ವರ್ತೂರ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್
ಕನ್ನಡದ ಜನಪ್ರಿಯ ನಂ1 ರಿಯಾಲಿಟಿ ಷೋ ಅಂದರೆ ಅದು ಬಿಗ್ ಬಾಸ್ ಕಾರ್ಯಕ್ರಮ ಮಾತ್ರ.ಇನ್ನೂ 2023 ರ ಅಕ್ಟೋಬರ್ 8ರಂದು ಬಿಗ್ ಬಾಸ್ ಸೀಸನ್10 ಅದ್ದೂರಿಯಾಗಿ ಚಾಲನೆ ಆಯಿತು. ಇದೀಗ ಈ ಷೋ ಟಿವಿಆರ್ ನಲ್ಲೂ ಅಧಿಕ ರೇಟಿಂಗ್ಸ್ ಪಡೆದುಕೊಂಡು ದಿನದಿಂದ ದಿನಕ್ಕೆ ವೀಕ್ಷಕರನ್ನು ಕೂಡ ಸೆಳೆಯುತ್ತಿದೆ. 5 ವಾರಗಳನ್ನು ಪೂರ್ಣ ಗೊಳಿಸಿರುವ ಬಿಗ್ ಬಾಸ್ 10 ದೀಪಾವಳಿಯ ಹಬ್ಬದ ಸಂಭ್ರಮದಲ್ಲಿದೆ. ಹಬ್ಬದ ಖುಷಿಯಲ್ಲಿದ ಸ್ಪರ್ಧಿಗಳಿಗೆ ಹಾಗೂ ಬಿಗ್ ಬಾಸ್ ಅಭಿಮಾನಿಗಳಿಗೆ ಇದೀಗ ವರ್ತೂರ್ ಸಂತೋಷ್ ಶಾಕ್ ನೀಡಿದ್ದಾರೆ. ಅದೇನೆಂದರ ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕೆಂದು ಕಿಚ್ಚ ಸುದೀಪ್ ಮುಂದೆ ವೀಕೆಂಡ್ ಕಾರ್ಯಕ್ರಮದಲ್ಲಿ ವರ್ತೂರ್ ಸಂತೋಷ್ ಹೇಳಿಕೆ ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ 5ನೇ ವಾರ ವರ್ತೂರ್ ಸಂತೋಷ್ ನಾಮಿನೇಟ್ ಆಗಿದ್ದರು ಆದರೆ ಈವಾರ ಸಂತೋಷ್ ಸೇಫ್ ಆಗಿದ್ದಾರೆ. ಆದರೆ ಈ ನಡುವೆ ವರ್ತೂರ್ ಸಂತೋಷ್ ಮನೆಯಿಂದ ಹೊರಹೋಗುವ ಹೇಳಿಕೆ ನೀಡಿ ಕಿಚ್ಚ ಸುದೀಪ್ ರವರಿಗೆ ಶಾಕ್ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುದೀಪ್ ವರ್ತೂರ್ ಸಂತೋಷ್ ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟರು. ಜೊತೆಗೆ ವರ್ತೂರ್ ಸಂತೋಷ್ ಗೆ ಬಂದಿದ್ದ ಮತಗಳನ್ನು ಕೂಡ ಓಪನ್ ಸ್ಟೇಜ್ ಮೇಲೆ ಹೇಳಿದ್ದಾರೆ. ಮತಗಳ ಸಂಖ್ಯೆ ಯನ್ನು ಕೇಳಿದ ಎಲ್ಲಾ ಸ್ಪರ್ಧಿಗಳು ಕೂಡ ಒಂದು ಕ್ಷಣ ಆಶ್ಚರ್ಯಗೊಂಡರು.
ವರ್ತೂರ್ ಸಂತೋಷ್ ಗೆ ಬಂದ ಮತ ಎಷ್ಟು ಗೊತ್ತಾ?
ಬಿಗ್ ಬಾಸ್ ಷೋನಲ್ಲಿ ಭಾಗಯಾಗಿದ್ದ ವರ್ತೂರ್ ಸಂತೋಷ್ ರವರಿಗೆ ಹಳ್ಳಿಕಾರ್ ಒಡೆಯ ಎಂದು ಕರ್ನಾಟಕದ ಯುವ ರೈತಾಪಿ ವೃಂದದವರು ಬಿರುದು ನೀಡಿದ್ದಾರೆ. ಇನ್ನೂ ರಾಜ್ಯಾದ್ಯಂತ ಅಪಾರ ರೈತ ಅಭಿಮಾನಿಗಳನ್ನು ಹೊಂದಿರುವ ಸಂತೋಷ್ ಗೆ ರೈತರಿಂದ ಸಾಕಷ್ಟು ಬೆಂಬಲವಿದೆ. ಅದರಿಂದಲೇ ಅವರು ಬಿಗ್ ಬಾಸ್ ಷೋಗೆ ಹೋಗಲು ಅವಕಾಶ ಸಿಕ್ಕಿರುವುದು. ಆದರೆ ಬಿಗ್ ಬಾಸ್ ಷೋಗೆ ಹೋದಾಗ ಇದ್ದ ಖುಷಿ ಇದೀಗ ಸಂತೋಷ್ ರವರಿಗೆ ಇಲ್ಲ ಯಾಕೆಂದರೆ ಹುಲಿ ಉಗುರಿನ ವಿಷಯ ಅರೆಸ್ಟ್ ಮಾಡಿ ಒಂದು ವಾರ ಬಂಧನದಲ್ಲಿ ಇಟ್ಟಿದ್ದು. ಅವರ ಮನಸ್ಸಿಗೆ ಬಹಳ ನೋವಾಗಿದೆ ಹಾಗೂ ಎಲ್ಲಾ ಕಾನೂನಿನ ಕೆಲಸಗಳನ್ನು ಮುಗಿಸಿ ಜಾಮೀನು ಸಿಕ್ಕ ನಂತರ ಮತ್ತೆ ಬಿಗ್ ಬಾಸ್ ಷೋಗೆ ಕಾಲಿಟ್ಟರು.ಕೆಲವು ದಿನಗಳಿಂದ ಟಾಸ್ಕ್ ಗಳಲ್ಲೂ ಕೂಡ ಸರಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳದೆ ಆಸಕ್ತಿ ಕಳೆದುಕೊಂಡರು ಇದರಿಂದ ಮನೆಯ ಸ್ಪರ್ಧಿಗಳು ಕೂಡ ವರ್ತೂರ್ ಸಂತೋಷ್ ಎಲಿಮಿನೆಂಟ್ ಆಗಲಿ ಎನ್ನುವ ಮಾತು ಆಡಿದರು.
ತನಿಷಾ ವಿರುದ್ಧ ತಿರುಗಿ ಬಿದ್ದ ಡ್ರೋನ್ ಪ್ರತಾಪ್
ಅನಂತರ ಕಿಚ್ಚ ಸುದೀಪ್ ರವರು ವರ್ತೂರ್ ಸಂತೋಷ್ ನೀವು ಸೇಫ್ ಎಂದು ಕೂಗಿದರು ಇದರಿಂದ ಸಂತೋಷ್ ಕೂಡ ಮೊದಲಿಗೆ ಖುಷಿಯಾದರು ನಂತರ ತಮ್ಮ ನೆಚ್ಚಿನ ಅಭಿಮಾನಿಗಳಿಗೆ ಹಾಗೂ ಮತ ಹಾಕಿದ ಜನತೆಗೆ ಧನ್ಯವಾದ ತಿಳಿಸಿದರು. ಮಾತಾಡುತ್ತಲೇ ತುಂಬಾ ಭಾವುಕರಾದ ಸಂತೋಷ್ ನಂತರ ಮನೆಯಿಂದ ಹೊರ ಹೋಗಬೇಕು ಎಂದು ನಿರ್ಧಾರ ಮಾಡಿರುವುದನ್ನು ಕಿಚ್ಚ ಸುದೀಪ್ ಗೆ ತಿಳಿಸುತ್ತಾರೆ. ಇದನ್ನು ಸುದೀಪ್ ರವರು ಒಪ್ಪುವುದಿಲ್ಲ ಆಮೇಲೆ ಸ್ವತಃ ಕಿಚ್ಚ ಸುದೀಪ್ ರವರು ಸಂತೋಷ್ ಮನವೊಲಿಸಲು ಏನೆಲ್ಲಾ ಹೇಳಿದರು ಸುದೀಪ್ ಮಾತನ್ನು ವರ್ತೂರ್ ಸಂತೋಷ್ ಕೇಳಲಿಲ್ಲ ಅನಂತರ ಈ ವಾರ ವರ್ತೂರ್ ಸಂತೋಷ್ ಗೆ ಬಂದಿರುವ ಮತಗಳನ್ನು ತಿಳಿಸಿದರು. ಸಂತೋಷ್ ರವರಿಗೆ 34 ಲಕ್ಷಕ್ಕೂ ಅಧಿಕ ಮತಗಳು ಬಂದಿವೆ ಅದೂ ಕೂಡ ಲಾಸ್ಟ್ 24 ಗಂಟೆಗಳಲ್ಲಿ ಎಂದರು ಜೊತೆಗೆ ವೋಟ್ ಮಾಡಿರುವ ನಿಮ್ಮ ಅಭಿಮಾನಿಗಳ ಸಮಯಕ್ಕೆ ಮೋಸ ಮಾಡಬೇಡಿ. ಅವರೆಲ್ಲರೂ ನಿಮ್ಮನ್ನು ಎಷ್ಟು ಇಷ್ಟ ಪಟ್ಟಿದ್ದಾರೆ ಎನ್ನುವುದು ಇಲ್ಲೆ ಕಾಣುತ್ತಿದೆ.ಇಂತ ಅವಕಾಶ ಮತ್ತೆ ಸಿಗುವುದಿಲ್ಲ ಬಿಗ್ ಬಾಸ್ ಮನೆಯಲ್ಲಿ ಯಾರ್ ಇರ್ಬೇಕು ಎನ್ನುವುದನ್ನು ವೀಕ್ಷಕರು ಹಾಗೂ ಕನ್ನಡ ಜನತೆ ಡಿಸೈಡ್ ಮಾಡ್ತಾರೆ ಬಿಗ್ ಬಾಸ್ ಅಲ್ಲ. ಹಾಗಾಗಿ ನಿಮಗೆ ವೋಟ್ ಮಾಡಿರುವ ಜನತೆಯ ವಿರುದ್ಧ ನಾನು ಹೋಗೋಕೆ ಆಗಲ್ಲ ಎಂದರು ಜೊತೆಗೆ ವರ್ತೂರ್ ಸಂತೋಷ್ ಗೆ ವೋಟ್ ಮಾಡಿದ ಅಭಿಮಾನಿಗಳಿಗೆ ನನ್ನ ಕಡೆಯಿಂದ ಕ್ಷಮೆ ಇರಲಿ ಎಂದು ಹೇಳಿದರು ಕಿಚ್ಚ ಸುದೀಪ್. ವರ್ತೂರ್ ಸಂತೋಷ್ ಈ ನಿರ್ಧಾರದಿಂದ ಸುದೀಪ್ ಕೂಡ ಬೇಸರದಿಂದಲೇ ಸಂಚಿಕೆಯನ್ನು ಬೇಗನೇ ಮುಗಿಸಿ ಟೆಕ್ ಎ ಬ್ರೇಕ್ ಎಂದು ಹೇಳುತ್ತ ನಿರ್ಗಮಿಸಿದರು.
ಬಿಗ್ ಬಾಸ್ ಷೋ ಸ್ಪರ್ಧಿಗಳು ಕೂಡ ಬಿಗ್ ಮನೆಯಲ್ಲಿ ವರ್ತೂರ್ ಮನವೊಲಿಸಲು ಸಾಕಷ್ಷು ಹರಸಾಹಸ ಪಡುತ್ತಿದ್ದಾರೆ ಆದರೂ ಅವರ ನಿರ್ಧಾರವನ್ನು ಬದಲಾವಣೆ ಮಾಡಿಕೊಳ್ಳದೇ ನಾನು ಇರೋಕೆ ಆಗ್ತಿಲ್ಲ ಎನ್ನುತ್ತಿದ್ದಾರೆ. ಇದರಿಂದ ಬಿಗ್ ಬಾಸ್ ಕೂಡ ಇದೀಗ ದೀಪಾವಳಿ ವಿಶೇಷವಾಗಿ ನಿರೂಪಕಿ ಹಾಗೂ ನಟಿ ಆಗಿರುವ ಸುಷ್ಮಾ ರವರನ್ನು ಬಿಗ್ ಮನೆಗೆ ಕಳಿಸಿ ವರ್ತೂರ್ ಸಂತೋಷ್ ಮನವೊಲಿಸಲು ಪ್ರಯತ್ನ ಪಟ್ಟಿದ್ದಾರೆ. ಇನ್ನೂ ಅಭಿಮಾನಿಗಳು ಸಹ ಅವರು ಮನೆಯಲ್ಲಿ ಉಳಿಯಲಿ ಇರುವಷ್ಟು ದಿನ ಚೆನ್ನಾಗಿ ಟಾಸ್ಕ್ ಆಡುತ್ತಾ ಗೆದ್ದು ಬರಲಿ ಎಂದು ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ ವರ್ತೂರ್ ಎನ್ ಮಾಡ್ತಾರೆ ಅನ್ನೋದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.