ಸೂರ್ಯವಂಶ ಸೀರಿಯಲ್ ಮೂಲಕ ಮತ್ತೆ ಕಿರುತೆರೆ ಎಂಟ್ರಿ ಕೊಟ್ಟ ಅನಿರುದ್ದ್

Spread the love

ಕನ್ನಡದ ಜನಪ್ರಿಯ ನಟ ಅನಿರುದ್ದ್ ಜತ್ಕರ್ ರವರು ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡವರು. ನಿಮಗೆಲ್ಲಾ ತಿಳಿದಿರುವ ಹಾಗೆ ನಟ ಅನಿರುದ್ದ್ ಜತ್ಕರ್ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಅಳಿಯ. ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ಅನೇಕ ಚಿತ್ರಗಳಲ್ಲಿ ನಟಿಸಿ ನಂತರ ಸರಿಯಾದ ಅವಕಾಶಗಳು ಸಿಗದೆ ನಟನೆಯಿಂದ ದೂರ ಉಳಿದಿದ್ದರು. ನಂತರ 2019ರಲ್ಲಿ ಕಿರುತೆರೆ ಸೀರಿಯಲ್ ಆಫರ್ ಬರುತ್ತದೆ ಅನಂತರ ಸೀರಿಯಲ್ ಮೂಲಕ ನಟನೆಯಲ್ಲಿ ಮತ್ತೆ ಸಂಚಲನ ಮೂಡಿಸಿದರು ಎಂದರೆ ತಪ್ಪಾಗಲಾರದು. ಹೌದು ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕಿರುತೆರೆಗೆ ಮಾಸ್ ಎಂಟ್ರಿ ಕೊಟ್ಟ ನಟ ಅನಿರುದ್ದ್ ಮೊದಲ ವಾರದಲ್ಲೇ ಭಾರಿ ಜನಪ್ರಿಯತೆ ಪಡೆದುಕೊಂಡರು. ಜೊತೆಗೆ ಸೀರಿಯಲ್ ಕೂಡ ಕಿರುತೆರೆ ಲೋಕದಲ್ಲೇ ಅದ್ಭುತ ರೇಟಿಂಗ್ ಪಡೆದು ರೆಕಾರ್ಡ್ಸ್ ರಚನೆ ಮಾಡಿತು.

ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಆರ್ಯವರ್ಧನ್ ಪಾತ್ರದಲ್ಲಿ ಮಿಂಚಿದ್ದರು ನಂತರ ಕೆಲವು ಕಾರಣಾಂತರದಿಂದ ಸೀರಿಯಲ್ ಬಿಟ್ಟರು. ನಂತರ ಮತ್ತೊಂದು ಸೀರಿಯಲ್ ನಲ್ಲಿ ಸದ್ಯದಲ್ಲೇ ಕಾಣಿಸಿಕೊಳ್ಳುತ್ತೇನೆ ಎಂದಿದ್ದರು. ನಂತರ ಸಿನಿಮಾದಲ್ಲಿ ನಟಿಸಿ ಅನಂತರ ಎಸ್. ನಾರಾಯಣ್ ನಿರ್ದೇನದ ಸೀರಿಯಲ್ ನಲ್ಲಿ ನಟಿಸುತ್ತಿದ್ದೇನೆ ಎಂದು ಸಿಹಿ ಸುದ್ದಿ ಕೊಟ್ಟರು. ಆಮೇಲೆ ಆ ಸೀರಿಯಲ್ ಕೂಡ ಸುಮಾರು 20ಸಂಚಿಕೆಗಳು ಶೂಟ್ ಆಗಿ ನಿಂತು ಹೋಯಿತು. ಮತ್ತೆ ಕೊಟ್ಟ ಮಾತಿನಂತೆ ನಟ ಅನಿರುದ್ದ್ ರವರು ಮತ್ತೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ನಟ ಅನಿರುದ್ದ್ ಉದಯ ವಾಹಿನಿಯ ಬಹು ನಿರೀಕ್ಷಿತ ಸೀರಿಯಲ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ.

ಅನಿರುದ್ದ್ ಜತ್ಕರ್ ರವರ ಈ ಹೊಸ ಸೀರಿಯಲ್ ಹೆಸರು ಸೂರ್ಯವಂಶ ( Suryavamsha Kannada serial ). ವಿಷ್ಣುವರ್ಧನ್ ರವರ ಜನಪ್ರಿಯ ಯಶಸ್ಸಿನ ಸಿನಿಮಾದ ಹೆಸರನ್ನೇ ಸೀರಿಯಲ್ ಗೆ ಇಟ್ಟುಕೊಂಡಿದ್ದಾರೆ ಧಾರವಾಹಿ ತಂಡ.ಇನ್ನೂ ಈಗಾಗಲೇ ಪ್ರೋಮೊ ಹಾಗೂ ಸಣ್ಣ ಪುಟ್ಟ ತುಣುಕಗಳ ಮೂಲಕ ವೀಕ್ಷಕರ ಮನ ಗೆದ್ದಿದೆ ಸೂರ್ಯವಂಶ ಸೀರಿಯಲ್. ಜೊತೆಗೆ ಸೀರಿಯಲ್ ಲಾಂಚ್ ಡೇಟ್ ಕೂಡ ನಿಗದಿಯಾಗಿದೆ ಮಾರ್ಚ್ 11 ರಿಂದ ರಾತ್ರಿ 8 ಗಂಟೆಗೆ ಸೀರಿಯಲ್ ಪ್ರಸಾರವಾಗಲಿದೆ.

ಸೂರ್ಯವಂಶ ಸೀರಿಯಲ್ ತಾರಾಗಣ ವಿಷಯಕ್ಕೆ ಬಂದರೆ ನಟ ಅನಿರುದ್ದ್ ನಾಯಕನ ಪಾತ್ರ ಹಾಗೂ ಮೇಘನಾರಾಜ್ ತಂದೆ ಸುಂದರ್ ರಾಜ್ ಕೂಡ ಸೀರಿಯಲ್ ನಲ್ಲಿ ಬಣ್ಣ ಹಚ್ಚಿದ್ದಾರೆ. ಸೂರ್ಯವಂಶ ಸೀರಿಯಲ್ ನಲ್ಲಿ ಇನ್ನೂ ಅನೇಕ ರಂಗಭೂಮಿ ಕಲಾವಿದರು ಕೂಡ ಜೊತೆಯಾಗಿದ್ದಾರೆ. ಸೂರ್ಯವಂಶ ಹೆಸರೇ ಹೇಳುವಂತೆ ಸೀರಿಯಲ್ ಕಥೆ ಅದ್ಬುತ ವಾಗಿರಲಿದೆ. ಇನ್ನೂ ನಟ ಅನಿರುದ್ದ್ ಮತ್ತೆ ಕಿರುತೆರೆ ಲೋಕದಲ್ಲಿ ಕಾಲಿಟ್ಟು ಬೇರೆ ಸೀರಿಯಲ್ ಗೆ ಹೊಡೆದ ಬಿಳೋದು ಗ್ಯಾರಂಟಿ ಅಂದರು ತಪ್ಪಿಲ್ಲ.

You may also like...

Leave a Reply

Your email address will not be published. Required fields are marked *

You cannot copy content of this page