ರಾಧಿಕಾ ಪಂಡಿತ್ ದೀಪಾವಳಿ ಸಂಭ್ರಮ
ನಟಿ ರಾಧಿಕಾ ಪಂಡಿತ್ ರವರು ಮಗ ಯಥರ್ವ್ ಹಾಗೂ ಮಗಳು ಐರಾ ಜೊತೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನೂ ಈ ವರ್ಷ ರಾಕಿಂಗ್ ಸ್ಟಾರ್ ಯಶ ಕೂಡ ಸಿನಿಮಾ ಪ್ರಾಜೆಕ್ಟ್ ವಿಷಯವಾಗಿ ಅಥವಾ ಮುಂದಿನ ಸಿನಿಮಾಗಳ ತಯಾರಿಗಾಗಿ ಮುಂಬೈ ನಲ್ಲಿದ್ದು. ಮನೆಯಲ್ಲಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ಈ ವರ್ಷ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಯಶ್ ಇಲ್ಲದಿರುವುದು ಅಭಿಮಾನಿಗಳಿಗೆ ಬೇಸರವಾಗಿದೆ. ರಾಧಿಕಾ ಪಂಡಿತ್ ಮನೆಗೆ ಕೆಲವು ಸ್ನೇಹಿತರು ಕೂಡ ಭಾಗಿಯಾಗಿ ಈ ಸಂಧರ್ಭದಲ್ಲಿ ಖುಷಿ ಹಂಚಿಕೊಂಡಿದ್ದಾರೆ. ದೀಪಾವಳಿ ಹಬ್ಬದ ಸುಂದರ ಕ್ಷಣಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡು ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ.
ಪ್ರತಿ ವರ್ಷ ಎಲ್ಲಾ ಹಬ್ಬಗಳನ್ನು ವಿಶೇಷವಾಗಿ, ಅದ್ದೂರಿಯಾಗಿ, ಹಾಗೂ ತುಂಬಾ ಸಂಭ್ರಮದಿಂದ ಆಚರಣೆ ಮಾಡುತ್ತಾರೆ ನಟಿ ರಾಧಿಕಾ ಪಂಡಿತ್. ಕೆಲವು ವರ್ಷಗಳ ಹಿಂದೆ ಹೊಸ ಮನೆಗೆ ಬಂದಿರುವ ನಟ ಯಶ್ ದಂಪತಿ ತುಂಬಾ ಸಂಪ್ರದಾಯ ಬದ್ದವಾಗಿ ಆಚರಣೆ ಮಾಡುತ್ತಾರೆ. ಈ ವರ್ಷ ದೀಪಾವಳಿ ಹಬ್ಬದಂದು ದೀಪಗಳನ್ನು ಬೆಳಗಿಸಿ ಇನ್ನೂ ಆ ಸುಂದರ ಕ್ಷಣಗಳನ್ನು ಶೇರ್ ಮಾಡಿದ್ದಾರೆ. ರಾಧಿಕಾ ಪಂಡಿತ್ ಮನೆಯ ದೀಪಾವಳಿ ಹಬ್ಬದ ಪೋಟೋಗಳು ಇಲ್ಲಿವೆ ನೋಡಿ.



ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಯು ತಮ್ಮ ಫಾರ್ಮ್ ಹೌಸ್ ನಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದು. ಬಹು ಕೋಟಿ ವೆಚ್ಚದ ಈ ಮನೆ ಮುಂದಿನ ವರ್ಷ ಗೃಹ ಪವೇಶ ಆಗುವ ಸಾಧ್ಯತೆ ಇದೆ.ಆದರಿಂದ ಮುಂದಿನ ವರ್ಷ ದೀಪಾವಳಿ ಹಾಸನ ಬಳಿ ಇರುವ ಅವರ ಹೊಸ ಮನೆಯಲ್ಲಿ ಹಬ್ಬ ನಡೆಯಬಹುದು. ರಾಧಿಕಾ ಪಂಡಿತ್ ಅತ್ತೆ ಮಾವ ಜೊತೆ ಹಾಗೂ ತಮ್ಮ ತಂದೆ ತಾಯಿ ಜೊತೆ ಕೂಡ ಹಬ್ಬದ ಸಮಯದಲ್ಲಿ ಮಕ್ಕಳ ಜೊತೆ ಕೂಡಿ ಅದ್ದೂರಿಯಾಗಿ ಆಚರಣೆ ಮಾಡುವುದು ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.ಇನ್ನೂ ಈ ವರ್ಷ ಯಶ್ ಕೂಡ ಜೊತೆಯಲ್ಲೇ ಇದ್ದಿದ್ದರೆ ಇನ್ನೂ ಸೂಪರ್ ಇರ್ತಿತ್ತು ಅನ್ತಾರೆ ಫ್ಯಾನ್ಸ್.
ನಟಿ ಅಮೂಲ್ಯ ಮನೆಯಲ್ಲಿ ಮಕ್ಕಳ ಜೊತೆ ದೀಪಾವಳಿ
ಇನ್ನೂ ರಾಧಿಕಾ ಪಂಡಿತ್ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ಕನ್ನಡ ಕಲಾಭಿಮಾನಿಗಳು ರಾಧಿಕಾ ಪಂಡಿತ್ ಯಶ್ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.