Legend Director : ಸಿನಿಮಾದೊಳಗೊಂದು ಸಿನಿಮಾ.!

Spread the love

ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ ’ಲೆಜೆಂಡ್ ಡೈರಕ್ಟರ್’ ಚಿತ್ರವು ಸಿನಿಮಾ ತಂತ್ರಜ್ಘನ ಕಥೆಯನ್ನು ಹೇಳಲಾಗಿದೆ. ಹಳ್ಳಿ ಹುಡುಗನೊಬ್ಬ ಇಂಜಿನಿಯರ್ ಮುಗಿಸಿದ್ದರೂ, ತಾನೊಬ್ಬ ನಿರ್ದೇಶಕನಾಗಬೇಕೆಂದು ಪಣತೊಟ್ಟು ಅಮ್ಮನಿಗೆ ಸವಾಲು ಹಾಕಿ, ಚಿತ್ರರಂಗದ ಕೇಂದ್ರಸ್ಥಳ ಗಾಂಧಿನಗರಕ್ಕೆ ಬರುತ್ತಾನೆ. ಸ್ನೇಹಿತ ಆಶ್ರಯ ಕೊಡುವುದು ಅಲ್ಲದೆ ಒಂದಷ್ಟು ತಂತ್ರಜ್ಘರಿಗೆ ಈತನ ಹೆಸರನ್ನು ಶಿಪಾರಸ್ಸು ಮಾಡುತ್ತಿರುತ್ತಾನೆ. ಇದರಿಂದ ನಿರ್ಮಾಪಕರುಗಳು ಸಿಗುತ್ತಾರೆ. ಹಾಗಂತ ಕೆಲಸ ಸುಲಭವಾಗಿರುವುದಿಲ್ಲ.

ಒಬ್ಬ ನಿರ್ಮಾಪಕ ಎಲ್ಲವನ್ನು ಕೇಳಿ ನಿನಗೆ ಅನುಭವ ಇಲ್ಲ. ಮೊಬೈಲ್‌ದಲ್ಲಿ ಎರಡು ನಿಮಿಷದ ಕಿರುಚಿತ್ರ ಮಾಡಿಕೊಂಡು ಬಾ ನೋಡುವ, ಎಂದು ಅಸಡ್ಡೆ ತೋರಿಸುತ್ತಾರೆ. ಮತ್ತೋಬ್ಬರು ತನ್ನ ದಡೂತಿ ಮಗಳನ್ನು ನಾಯಕಿ ಮಾಡಿದರೆ ಮಾತ್ರ ಹಣ ಹಾಕುತ್ತೇನೆಂದು ಷರತ್ತು ಹಾಕುತ್ತಾರೆ. ಹೀಗೆ ಯಾರನ್ನೇ ಭೇಟಿ ಮಾಡಿದರೂ ಹಣ ಹೂಡಲು ಮುಂದೆ ಬರುತ್ತಿರುವುದಿಲ್ಲ. ಬೇಸರಗೊಂಡ ಆತನು ಸಾಧಿಸಬೇಕೆಂದು ತೀರ್ಮಾನಿಸಿ ಮೊಬೈಲ್‌ದಲ್ಲಿ ಶೂಟ್ ಮಾಡಿ, ಅದನ್ನು ಕಿರುಚಿತ್ರ ಫೆಸ್ಟಿವಲ್‌ಗೆ ಕಳುಹಿಸುತ್ತಾನೆ. ಇದರ ಮಧ್ಯೆ ಮಾವನ ಮಗಳು ಮದುವೆಯಾಗು ಎಂದು ಕಾಟ ಕೊಡುತ್ತಿರುತ್ತಾಳೆ. ಕೊನೆಗೆ ಈತನ ಪ್ರತಿಭೆಗೆ ಮನ್ನಣೆ ಸಿಗುತ್ತಾ? ಅಥವಾ ಬಂದ ದಾರಿಗೆ ಸುಂಕವಿಲ್ಲವೆಂದು ಮರಳಿ ಊರಿಗೆ ಹೋಗುತ್ತಾನಾ? ಮನೆಯಲ್ಲಿ ಯಾವ ರೀತಿಯ ಗೌರವ ಸಿಗುತ್ತದೆ? ಇಂತಹ ಕುತೂಹಲ ಸನ್ನಿವೇಶಗಳು ಚಿತ್ರವನ್ನು ನೋಡುವಂತೆ ಮಾಡುತ್ತದೆ.

ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ, ನಿರ್ಮಾಣ, ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ನಟಿಸಿರುವ ನ್ಯಾಷನಲ್ ರೆಕಾರ್ಡ್ ಹೋಲ್ಡರ್ ನವಿಲುಗರಿ ನವೀನ್.ಪಿ.ಬಿ. ಎಲ್ಲಾ ಜವಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸಿರುವುದು ಕಂಡು ಬರುತ್ತದೆ. ನಾಯಕಿಯರುಗಳಾಗಿ ರೀತ್ಯಾರಾಘವೇಂದ್ರ ಮತ್ತು ಹರಣಿನಟರಾಜ್ ಅಭಿನಯದಲ್ಲಿ ಇನ್ನು ಪಳಗಬೇಕು. ಸಂದೀಪ್ ಮಲಾನಿ ಕಡಿಮೆ ಅವಧಿಯಲ್ಲಿ ಬಂದರೂ ನಗಿಸುತ್ತಾರೆ. ಅಮ್ಮನಾಗಿ ಮಧುಶ್ರೀ, ಶಿವಕುಮಾರ ಆರಾಧ್ಯ, ಸನತ್ ಮುಂತಾದವರು ನಟಿಸಿದ್ದಾರೆ. ಕ್ಲೈಮಾಕ್ಸ್‌ದಲ್ಲಿ ಹಿರಿಯ ನಿರ್ದೇಶಕ ಸಾಯಿಪ್ರಕಾಶ್, ಕೂಡ್ಲುರಾಮಕೃಷ್ಣ, ಗಾಯಕ ಶಶಿದರಕೋಟೆ, ರಜನಿಕಾಂತ್ ಆಪ್ತ ಗೆಳೆಯ ರಾವ್‌ಬಹದ್ದೂರ್, ಡಾ.ರಾಜ್‌ಕುಮಾರ್ ಮೊಮ್ಮಗ ಷಣ್ಮುಗಗೋವಿಂದರಾಜ್ ಕಾಣಿಸಿಕೊಳ್ಳುತ್ತಾರೆ. ಯುವ ಪ್ರತಿಭೆ ಪ್ರಣವ್‌ಸತೀಶ್ ಸಂಗೀತ ಚಿತ್ರಕ್ಕೆ ಕಳಸ ಇಟ್ಟಂತೆ ಆಗಿದೆ. ಇವರಿಗೆ ಚಿತ್ರರಂಗದಲ್ಲಿ ಭವಿಷ್ಯವಿದೆ. ಛಾಯಾಗ್ರಹಣ-ಸಂಕಲನ ಗೌತಮ್ ಗೌಡ ಅವರದಾಗಿದೆ. ವಿಶಾಲಸತೀಶ್ ಸಹ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ನೋಡುಗರಿಗೆ ’ಲೆಜೆಂಡ್ ಡೈರಕ್ಟರ್’ ಖಂಡಿತ ಮೋಸ ಮಾಡುವುದಿಲ್ಲ.

You may also like...

Leave a Reply

Your email address will not be published. Required fields are marked *

You cannot copy content of this page