Kantara 2 : ಸದ್ಯದಲ್ಲೇ ಫಸ್ಟ್ ಲುಕ್ ರಿಲೀಸ್.!
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab shetty) ಅಭಿನಯದ ಕಾಂತಾರ ಸಿನಿಮಾ 2022ರಲ್ಲಿ ತೆರೆಕಂಡು ಅದ್ಬುತ ಯಶಸ್ಸನ್ನು ಕಂಡಿತ್ತು. ಕಾಂತಾರ ಚಿತ್ರ ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರ ತೆರೆಕಂಡು ಅನಂತರ ಸಿನಿಮಾ ಜನಪ್ರಿಯತೆಗೊಂಡ ನಂತರ ಬೇರೆ ಭಾಷೆಯಲ್ಲೂ ಡಬ್ಬಿಂಗ್ ಆಗಿ ಭಾರತಾದ್ಯಂತ ಬಿಡುಗಡೆಗೊಂಡು ಕನ್ನಡ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಕರೆತಂದಿತು. ಇದೀಗ ಕಾಂತಾರ ಸಿನಿಮಾ ಚಿತ್ರತಂಡದಿಂದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.
ಈ ಹಿಂದೆ ರಿಷಬ್ ಶೆಟ್ಟಿ ಕೂಡ ಕಾಂತಾರ ಚಿತ್ರ ಇಷ್ಟೆಲ್ಲಾ ಹಿಟ್ ಆಗುತ್ತೆ ಅಂದು ಕೊಂಡಿರಲಿಲ್ಲ ಆದರೆ ಸಿನಿಮಾ ಬಿಡುಗಡೆ ನಂತರ ನಡೆದದ್ದೇ ಅದ್ಬುತ. ಕರ್ನಾಟಕ ಮಾತ್ರವಲ್ಲದೆ ಇಡೀ ವಿಶ್ವವೇ ಕಾಂತಾರವನ್ನೂ ಮೆಚ್ಚಿಕೊಂಡಿದೆ. ಅಂದಾಜು 20 ಕೋಟಿಯ ಬಜೆಟ್ ನಲ್ಲಿ ತಯಾರಾದ ಈ ಸಿನಿಮಾ ನಿರೀಕ್ಷೆಗೂ ಮಿರಿ ಸರಿಸುಮಾರು 400+ಕೋಟಿಯನ್ನು ಬಾಚಿಕೊಂಡಿದೆ.ಜೊತೆಗೆ ಕರ್ನಾಟಕದಲ್ಲಿ ಒಳ್ಳೆಯ ಪ್ರದರ್ಶನ ಕಂಡಿದೆ ಹಾಗೂ ಎಲ್ಲಾ ಅಭಿಮಾನಿಗಳು ಸಿನಿಮಾವನ್ನು ಸಾಕಷ್ಟು ಬಾರಿ ನೋಡಿ ಪ್ರೋತ್ಸಾಹಿದ್ದಾರೆ.
Rishab Shetty : ಪ್ರಶಾಂತ್ ಶೆಟ್ಟಿ ರಿಷಬ್ ಶೆಟ್ಟಿ ಆಗಿದ್ದೇಗೆ?
ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡ ಎಲ್ಲಾ ಪ್ರೇಕ್ಷಕರು ಪಾರ್ಟ್ 2 ಯಾವಾಗ ಎನ್ನುತ್ತಿದ್ದರು.ಇನ್ನೂ ಆ ಸಂದರ್ಭದಲ್ಲಿ ಎಲ್ಲರಿಗೂ ಶಾಕ್ ಕೊಟ್ಟ ರಿಷಬ್ ಶೆಟ್ಟಿ `ಇವಾಗ ನೀವು ಏನ್ ನೋಡಿದಿರಾ ಅದೇ ಪಾರ್ಟ್ 2, ಏನಿಂದ್ರು ಪಾರ್ಟ್ 1 ಬರ್ಬೇಕು ಅಷ್ಟೇ ಇವಾಗ ‘ ಎಂದಿದ್ದರು.ಇನ್ನೂ ವಿಷಯ ಕೇಳಿ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಒಂದುಕ್ಷಣ ಆಶ್ಚರ್ಯ ಗೊಂಡಿದ್ದರು.
ಒಂದು ವರ್ಷದಿಂದ ಕಾಂತಾರ ಹೊಸ ಸಿನಿಮಾಗಾಗಿ ಹಾಗೂ ಅಪ್ಡೇಟ್ಸ್ ಗಳಿಗಾಗಿ ಫ್ಯಾನ್ಸ್ ಕಾದು ಕುಳಿತ್ತಿದ್ದರು. ಇದೀಗ ಹೊಂಬಾಳೆ ಫಿಲ್ಮ್ಸ್ ಗುಡ್ ನ್ಯೂಸ್ ಕೊಟ್ಟಿದೆ. ಇದೇ ನವೆಂಬರ್ 27, ಸೋಮವಾರ ಮಧ್ಯಾಹ್ನ 12:25ಕ್ಕೆ ಕಾಂತಾರ – ಚಾಪ್ಟರ್ 1 (Kantara – Chapter 1) ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಲಿದೆ. ಎಂದು ಚಿತ್ರದ ನಾಯಕನಟ ರಿಷಬ್ ಶೆಟ್ಟಿ ಹಾಗೂ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಪ್ರೊಡಕ್ಷನ್ ಅಧಿಕೃತ ವಾಗಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಈ ವಿಚಾರಗಳನ್ನು ಹಂಚಿಕೊಂಡಿದೆ.
ವಿಷಯ ತಿಳಿದ ಅಭಿಮಾನಿಗಳು ಈಗಾಗಲೇ ಕಾತುರದಿಂದ ಟೀಸರ್ ನೋಡಲು ಕಾಯುತ್ತಿದ್ದಾರೆ. ಕಾಂತಾರ ಚಾಪ್ಟರ್ 1 ಮೇಲೆ ನಿರೀಕ್ಷೆ ದುಪ್ಪಟಾಗಿದ್ದು ಸಿನಿಮಾ ಯಾವ ರೀತಿ ಮತ್ತು ಎಷ್ಟು ವಿಶೇಷವಾಗಿ ಇರಲಿದೆ ಎಂದು ಕಾದುನೋಡಬೇಕಿದೆ.ಇನ್ನೂ ಸಿನಿಮಾ ರಿಷಬ್ ಶೆಟ್ಟಿ ಅವರೇ ನಿರ್ದೇಶನ ಮಾಡಲಿದ್ದಾರೆ ಹಾಗೂ ನಿರ್ಮಾಣ ಕೂಡ ವಿಜಯ್ ಅವರ ಹೊಂಬಾಳೆ ಫಿಲ್ಮ್ ಮಾಡಲಿದೆ.