು. ಜೊತೆಗೆ ಇವತ್ತಿನ ಸೀರಿಯಲ್ ಕಥೆಗಳು ಕೂಡ ಯಾವ ಸಿನಿಮಾ ಕಥೆಗಳಿಗೂ ಕಮ್ಮಿಯಿಲ್ಲ ಹಾಗೂ ಶೂಟಿಂಗ್ ಮಾಡುವ ರೀತಿ ಎಲ್ಲವೂ ಸಿನಿಮಾ ಚಿತ್ರತಂಡವನ್ನು ಹೊಲುತ್ತದೆ. ಹಾಗಾಗಿ ಇವತ್ತಿನ ಸಿನಿಮಾರಂಗದ ಚಿತ್ರಗಳ ರೀತಿಯೇ ಕಿರುತೆರೆ ಷೋಗಳು ಕೂಡ ಅಷ್ಟು ಅಚ್ಚುಕಟ್ಟಾಗಿ ರೆಡಿಯಾಗ್ತಿವೆ ಎಂದರೆ ತಪ್ಪಾಗಲ್ಲ.ಇನ್ನೂ ನಾವಿವತ್ತು ಕನ್ನಡ ಕಿರುತೆರೆಯ ನಂ1 ಸ್ಥಾನ ಪಡೆದುಕೊಂಡಿರುವ ಸೀರಿಯಲ್ ಬಗ್ಗೆ ತಿಳಿಸಲಿದ್ದೇವೆ.

ಕಿರುತೆರೆಯಲ್ಲಿ ಸಾಕಷ್ಟು ವಾಹಿನಿಗಳು ಬಹಳ ವಿಭಿನ್ನ ರೀತಿಯ ಕಥೆಯುಳ್ಳ ಸೀರಿಯಲ್ ಗಳನ್ನೂ ವೀಕ್ಷಕರ ಮುಂದೆ ಪ್ರಸುತ್ತ ಪಡಿಸುತ್ತಲೇ ಇರುತ್ತಾರೆ. ಕಿರುತೆರೆಯಲ್ಲೂ ವಾಹಿನಿಗಳ ನಡುವೆ ಸಾಕಷ್ಟು ಪೈಪೋಟಿ ನಡೆಯುತ್ತಲೇ ಇರುತ್ತದೆ. ಇದನ್ನು ಟಿಆರ್ಪಿ (TRP – Television Ratings Points ) ಮತ್ತು ಟಿವಿಆರ್ ( TVR – Tele vision Ratings ) ಇದರಿಂದ ಯಾವ ಚಾನೆಲ್ ಟಾಪ್ ನಲ್ಲಿದೆ ಯಾವುದು ಯಾವ ಸ್ಥಾನದಲ್ಲಿದೆ ಮತ್ತು ಯಾವ ಸೀರಿಯಲ್, ಷೋ ಯಾವ ಸ್ಥಾನದಲ್ಲಿದೆ ಎಂಬುದನ್ನು ಅಳೆಯಲಾಗುತ್ತದೆ.ಇದರಿಂದಲೇ ವಾಹಿನಿಗಳು ಒಳ್ಳೆಯ ಆದಾಯದ ಮೂಲ ಕಂಡುಕೊಳ್ಲುತ್ತವೇ.Puttakkana Makkalu Serial : ಕಂಠಿ ಸ್ನೇಹಾ ನಿಜಜೀವನದ ಕಿರು ಪರಿಚಯ

ಕರ್ನಾಟಕದಲ್ಲಿ ಇವಾಗ ಮೊದಲ ಸ್ಥಾನದಲ್ಲಿರುವ ವಾಹಿನಿಗಳು ಯಾವುದು ಎಂದು ನಿಮಗೆ ತಿಳಿದಿದೆ. ಸೀರಿಯಲ್ ಹಾಗೂ ಷೋಗಳ ಸರದಿಯಲ್ಲಿ ಹಲವು ಸೀರಿಯಲ್ ಗಳೂ ಪ್ರತಿವಾರ ತುಂಬಾ ಕಾಂಪಿಟೇಷನ್ ನಲ್ಲಿವೆ.‌ ಆದರೆ ಒಂದು ಸೀರಿಯಲ್ ಮಾತ್ರ ವರ್ಷಗಳಿಂದಲೂ TVRನಲ್ಲಿ ನಂಬರ್ ಓನ್ ಸ್ಥಾನದಲ್ಲಿದೆ. ಪ್ರತಿವಾರ ಯಾವ ಸೀರಿಯಲ್ ಗೂ ಆ ಪ್ಲೇಸ್ ಬಿಟ್ಟುಕೊಡದ ಸೀರಿಯಲ್ ಇದಾಗಿದೆ. ಇನ್ನೂ ಈ ಧಾರವಾಹಿಯನ್ನು ನೀವು ಕೂಡ ನೋಡಿರ್ತೀರಾ ಅದು ಇನ್ಯಾವುದು ಅಲ್ಲ ಕನ್ನಡದ ಜನಪ್ರಿಯ ಸೀರಿಯಲ್ ಪುಟ್ಟಕ್ಕನ ಮಕ್ಕಳು ( Puttakkana Makkalu Kannada serial ).

ಎರಡು ವರ್ಷಗಳ ಹಿಂದೆ ಸಾಮಾನ್ಯವಾಗಿ ಶುರುವಾದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೊದಲ ವಾರದಲ್ಲೇ ದಾಖಲೆ ಟಿಆರ್ಪಿ ಮೂಲಕ ಸುದ್ದಿಮಾಡಿತ್ತು. ಈ ಸೀರಿಯಲ್ ನಿರ್ದೇಶಕ ಹಾಗೂ ನಿರ್ಮಾಪಕ ಆರೂರು ಜಗದೀಶ್ (Aroor jagadeesh ). ಪುಟ್ಟಕ್ಕನ ಮಕ್ಕಳು ಸೀರಿಯಲ್ ಶುರುವಾದಾಗ ನಂ1 ಸ್ಥಾನದಲ್ಲಿ ಬೇರೆ ಸೀರಿಯಲ್ ಇತ್ತು ಅದು ಕೂಡ ಆರೂರು ಜಗದೀಶ್ ನಿರ್ಮಾಣ ಮತ್ತು ನಿರ್ದೇಶನದ ಜೊತೆ ಜೊತೆಯಲಿ (Jothe jotheyali Serial ) ಧಾರವಾಹಿ. ಇನ್ನೂ ಕೆಲವು ಕಾರಣಾಂತರಗಳಿಂದ ಈ ಸೀರಿಯಲ್ ನಾಯಕನಟ ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ಅನಿರುಧ್ ಜತ್ಕರ್ ರವರು ಸೀರಿಯಲ್ ನಿಂದ ಹೊರಬಂದರು. ನಂತರ ಸೀರಿಯಲ್ ಟಿವಿಆರ್ ಕಾಲಕ್ರಮೇಣ ಕಡಿಮೆಯಾಗುತ್ತ ಬಂತು ನಂತರ ಪುಟ್ಟಕ್ಕನ ಮಕ್ಕಳು ಸೀರಿಯಲ್ ರೇಟಿಂಗ್ಸ್ ಹೆಚ್ಚಾಯ್ತು. 2019ರಲ್ಲಿ ಶುರುವಾದ ಜೊತೆ ಜೊತೆಯಲಿ 2023ರಲ್ಲಿ ಮುಕ್ತಾಯಗೊಂಡಿತು. ಹಾಗಾಗಿ ಇವತ್ತಿನ ರೇಸ್ ನಲ್ಲಿ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನದಲ್ಲಿದೆ. ಇನ್ನೂ ಈ ಸೀರಿಸ್ ನಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ನಟಿ ಉಮಾಶ್ರೀ ಕಾಣಿಸಿಕೊಂಡಿರೋದು ಕೂಡ ಈ ಜನಪ್ರಿಯತೆಗೆ ಕಾರಣ.

ಹಳ್ಳಿ ಸೊಗಡಿನ ಕಥೆಯುಳ್ಳ ಈ ಧಾರವಾಹಿ ಮಂಡ್ಯ ಮೈಸೂರು ಭಾಗ ಭಾಷೆಯ ಮೂಲಕ ಜನಗಳನ್ನು ಹಾಗೂ ಹಳ್ಳಿಯವರನ್ನು ತನ್ನಂತ ಹಿಡಿದು ಇಟ್ಟುಕೊಂಡಿದೆ. ಪಾತ್ರಗಳು ಕೂಡ ಬಹಳ ವಿಶೇಷತೆ ಗಳಿಂದ ಕೂಡಿದ್ದು ಜನಗಳಿಗೆ ಈ ಸೀರಿಯಲ್ ನಲ್ಲಿ ಬಂಗಾರಮ್ಮನ ಪಾತ್ರ ಇಷ್ಟವಾಗಿದೆ. ಜೊತೆಗೆ ನಾಯಕ ಕಂಠಿ, ನಾಯಕಿ ಸ್ನೇಹಾ , ಪುಟ್ಟಕ್ಕನ ಮಕ್ಕಳು ಹಾಗೂ ಎಲ್ಲಾ ಕಲಾವಿದರು ಅದ್ಭುತ ನಟನೆ ಮಾಡಿದ್ದು ಈ ಜನಪ್ರಿಯತೆಗೆ ಕಾರಣವಾಗಿದೆ. ಕಲರ್ಸ್ ವಾಹಿನಿ ಸೀರಿಯಲ್ ಗಳು ಹಾಗೂ ಜೀ ಸೀರಿಯಲ್ ಗಳಾದ ಅಮೃತಧಾರೆ, ಗಟ್ಟಿಮೇಳ, ಸೀತಾರಾಮ, ಸತ್ಯ ಧಾರವಾಹಿಗಳು ನಂಬರ್ ಓನ್ ಸಾಕಷ್ಟು ಪೈಪೋಟಿ ನಡೆಸುತ್ತಲೇ ಇವೆ. ಇನ್ನೂ ಈ ಸೀರಿಯಲ್ ಮುಂದೆಯು ಇನ್ನಷ್ಟು ಯಶಸ್ಸನ್ನು ಕಾಣಲಿ ಜೊತೆಗೆ ಸಾವಿರ ಸಂಚಿಕೆಗಳನ್ನೂ‌ ಪೂರೈಸಲಿ ಎಂದು ಹಾರೈಸುತ್ತಾ ಈ ಲೇಖನವನ್ನು ಮುಗಿಸುತ್ತೇವೆ.

You may also like...

Leave a Reply

Your email address will not be published. Required fields are marked *

You cannot copy content of this page