Puttakkana Makkalu Serial : ಕಂಠಿ ಸ್ನೇಹಾ ನಿಜಜೀವನದ ಕಿರು ಪರಿಚಯ
ಕನ್ನಡದ ಜನಪ್ರಿಯ ಸೀರಿಯಲ್ ಹಾಗೂ ನಂ1 ಸೀರಿಯಲ್ ಆಗಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಾಯಕನಟ ಕಂಠಿ ಪಾತ್ರಧಾರಿ ಮತ್ತು ಸ್ನೇಹಾ ಪಾತ್ರಧಾರಿಗಳ ನಿಜ ಜೀವನದ ಕಿರು ಪರಿಚಯ ಪುಟ್ಟಕ್ಕನ ಮಕ್ಕಳು ಧಾರವಾಹಿ ನೆಚ್ಚಿನ ಅಭಿಮಾನಿಗಳಿಗಾಗಿ.
ಪುಟ್ಟಕ್ಕನ ಮಕ್ಕಳು ನಾಯಕನಟ ಕಂಠಿ – ಧನುಷ್ ಎನ್.ಎಸ್

ನಿಜವಾದ ಹೆಸರು ಧನುಷ್ ಎನ್.ಎಸ್ (Dhanush NS), ತಂದೆ ಹೆಸರು ನಾರಾಯಣ ಸ್ವಾಮಿ, ತಾಯಿ ಹೆಸರು ಮಾಯಮ್ಮ ಹಾಗೂ ಸಹೋದರಿ ಚಾಂದಿನಿ ಎನ್.ಎಸ್ (Chandini NS).
ಕಿರುತೆರೆ ನಾಯಕನಟ ಧನುಷ್ ಮೂಲತಃ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಸಂತೆಹಳ್ಲಿ ಗ್ರಾಮದವರು ಆದರೆ ಇವಾಗ ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಯಲ್ಲಿ ವಾಸವಿದ್ದಾರೆ.ಇನ್ನೂ ಇವರ ವ್ಯಾಸಂಗದ ಬಗ್ಗೆ ಹೇಳುವುದಾದರೆ ಇವರು ಸಿವಿಲ್ ಇಂಜಿನಿಯರಿಂಗ್ (Civil Engineering) ಓದಿದ್ದಾರೆ. ನಟ ಧನುಷ್ ಪಿಯುಸಿ (PUC) ಓದುವಾಗಲೇ ಡಾನ್ಸ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.
ಅನೇಕ ಆಡಿಷನ್ ಗಳಲ್ಲಿ ರಿಜೆಕ್ಟ್ ಆಗಿದ್ದ ಪುಟ್ಟಕ್ಕನ ಮಕ್ಕಳು ಕಂಠಿ ಇಂಜಿನಿಯರಿಂಗ್ ಅಂತಿಮ ವರ್ಷ ಪರೀಕ್ಷೆ ಸಮಯದಲ್ಲಿ ನೀಡಿದ ಆಡಿಷನ್ ಮೂಲಕ ಈ ಧಾರವಾಹಿಗೆ ಆಯ್ಕೆಯಾದರು. ಸೀರಿಯಲ್ ಜೊತೆಗೆ ಕೆಲವು ಕಿರುಚಿತ್ರ ಹಾಗೂ ವಿಡಿಯೋ ಆಲ್ಬಂಗಳಲ್ಲೂ ಕೂಡ ನಟನೆ ಮಾಡಿದ್ದಾರೆ. ಅನಿರೀಕ್ಷಿತ ಮತ್ತು 18+2 ಕಿರುಚಿತ್ರಗಳಲ್ಲಿ ನಟಿಸಿ ಹಾಗೂ ನನ್ನ ನಗು ಮತ್ತು ಮನಸೆಲ್ಲಾ ನೀನೇ ವಿಡಿಯೋ ಆಲ್ಬಂಗಳಲ್ಲೂ ಧನುಷ್ ಕಾಣಿಸಿಕೊಂಡಿದ್ದಾರೆ.ನಟನೆ ಮೂಲಕ ಗಮನ ಸೆಳೆದಿರುವ ಧನುಷ್ ಅವರಿಗೆ ಈಗಾಗಲೇ ಸಿನಿಮಾ ಆಫರ್ ಗಳೂ ಬರುತ್ತಿವೆ. ಹಾಗಾಗಿ ಇವರು ಸದ್ಯದಲ್ಲೇ ಬೆಳ್ಳಿತೆರೆ ಮೇಲೆ ಕಂಡುಬಂದರು ಅಚ್ಚರಿಯಿಲ್ಲ.
ಇತ್ತಿಚೀಗೆ ನಡೆದ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಂಠಿ ಅವರಿಗೆ ನೆಚ್ಚಿನ ನಾಯಕನಟ ಪ್ರಶಸ್ತಿ ಕೂಡ ದೊರಕಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಸ್ನೇಹಾ ಜೊತೆ ಮಾಡಿರುವ ಅದ್ಬುತ ನಟನೆಗೆ ಹಾಗೂ ಈ ಜೋಡಿಗೆ ವಿಜಯ ಸ್ಪಂದನಾ ಅವಾರ್ಡ್ ಕೂಡ ವಿಜಯ್ ರಾಘವೇಂದ್ರ ಕೈಯಿಂದಲೇ ಸಿಕ್ಕಿರೋದು ಈ ವರ್ಷ ವಿಶೇಷವಾಗಿತ್ತು.ಕಿರುತೆರೆಯಲ್ಲಿ ನಂ1 ಸ್ಥಾನ ಬಿಟ್ಟು ಕೊಡದ ಸೀರಿಯಲ್ ಇದು
ಪುಟ್ಟಕ್ಕನ ಮಕ್ಕಳು ನಾಯಕನಟಿ ಸ್ನೇಹಾ – ಸಂಜನಾ ಬುರ್ಲಿ

ಪುಟ್ಟಕ್ಕನ ಮಕ್ಕಳು ಸ್ನೇಹಾರವರ ನಿಜವಾದ ಹೆಸರು ಸಂಜನಾ ಬುರ್ಲಿ, ತಂದೆ ಅಜಿತ್ ಬುರ್ಲಿ, ತಾಯಿಯ ಹೆಸರು ಭಾರತಿ ಹಾಗೂ ಒಬ್ಬ ಸಹೋದರ ಕೂಡ ಇದ್ದಾನೆ
ಸಂಜನಾರವರು ನಿಜಜೀವನದಲ್ಲಿ ಫುಲ್ ಗ್ಲಾಮರಸ್ ಆಗಿದ್ದಾರೆ. ಸೀರಿಯಲ್ ನಲ್ಲಿ IPS ಓದುವ ಕನಸು ಇಟ್ಟುಕೊಂಡಿರುವ ಸ್ನೇಹಾ ನಿಜ ಜೀವನದಲ್ಲಿ ಎಂಜಿನಿಯರಿಂಗ್ ಓದಿದ್ದಾರೆ.ಸಂಜನಾಗೆ ಪುಟ್ಟಕ್ಕನ ಮಕ್ಕಳು ಮೊದಲ ಸೀರಿಯಲ್ ಅಲ್ಲ ಈ ಹಿಂದೆಯೂ ಕನ್ನಡದ ಕೆಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.ಕೇವಲ ಕನ್ನಡ ಅಷ್ಟೇ ಅಲ್ಲದೇ ತಮಿಳು ಸಿನಿಮಾಗಳಲ್ಲೂ ನಟನೆ ಮಾಡಿದ್ದಾರೆ.
ಸಂಜನಾ ಅವರಿಗೆ ಬ್ಯಾಡ್ಮಿಟನ್, ಈಜು ಹಾಗೂ ಕೆಲ ಆಟಗಳನ್ನು ಇಷ್ಟಪಡುತ್ತಾರೆ. ಇನ್ನೂ ವೆಜಿಟೇರಿಯನ್ ಆಗಿರುವ ಸಂಜನಾ ತಮ್ಮ ಫಿಟ್ನೆಸ್ ಕಾಪಾಡಲು ಮಿತ ಆಹಾರವನ್ನು ಸೇವಿಸುತ್ತಾರೆ, ಹಾಗೂ ಪ್ರೋಟೀನ್ ಹೆಚ್ಚಾಗಿರೋ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸೋದು ಇವರ ಫಿಟ್ನೆಸ್ ಸೀಕ್ರೆಟ್.