ಓಟಿಟಿ ಪ್ಲೇಯರ್‌ ನಲ್ಲಿ ಮಾಲಾಶ್ರೀ ನಟನೆಯ ಮಾರಕಾಸ್ತ್ರ

Spread the love

ಕಳೆದ ವರ್ಷ ’ಮಾರಾಕಾಸ್ತ್ರ’ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಂಡು ಪ್ರಶಂಸೆ ಗಳಿಸಿತ್ತು. ಈಗ ಸಿನಿಮಾ ನೋಡದೆ ಇರುವವರಿಗೆ ಸುವರ್ಣಾವಕಾಶ ಸಿಕ್ಕಿದೆ. ಅಂದರೆ ಇದು ಗೂಗಲ್ ಕ್ರೋಮ್‌ನಲ್ಲಿ ಸಿಗುವ ’www.ottplayer.in’ ವೆಬ್‌ಸೈಟ್‌ದಲ್ಲಿ ಕೇವಲ ರೂ.49 ಪಾವತಿಸಿ ವೀಕ್ಷಿಸಬಹುದಾಗಿದೆ. ಒಂದು ಬಾರಿ ಪಾವಿತಿಸಿದ ಮೇಲೆ 10 ಗಂಟೆಗಳ ಅವಧಿಯಲ್ಲಿ ಮೂರು ಬಾರಿ ಮಾತ್ರ ನೋಡಬಹುದು. ಮತ್ತೆ ನೋಡಬಯಸುವವರು ಮರುಪಾವತಿ ಮಾಡಬೇಕಾಗುತ್ತದೆ. ದೇಶದ ಯಾವುದೇ ಭಾಗದಲ್ಲಾರೂ ಇಂಟರ್‌ನೆಟ್ ಮುಖಾಂತರ ಇದರ ಲಿಂಕ್‌ದಲ್ಲಿ ’ಮಾರಕಾಸ್ತ್ರ’ ನೋಡಬಹುದು.

  ಶ್ರಾವ್ಯ ಕಂಬೈನ್ಸ್ ಲಾಂಛನದಲ್ಲಿ ಕೋಮಲನಟರಾಜ್ ನಿರ್ಮಾಣ ಮಾಡಿದ್ದಾರೆ.  ಗುರುಮೂರ್ತಿಸುನಾಮಿ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ದೇಶದ ದುಷ್ಟಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಪತ್ರಕರ್ತರ ಲೇಖನಿಗಿರುತ್ತದೆ. ಕೆಟ್ಟದ್ದನ್ನು ಕಂಡರೆ ಸಿಡಿದೇಳುವ ಅಸ್ತ್ರವೇ ಶೀರ್ಷಿಕೆ ಅಂತ ಕರೆಯಲಾಗುತ್ತದೆ. ಇದೇ ವಿಷಯದ ಮೇಲೆ ಚಿತ್ರವು ಸಾಗುತ್ತದೆ.

    ನಾಯಕ ಆನಂದ್‌ಆರ್ಯ, ನಾಯಕಿ ಮಾಧುರ್ಯ. ಮತ್ತೋಂದು ಪ್ರಮುಖ ಪಾತ್ರಗಳಲ್ಲಿ ಮಾಲಾಶ್ರೀ ಮತ್ತು ಹರ್ಷಿಕಾಪೂರ್ಣಚ್ಚಾ ನಟಿಸಿದ್ದಾರೆ. ಇವರೊಂದಿಗೆ ಅಯ್ಯಪ್ಪಶರ್ಮ, ಮೈಕೋನಾಗರಾಜ್, ಉಗ್ರಂಮಂಜು, ಭರತ್‌ಸಿಂಗ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಮಿರಾಕಲ್‌ಮಂಜು ಸಾಹಿತ್ಯ ಮತ್ತು ಸಂಗೀತ, ಆರ್.ಕೆ.ಶಿವಕುಮಾರ್ ಛಾಯಾಗ್ರಹಣ ಇರಲಿದೆ.

You may also like...

Leave a Reply

Your email address will not be published. Required fields are marked *

You cannot copy content of this page