Vasuki Vaibhav Marriage : ಸಂಭ್ರಮದಲ್ಲಿ ನಟಿ ಮೇಘನಾರಾಜ್ ಭಾಗಿ
ಗಾಯಕ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ರವರು ಇಂದು ಅದ್ದೂರಿಯಾಗಿ ಕುಟುಂಬದವರ ಸಮ್ಮುಖದಲ್ಲಿ ಸಂಪ್ರದಾಯ ಬದ್ದವಾಗಿ ಮದುವೆಯಾಗಿದ್ದಾರೆ, ಕೆಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದ ವಾಸುಕಿ ವೈಭವ್ ಹಾಗೂ ಬೃಂದಾ ವಿಕ್ರಮ್ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಕನ್ನಡದ ಅತಿದೊಡ್ಡ ರಿಯಾಲಿಟಿ ಷೋ ಆಗಿರುವ ಬಿಗ್ ಬಾಸ್ ಸೀಸನ್ 7 (Bigg boss kannada) ರಲ್ಲಿ ಭಾಗಿಯಾಗಿ 2ನೇ ರನ್ನರ್ ಅಪ್ (2nd RunnerUp) ಆಗಿ ಹೊರಹೊಮ್ಮಿದ್ದರು. ಕನ್ನಡದ ಅನೇಕ ಸಿನಿಮಾಗಳ ಹಾಡಿಗೆ ಧ್ವನಿ ಆಗಿದ್ದಾರೆ ವಾಸುಕಿ ವೈಭವ್.
ವಾಸುಕಿ ವೈಭವ್ ಮತ್ತು ಬೃಂದಾ ಮದುವೆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಕಲಾವಿದರ ಪೈಕಿ ನಟಿ ಮೇಘನಾರಾಜ್ ರವರು ಮಗ ರಾಯನ್ ರಾಜ್ ಸರ್ಜಾ ಜೊತೆ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾರಾಜ್ ತಾಯಿ ಪ್ರಮೀಳ ಕೂಡ ವಾಸುಕಿ ಮದುವೆಯಲ್ಲಿ ಇದ್ದರು. ಸ್ಯಾಂಡಲ್ ವುಡ್ ನಟ ರಾಕ್ಷಸ ಡಾಲಿ ಧನಂಜಯ್ ಹಾಗೂ ಟಗರುಪಲ್ಯ ಚಿತ್ರತಂಡದ ಅನೇಕ ಕಲಾವಿದರು ಕೂಡ ಭಾಗಿಯಾಗಿದ್ದರು. ಇನ್ನೂ ಟಗರುಪಲ್ಯ ಸಿನಿಮಾದಲ್ಲಿ ನಟ ವಾಸುಕಿ ವೈಭವ್ ಕೂಡ ಪಾತ್ರ ನಿರ್ವಹಣೆ ಮಾಡಿದ್ದರು.ಕನ್ನಡದ ಕೆಲವು ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕವು ವೈಭವ್ ಜನಪ್ರಿಯರಾಗಿದ್ದಾರೆ.
Sushmita jagappa marriage : ಯಾರೆಲ್ಲಾ ಗಣ್ಯರು ಬಂದಿದ್ರು ಗೊತ್ತಾ
ಬಿಗ್ ಬಾಸ್ ಖ್ಯಾತಿಯ ಸಾನ್ಯ ಅಯ್ಯರ್ ಕುಟುಂಬ ಹಾಗೂ ನಟಿ ಮೇಘನಾರಾಜ್ ಕುಟುಂಬ ವಾಸುಕಿ ವೈಭವ್ ಮದುವೆಯಲ್ಲಿ ತೆಗೆದುಕೊಂಡಿರುವ ಸುಂದರ ಫೋಟೊಗಳು ಇಲ್ಲಿವೆ ನೋಡಿ. ಇವೆಲ್ಲಾ ಫೋಟೋಗಳನ್ನು ನಟಿ ಸಾನ್ಯ ಅಯ್ಯರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ವಾಸುಕಿ ವೈಭವ್ ಮದುವೆ ಸಮಾರಂಭದಲ್ಲಿ ಬಿಗ್ ಬಾಸ್ ಸ್ನೇಹಿತರು ಕೂಡ ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಶೈನ್ ಶೆಟ್ಟಿ, ದೀಪಿಕಾ ದಾಸ್ ,ಸಾನ್ಯ ಅಯ್ಯರ್ ಸೇರಿದಂತೆ ಬಿಗ್ ಬಾಸ್ ( Bigg boss kannada ) ಸ್ಪರ್ಧಿಗಳು ಬಂದು ನವದಂಪತಿಗೆ ಹ್ಯಾಪಿ ಮ್ಯಾರಿಡ್ ಲೈಫ್ ಎಂದು ಹಾರೈಸಿದ್ದಾರೆ. ಇನ್ನೂ ಸೋಷಿಯಲ್ ಮೀಡಿಯಾದಲ್ಲು ವಾಸುಕಿ ವೈಭವ್ ಅಭಿಮಾನಿಗಳು ಮದುವೆ ಪೋಸ್ಟ್ ಗಳಿಗೆ ಕಾಮೆಂಟ್ ಮಾಡಿ ವಿಶ್ ಮಾಡುತ್ತಿದ್ದಾರೆ.
ನಟ ವಾಸುಕಿ ವೈಭವ್ ಪತ್ನಿ ಬೃಂದಾ ಕೂಡ ನಟನೆ ,ಡಾನ್ಸ್ ಹಾಗೂ ಇನ್ನೂ ಅನೇಕ ಪ್ರತಿಭೆಯುಳ್ಳವರು, ಇನ್ನೂ ಈ ವಿಷಯವನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕಿರುತೆರೆಯ ರಿಯಾಲಿಟಿ ಷೋನಲ್ಲಿ ಹಾಡಿದ್ದ ಮನಸ್ಸಿಂದ ಯಾರನು ಕೆಟ್ಟೋರಲ್ಲ ಸಾಂಗ್ 2019ರಲ್ಲಿ ಸಖಲ್ ವೈರಲ್ ಆಗಿ ವಾಸುಕಿ ವೈಭವ್ ರವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ ಎಂದರೆ ತಪ್ಪಾಗಲಾರದು.