Rishab Shetty : ಪ್ರಶಾಂತ್ ಶೆಟ್ಟಿ ರಿಷಬ್ ಶೆಟ್ಟಿ ಆಗಿದ್ದೇಗೆ?
ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡ ಪ್ರೇಕ್ಷಕರು ಶಿವನಾಗಿ ನಟಿಸಿದ ರಿಷಬ್ ಶೆಟ್ಟಿ ಎಂಬ ಖ್ಯಾತ ಕಲಾವಿದನಿಗೆ ತಲೆ ಬಾಗುತ್ತಾರೆ.ಯಾಕೆಂದರೆ ಕಾಂತಾರ ಸಕ್ಸಸ್ ನಂತರ ರಿಷಬ್ ಶೆಟ್ಟಿ ಹೆಸರು ಭಾರತೀಯ ಚಿತ್ರರಂಗದಲ್ಲಿ ಮಿನುಗುತ್ತಿದೆ. ರಿಷಬ್ ಶೆಟ್ಟಿ ಜೀವನ ಹೇಗಿತ್ತು? ಅವರು ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದು ಹೇಗೆ ಹಾಗೂ ಅವರು ಹೆಸರು ಬದಲಾಯಿಸಿ ಕೊಂಡಿದ್ದು ಯಾಕೆ? ಎಲ್ಲಾವನ್ನೂ ನಾವಿವತ್ತು ತಿಳಿಸಿಕೊಡ್ತಿವಿ ನೋಡಿ.
ರಿಷಬ್ ಶೆಟ್ಟಿ ನಮ್ಮ ರಾಜ್ಯ ಮಾತ್ರವಲ್ಲದೆ ಇಡೀ ಭಾರತದ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಹೆಸರು. ರಿಷಬ್ ಶೆಟ್ಟಿ ನಟ ,ನಿರ್ದೇಶಕ, ನಿರ್ಮಾಪಕ ಹಾಗೂ ಸಿನಿಮಾ ತೆರೆಹಿಂದಿನ ಸಹಾಯಕನ ಕೆಲಸವನ್ನು ಮಾಡಿ ತಮ್ಮದೇ ನಿರ್ದೇಶನದ ಕಾಂತಾರ ಸಿನಿಮಾದ ನಟನೆ ಮೂಲಕ ಅದ್ಬುತ ನಟ ಎಂದು ಪ್ರೂವ್ ಆಗಿದೆ.ಕಾಂತಾರ ಸಿನಿಮಾ ಭಾರತ ಚಿತ್ರರಂಗದ ಬಹು ಬಜೆಟ್ ನ ಜನಪ್ರಿಯ ಹೀರೋಗಳ ಸಿನಿಮಾಗಿಂತ ಜಾಸ್ತಿಯೇ ಸೌಂಡು ಮಾಡಿದೆ. ಈಗಾಗಲೇ ಕಾಂತಾರ ಸಿನಿಮಾದ ಮೊದಲ ಅಧ್ಯಾಯದ ಫಸ್ಟ್ ಲುಕ್ ಪೋಸ್ಟರ್ ಕೂಡ ನವೆಂಬರ್ 27ಕ್ಕೆ ಬಿಡುಗಡೆಯಾಗಲಿದೆ. ಕಾಂತಾರ ಅಭಿಮಾನಿಗಳು ಕೂಡ ತುಂಬಾ ಕಾತುರದಿಂದ ಪೋಸ್ಟರ್ ಗೋಸ್ಕರ ಕಾಯುತ್ತಿದ್ದಾರೆ.
Kantara 2 : ಸದ್ಯದಲ್ಲೇ ಫಸ್ಟ್ ಲುಕ್ ರಿಲೀಸ್.!
ನಟ ರಿಷಬ್ ಶೆಟ್ಟಿ ರವರ ಮೂಲ ಹೆಸರು ಪ್ರಶಾಂತ್ ಶೆಟ್ಟಿ. ಜುಲೈ 7, 1983ರಂದು ಕುಂದಾಪುರದ ಕೆರಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಭಾಸ್ಕರ್ ಶೆಟ್ಟಿ ಹಾಗೂ ಲಕ್ಷ್ಮಿ ಶೆಟ್ಟಿ ದಂಪತಿಯ ಮಗನಾಗಿ ಜನಿಸುತ್ತಾರೆ.ರಿಷಬ್ ಶೆಟ್ಟಿ ಬಾಲ್ಯದ ಜೀವನ ಹಳ್ಳಿ ಮಕ್ಕಳಂತೆ ಸಾಮಾನ್ಯವಾಗಿದ್ದರೂ, ತುಂಟಾಟ ಹಾಗೂ ಕಂಬಳ ಇತ್ಯಾದಿ ಹವ್ಯಾಸಗಳಿಂದ ಸುಂದರವಾಗಿತ್ತು.ಇನ್ನೂ ಐದನೇ ತರಗತಿ ಓದುವಾಗಲೇ ಒಂದು ಹುಡುಗಿ ಮೇಲೆ ಕ್ರಶ್ ಆಗಿತ್ತಂತೆ ರಿಷಬ್ ಅವರಿಗೆ. ಚಿಕ್ಕ ವಯಸ್ಸಿನಲ್ಲಿ ಆದ ಪ್ರೀತಿ ಅಲ್ಲೇ ಮುಗಿಯಿತು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ರಿಷಬ್ ಶೆಟ್ಟಿ ನಾಯಕ ಆಗಬೇಕು ಎಂದು ಕನಸು ಹೊತ್ತಿ ಬೆಂಗಳೂರಿಗೆ ಬಂದವರು ಹಾಗೂ ಸಾಕಷ್ಟು ಸಿನಿಮಾಗಳ ತೆರೆಹಿಂದೆ ಕೆಲಸ ಮಾಡಿದ್ದಾರೆ. ಈ ನಡುವೆ ನಾಟಕ , ಶಾರ್ಟ್ ಮೂವಿ ಹಾಗೂ ಸಿನಿಮಾಗಳಲೆಲ್ಲ ರಿಷಬ್ ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ನಂತರ ಯಾವುದು ಕೈಹಿಡಿಯದ ಕಾರಣ ಇದರಿಂದ ನೊಂದ ರಿಷಬ್ ಅಪ್ಪ ಬಾಸ್ಕರ್ ಶೆಟ್ಟಿಯವರ ಸಲಹೆ ಕೇಳುತ್ತಾರೆ. ರಿಷಬ್ ತಂದೆ ಭಾಸ್ಕರ್ ರವರು ಜ್ಯೋತಿಷ್ಯದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.ಹೀಗಾಗಿ ಸಿನಿಮಾದಲ್ಲಿ ಬೆಳೆಯಬೇಕು ಅಂತ ಹೆಸರು ಬದಲಾವಣೆ ಮಾಡಿಕೊಳ್ಳುತ್ತೇನೆ ಎಂದು ಅಪ್ಪನ ಬಳಿ ಬಂದು ಹೇಳಿಕೊಂಡಿದ್ದಾರೆ. ಇನ್ನೂ ಆ ಸಂದರ್ಭದಲ್ಲಿ ಆರ್ ಅಕ್ಷರದಿಂದ ಹೆಸರು ಇಟ್ಟುಕೊಳ್ಳಲು ತಂದೆ ಸೂಚನೆ ನೀಡಿದ್ದಾರೆ.ಆಗಲೇ ನೋಡಿ ಪ್ರಶಾಂತ್ ಶೆಟ್ಟಿ ಹೆಸರು ರಿಷಬ್ ಶೆಟ್ಟಿ ಆಗಿ ಬದಲಾಗಿದ್ದು.
2014ರಲ್ಲಿ ರಕ್ಷಿತ್ ಶೆಟ್ಟಿ ನಟನೆ, ನಿರ್ದೇಶನದ ಉಳಿದವರು ಕಂಡಂತೆ ಸಿನಿಮಾದಲ್ಲಿ ವಿಶೇಷ ಮುಖ್ಯಪಾತ್ರ ಮಾಡ್ತಾರೆ. ಅನಂತರ ರಿಷಬ್ ಹೆಸರು ಕನ್ನಡ ಚಿತ್ರರಂಗದಲ್ಲಿ ಬೇರೂರುತ್ತದೆ.ಅನಂತರ ರಿಷಬ್ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತದೆ ಇದರಿಂದ ರಿಷಬ್ ಚಿತ್ರರಂಗದಲ್ಲಿ ನೆಲೆಯೂರಿದರು.ನಟ ರಿಷಬ್ ಶೆಟ್ಟಿ ಫ್ಯಾಷನ್ ಡಿಸೈನರ್ ಆಗಿರುವ ಪ್ರಗತಿ ಶೆಟ್ಟಿಯವರನ್ನು 2017ರ ಫೆಬ್ರವರಿ 9ರಂದು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ರಣ್ವಿತ್ ಶೆಟ್ಟಿ ಎಂಬ ಮಗ ಮತ್ತು ರಾಧ್ಯಾ ಶೆಟ್ಟಿ ಎಂಬ ಮಗಳು.
Kgf chapter 3 Yash : ಜೀವನ ಹೇಗಿತ್ತು ಗೊತ್ತಾ?
ನಟ ರಿಷಬ್ ಈಗಾಗಲೇ ಭಾರತ ಚಿತ್ರರಂಗದಲ್ಲಿ ಬಹಳ ಜನಪ್ರಿಯತೆ ಗಳಿಸಿದ್ದು. ಕಾಂತಾರ ಚಾಪ್ಟರ್1 ( Kantara chapter-1 ) ಸಿನಿಮಾ ಮೂಲಕ ಮತ್ತೆ ಇನ್ನಷ್ಟು ಕಮಾಲ್ ಮಾಡಲಿದ್ದಾರೆ. ಇನ್ನೂ ಈ ಚಿತ್ರ ಕೂಡ ಕಾಂತಾರ ಸಿನಿಮಾ ಪ್ರಿಕ್ವೆಲ್ ಸ್ಟೋರಿ ಆಗಿದ್ದು ಪ್ರೇಕ್ಷಕರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದರೆ ತಪ್ಪಾಗಲ್ಲ. ಕಾಂತಾರ ಅಧ್ಯಾಯ 1 ಕೂಡ ಅದ್ಬುತ ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತಾ ಈ ಲೇಖನವನ್ನು ಮುಗಿಸುತ್ತಿದ್ದೇವೆ, ಧನ್ಯವಾದಗಳು.