Suryavamsha Serial Cast & Crew : ಸೀರಿಯಲ್ ನ ಕಂಪ್ಲೀಟ್ ಮಾಹಿತಿ ನೋಡಿ
ಕನ್ನಡ ಕಿರುತೆರೆಯ ಬಹು ನಿರೀಕ್ಷಿತ ಸೀರಿಯಲ್ ಆದ ಸೂರ್ಯವಂಶ ಸೀರಿಯಲ್ ಇದೇ ಮಾರ್ಚ್ 11 ರಿಂದ ಉದಯವಾಹಿನಿಯಲ್ಲಿ ರಾತ್ರಿ ಎಂಟಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಪ್ರಚಾರ ಕೆಲಸ ಶುರು ಮಾಡಿರುವ ಸೀರಿಯಲ್ ತಂಡ ರಾಜ್ಯದ್ಯಂತ ತೆರೆದ ವಾಹನಗಳಲ್ಲಿ ಪ್ರಚಾರ ಮಾಡುತ್ತಿದೆ. ಇತ್ತೀಚಿಗಷ್ಟೇ ಸೀರಿಯಲ್ ತಂಡ ಸುದ್ದಿಗೋಷ್ಠಿ ಮಾಡಿ ಸೀರಿಯಲ್ ಹಾಗೂ ಸೀರಿಯಲ್ ತಯಾರಿ ಬಗ್ಗೆ ಕಂಪ್ಲೀಟ್ ಆಗಿ ಮಾತಾಡಿದ್ದಾರೆ. ಇನ್ನು ಸೀರಿಯಲ್ ಬಗ್ಗೆ, ಕಲಾವಿದರ ಬಗ್ಗೆ, ಸೂರ್ಯವಂಶ ಸೀರಿಯಲ್ ಕಥೆಯ ಬಗ್ಗೆ ಕಂಪ್ಲೀಟ್ ಆಗಿ ತಿಳಿದುಕೊಳ್ಳಲು ಮಿಸ್ ಮಾಡ್ದೆ ಕೊನೆವರೆಗೂ ಓದಿ.
ಸೂರ್ಯವಂಶ ಕಲಾವಿದರು
- ಸೂರ್ಯವರ್ಧನ್ / ಕರ್ಣ ಪಾತ್ರದಲ್ಲಿ ನಟ ಅನಿರುದ್ಧ್
- ಸತ್ಯಮೂರ್ತಿ ಪಾತ್ರದಲ್ಲಿ ಹಿರಿಯ ನಟ ಸುಂದರ್ ರಾಜ್ ( ಸೂರ್ಯವರ್ದನ್ ತಾತ )
- ಸುರಭಿ ಪಾತ್ರದಲ್ಲಿ ಅಶ್ವಿನಿ ( ಧಾರಾವಾಹಿ ನಾಯಕಿ )
- ಕಾಳಿಂಗ ಪಾತ್ರದಲ್ಲಿ ವಿಕ್ರಂ ಉದಯ್ ಕುಮಾರ್ ( ಖಳನಟ )
- ರವಿ ಭಟ್
- ಸುಂದರ ಶ್ರೀ
- ಲೋಕೇಶ್ ಬಸವಟ್ಟಿ
- ಪುಷ್ಪ ಬೆಳವಾಡಿ
- ನಯನ ರಾಮಸ್ವಾಮಿ
- ಸುನಂದ ಹಾಗೂ ಮುಂತಾದವರ ತಾರಾಗಣವಿದೆ
ಸೂರ್ಯವಂಶ ಸೀರಿಯಲ್ ತಂತ್ರಜ್ಞರು
- ಪ್ರಧಾನ ನಿರ್ದೇಶನ – ಹರಿಸಂತು
- ಸಂಚಿಕೆ ನಿರ್ದೇಶನ – ಪ್ರಕಾಶ್ ಮುಚ್ಚಳಗುಡ್ಡ
- ಛಾಯಾಗ್ರಹಣ – ಶಿವರಾಜು MR
- ನಿರ್ಮಾಪಕ – ಪದ್ಮನಾಭ
- ನಿರ್ಮಾಣ ಸಂಸ್ಥೆ – ತನ್ವಿ ಕ್ರಿಯೇಷನ್
- ಸೀರಿಯಲ್ ಕಥೆ – ಉದಯ ವಾಹಿನಿ
- ಪ್ರಸಾರ ವಾಹಿನಿ – ಉದಯ ಟಿವಿ/ ಉದಯ ಟಿವಿ HD
- ಪ್ರಸಾರ ಸಮಯ – ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8:00PM
- ಧಾರಾವಾಹಿ ಆರಂಭ – ಮಾರ್ಚ್ 11, 2024
ಸೂರ್ಯವಂಶ ಸೀರಿಯಲ್ ಕಥೆ
ಒಂದು ಊರಿನಲ್ಲಿ ಒಂದು ಭವ್ಯ ಪರಂಪರೆ ಆ ಊರಿಗೆ ಹೆಗ್ಗುರುತಾಗಿ ನಿಂತಿರುವ ಸೂರ್ಯವಂಶ ಕುಟುಂಬ. ಇನ್ನು ಸೂರ್ಯವಂಶ ಕುಟುಂಬದಲ್ಲಿರುವ ತಾತ ಸತ್ಯಮೂರ್ತಿಗೆ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ವಂಶದ ಕುಡಿಯ ಬಗ್ಗೆ ಚಿಂತೆ. ಮೊಮ್ಮಗ ಸೂರ್ಯ ವರ್ಧನ್ 20 ವರ್ಷಗಳ ಹಿಂದೆಯೇ ಕಾಣೆಯಾಗಿದ್ದಾನೆ. ಮನೆಯ ಸದಸ್ಯರ ಪ್ರಕಾರ ಆತ ಮತ್ತೆ ಬರುವುದಿಲ್ಲ ಎಂದು ಆದರೆ ಮತ್ತೆ ಬಂದೇ ಬರುತ್ತಾನೆ ಅನ್ನುವುದು ತಾತ ಸತ್ಯಮೂರ್ತಿಯವರ ನಂಬಿಕೆ. ಸತ್ಯಮೂರ್ತಿ ಅವರ ಸಮಾಧಾನಕ್ಕೆ ಕುಟುಂಬದ ವಕೀಲರು ಒಬ್ಬ ಸೂಕ್ತ ವ್ಯಕ್ತಿಯನ್ನು ತಲಾಶ್ ಮಾಡುತ್ತಾರೆ. ಆ ಹುಡುಗನೇ ಕಥಾನಾಯಕ ಕರ್ಣ ಆತ ತನ್ನ ತಾಯಿಯ ಚಿಕಿತ್ಸೆಯ ಸಲುವಾಗಿ ಈ ನಾಟಕ ಮಾಡಲು ಒಪ್ಪಿಕೊಳ್ಳುತ್ತಾನೆ. ಕರ್ಣ ಸೂರ್ಯವಂಶ ಕುಟುಂಬಕ್ಕೆ ಕಾಲಿಟ್ಟ ನಂತರ ಅವನ ದಾರಿ ಬಹಳ ಕಷ್ಟವಾಗುತ್ತದೆ. ಮನೆ ಒಳಗೆ ಹಾಗೂ ಹೊರಗೆ ಕರ್ಣನಿಗೆ ಸಾಕಷ್ಟು ವಿರೋಧಿಗಳಿರುತ್ತಾರೆ. ಅದೇ ಊರಿನಲ್ಲಿ ಸೂರ್ಯವಂಶದ ಬದ್ಧ ಶತ್ರು ಕಾಳಿಂಗನ ಕುಟುಂಬವಿರುತ್ತದೆ. ಕಾಳಿಂಗನ ಆಟಟೋಪ ಮಿತಿಮೀರಿರುತ್ತದೆ ಇವನಿಗೆ ಬುದ್ಧಿ ಕಲಿಸಲು ಕರ್ಣನೇ ಉತ್ತಮ ಎಂದು ಊರಿನ ಜನರು ಭಾವಿಸಿರುತ್ತಾರೆ. ಈ ನಡುವೆ ಹೀರೋಯಿನ್ ಸುರಭಿ ಅವರ ಎಂಟ್ರಿ ಆಗುತ್ತದೆ. ಕಥೆ ಹೊಸ ತಿರುವು ಪಡೆದುಕೊಳ್ಳುತ್ತದೆ ಎಲ್ಲಾ ಸವಾಲುಗಳನ್ನು ಸೂರ್ಯನಾಗಿ ಕರ್ಣ ಹೇಗೆ ಎದುರಿಸುತ್ತಾನೆ. ಕರ್ಣನೇ ಸೂರ್ಯವಂಶದ ಕುಡಿಯಂದು ಹೇಗೆ ಯಾರಿಂದ ಯಾವಾಗ ಬಹಿರಂಗವಾಗುತ್ತದೆ ಇವೆಲ್ಲ ಮುಂದಿನ ರೋಚಕ ತಿರುವುಗಳು.
ಸೂರ್ಯವಂಶ ಸೀರಿಯಲ್ ಪ್ರಧಾನ ನಿರ್ದೇಶಕ ಹರಿಸಂತುರವರು ಕನ್ನಡದ ಎಂಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಮೊದಲ ನಿರ್ದೇಶನ ಸಿನಿಮಾ ಅಲೆಮಾರಿ (2012), ಡಾರ್ಲಿಂಗ್ (2014), ಕಾಲೇಜ್ ಕುಮಾರ್ (2017), ವಿಕ್ಟರಿ 2 (2018), ಹಾಗೂ ಬೈ ಟು ಲವ್ (2022). ನಿರ್ದೇಶನ ಅಲ್ಲದೆ ಕನ್ನಡದ ಕೆಲವು ಸಿನಿಮಾಗಳ ಹಾಡುಗಳಿಗೆ ಸಾಹಿತ್ಯ ಕೂಡ ಬರೆದಿದ್ದಾರೆ. 35ಕ್ಕೂ ಹೆಚ್ಚು ಕನ್ನಡ ಸಿನಿಮಾ ಹಾಡುಗಳ ಸಾಹಿತ್ಯ ಬರೆದಿದ್ದಾರೆ. ನಿರ್ದೇಶಕ ಹರಿಸಂತುರವರು ಶಿವಮೊಗ್ಗ ಜಿಲ್ಲೆಯವರು ಇವಾಗ ಇರುವುದು ಬೆಂಗಳೂರು. ಇವರು ಜೋಗಿ ಪ್ರೇಮ್ ರವರ ಕೆಲವು ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಪ್ರೇಮ್ ಜೊತೆ ಕೆಲಸ ಮಾಡಿದ್ದಾರೆ. ಇನ್ನೂ ನಿರ್ಮಾಪಕರಾದ ಪದ್ಮನಾಬ್ ರವರು ಕನ್ನಡದ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಮೊದಲ ಬಾರಿಗೆ ಕಿರುತೆರೆ ಧಾರಾವಾಹಿಯನ್ನು ತನ್ವಿ ಕ್ರಿಯೇಶನ್ಸ್ ನಿರ್ಮಾಣ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಸುಮಾರು ವರ್ಷಗಳ ನಂತರ ಉದಯವಾಹಿನಿ ಬಹುದೊಡ್ಡ ಬಜೆಟ್ ನ ಧಾರವಾಹಿಯನ್ನು ನಿರ್ಮಾಣ ಮಾಡಲು ಮುಂದಾಗಿದೆ. ಧಾರವಾಹಿಯನ್ನು ಸಿನಿಮಾ ರೀತಿ ವೀಕ್ಷಕರ ಮುಂದೆ ತರಲು ಬಹಳ ತಯಾರಿ ನಡೆಸಿದೆ. ಇನ್ನೂ ಈಗಾಗಲೇ ಬಿಡುಗಡೆಯಾಗಿರುವ ಧಾರಾವಾಹಿಯ ಸಣ್ಣ ಪುಟ್ಟ ತುಣುಕುಗಳು ವೀಕ್ಷಕರಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿದೆ. ಪ್ರೊಮೊ ನೋಡಿದ ವೀಕ್ಷಕರು ಸಿನಿಮಾ ರೀತಿಯೇ ಮೂಡಿಬಂದಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಇನ್ನೂ ಈ ಧಾರಾವಾಹಿ ಕೂಡ ಕಿರುತೆರೆಯಲ್ಲಿ ಸಂಚಲನ ಮೂಡಿಸುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ ಈ ಹಿಂದೆ ನಟ ಅನಿರುದ್ಧ್ ರವರು ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ರೆಕಾರ್ಡ್ಸ್ ಕ್ರಿಯೇಟ್ ಮಾಡಿದ್ದರು. ಇದೀಗ ಮತ್ತೆ ಸೂರ್ಯವಂಶ ಸೀರಿಯಲ್ ಮೂಲಕ ಉದಯ ವಾಹಿನಿಯಲ್ಲಿ ಮತ್ತೆ ರೆಕಾರ್ಡ್ಸ್ ಕ್ರಿಯೇಟ್ ಮಾಡೋದು ಗ್ಯಾರಂಟಿಯಾಗಿದೆ.