ಸನ್‌ನೆಕ್ಸ್ಟ್‌ನಲ್ಲಿ ಕೃಷ್ಣಂ ಪ್ರಣಯ ಸಖಿ.! Movie on SunNXT OTT

ಕನ್ನಡಿಗರ ಮನಸ್ಸಿಗೆ ಮುದ ನೀಡಿದ ಈ ವರ್ಷದ ಸೂಪರ್ ಹಿಟ್ ಕೌಟಂಬಿಕ ಚಿತ್ರ ’ಕೃಷ್ಣ ಪ್ರಣಯ ಸಖಿ’ ಇದೇ ನವೆಂಬರ್ 29ರಿಂದ ನಿಮ್ಮ ಮೆಚ್ಚಿನ ’ಸನ್ ನೆಕ್ಸ್ಟ್’ ಡಿಜಿಟಲ್ ಪ್ರೀಮಿಯರ್ ಆಗಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಮೊದಲ ಬಾರಿ ನಾಯಕಿಯಾಗಿ ನಟಿಸಿದ ಯುವ ಪ್ರತಿಭೆ ಮಾಳವಿಕ ನಾಯರ್ ಚಿತ್ರವು ನೋಡುಗರ ಮನಸೂರೆಗೊಂಡು ಸದ್ದು ಮಾಡಿತ್ತು. ಇದೀಗ ಸನ್ ನೆಕ್ಸ್ಟ್ ಪ್ರೀಮಿಯರ್ ಆಗಿ ನಿಮ್ಮ ಮನಸ್ಸನ್ನು ಮತ್ತೋಮ್ಮೆ ಗೆಲ್ಲಲಿದೆ. ಮುದ ನೀಡುವ ಹಾಡುಗಳು, ಹಾಸ್ಯ, ಪ್ರೇಮ ಸಲ್ಲಾಪದ ಜತೆ ಸಾಗುವ ಅನಿರೀಕ್ಷಿತ ಪಯಣವನ್ನು ಇದೇ 29ರಿಂದ ತಪ್ಪದೆ ನೋಡಿ ಆನಂದಿಸಿರಿ.