ವರ್ತೂರ್ ಸಂತೋಷ್ ಮದುವೆ ಆಗಿ 2ವರ್ಷದ ಮಗಳಿದ್ದಾಳೆ
ಬಿಗ್ ಬಾಸ್ ಸೀಸನ್10 ಸ್ಪರ್ಧಿ ವರ್ತೂರ್ ಸಂತೋಷ್ ಹುಲಿ ಉಗುರಿನ ವಿಷಯವಾಗಿ ಸುದ್ದಿಯಾಗಿದ್ದರು ಇದೀಗ ಮತ್ತೆ ದಾಂಪತ್ಯದ ವಿಚಾರವಾಗಿ ಸುದ್ದಿಯಾಗಿದ್ದಾರೆ. ಈಗಾಗಲೇ ಸಮಾಜಿಕ ಜಾಲತಾಣದಲ್ಲಿ ವರ್ತೂರ್ ಸಂತೋಷ್ ಮದುವೆಯಾಗಿದ್ದಾರೆ ಎನ್ನುವ ಮಾಹಿತಿ ಹಾಗೂ ಕೆಲವು ಪೋಟೋ ಮತ್ತು ದೃಶ್ಯಗಳು ವೈರಲ್ ಆಗುತ್ತಿವೆ. ಇಲ್ಲಿವರೆಗೂ ಬಿಗ್ ಬಾಸ್ ವೀಕ್ಷಕರು ವರ್ತೂರ್ ಸಂತೋಷ್ ಸಿಂಗಲ್ ಇನ್ನೂ ಮದುವೆ ಆಗಿಲ್ಲ ಎಂದು ಕೊಂಡಿದ್ದರು ಜೊತೆಗೆ ಬಿಗ್ ಮನೆಯಲ್ಲಿ ತನಿಷಾ ಜೊತೆ ಕನೆಕ್ಟ್ ಮಾಡಿ ಮನರಂಜನೆ ತೆಗೆದುಕೊಳ್ಳುತ್ತಿದ್ದರು. ಇನ್ನೇನು ಈ ಇಬ್ಬರಿಗೂ ಲವ್ ಆಗ್ತಿದೆ ಎನ್ನುವ ಹಾಗೆಲ್ಲಾ ದೃಶ್ಯಗಳು ಕಂಡು ಬಂದಿದ್ದವು. ಆದರೆ ಇದೀಗ ಆ ನಿರೀಕ್ಷೆಯ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ವರ್ತೂರ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್
ಹೌದು ವರ್ತೂರ್ ಸಂತೋಷ್ ಅವರಿಗೆ ಮಾರ್ಚ್5, 2020 ರಲ್ಲಿ ಹೊಸಕೋಟೆ ಹತ್ತಿರದ ಕಲ್ಯಾಣ ಮಂಟಪದಲ್ಲಿ ತುಂಬಾ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ. ಇನ್ನೂ ಮದುವೆಗೆ ಸರಿಸುಮಾರು 10 ರಿಂದ 12 ಸಾವಿರ ಜನ ಸೇರಿದ್ದರು ಎನ್ನುವ ಮಾಹಿತಿಯನ್ನು ಸ್ವತಃ ಸಂತೋಷ್ ಮಾವ ಸೋಮನಾಥ್ ಹೇಳಿದ್ದಾರೆ. ವರ್ತೂರ್ ಸಂತೋಷ್ ರವರು ಮದುವೆ ನಂತರ ನನ್ನ ಮಗಳಿಗೆ ಸಾಕಷ್ಟು ಚಿತ್ರಹಿಂಸೆ ಕೊಟ್ಟಿದ್ದಾರೆ.ಅವರ ತಾಯಿ ಕೂಡ ಎಲ್ಲೆಡೆ ಸಾಕಷ್ಟು ಸುಳ್ಳು ಹೇಳ್ತಾರೆ.ನನ್ನ ಮಗಳು ಗರ್ಭಿಣಿ ಸಂದರ್ಭದಲ್ಲಿ ಕೂಡ ವರ್ತೂರ್ ಸಂತೋಷ್ ನನ್ನ ಮಗಳಿಗೆ ಕೈಮಾಡುತ್ತಿದ್ದ ಅವನು ಸರಿಯಿಲ್ಲ. ಇದರಿಂದ ನಮ್ಮ ಮನಸ್ಸಿಗೂ ನೋವಾಗಿದೆ ಜೊತೆಗೆ ಕುಟುಂಬದ ಹಿರಿಯರು ಕೂತು ಬುದ್ದಿ ಹೇಳಿದರು ನಮ್ಮ ಮಾತನ್ನು ಕೇಳಲಿಲ್ಲ ಸಂತೋಷ್. ಈಗಾಗಲೇ ಮಗುಗೆ 2 ವರ್ಷ ಆಗ್ತಿದೆ ಇನ್ನೂ ನಮ್ಮ ಮನೆಗೆ ಬಂದಿಲ್ಲ ಹಾಗೂ ಮಗು ನಂಗೆ ಹುಟ್ಟೆ ಇಲ್ಲ ಎನ್ನುತ್ತಾನೆ ಸಂತೋಷ್ ಎಂದಿದ್ದಾರೆ ವರ್ತೂರ್ ಸಂತೋಷ್ ಮಾವ.
ವರ್ತೂರ್ ಸಂತೋಷ್ ಅವರಿಗೆ ಮದುವೆ ಆಗಿದ್ದು 2 ವರ್ಷದ ಹೆಣ್ಣು ಮಗು ಇದೆ ಎಂದು ಮಾಹಿತಿ ಲಭ್ಯವಾಗಿದೆ. ಬಿಗ್ ಮನೆಯಲ್ಲಿ ಸಂತೋಷ್ ಮಾತುಗಳನ್ನು ಕೇಳಿದ ಪತ್ನಿ ಕುಟುಂಬದವರು ಇದೀಗ ಈ ವಿಷಯವನ್ನು ಎಲ್ಲೆಡೆ ಬಹಿರಂಗಗೊಳಿಸಿದ್ದಾರೆ.ಇನ್ನೂ ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ ಇದಕ್ಕೆಲ್ಲ ವರ್ತೂರ್ ಸಂತೋಷ್ ಅವರೇ ಬಿಗ್ ಬಾಸ್ ಮನೆಯಿಂದ ಹೊರ ಬಂದು ತೆರೆ ಎಳೆಯಬೇಕಿದೆ. ಬಿಗ್ ಬಾಸ್ 10 ನಿಂದ ಹೊರ ಬರಲು ಈಗಾಗಲೇ ನಿರ್ಧಾರ ಮಾಡಿದ್ದರು ಆದರೆ ಬಿಗ್ ಬಾಸ್ ಇದಕ್ಕೆ ಒಪ್ಪಿಲ್ಲ. ಕಳೆದ ಸಂಚಿಕೆಯಲ್ಲಿ ಸಂತೋಷ್ ತಾಯಿ ಬಿಗ್ ಮನೆಗೆ ಭೇಟಿ ನೀಡಿ ಮಗನಿಗೆ ಧೈರ್ಯ ಹೇಳಿದ ಬಳಿಕ ಮನೆಯಲ್ಲಿ ಉಳಿಯಲು ವರ್ತೂರ್ ಒಪ್ಪಿಕೊಂಡಿದ್ದಾರೆ. ಆದರೆ ಇಲ್ಲಿವರ್ಗೂ ವರ್ತೂರ್ ಬರ್ತಾರ ಅಥವಾ ಬಿಗ್ ಮನೆಯಲ್ಲೇ ಇರ್ತಾರ ಎಂಬ ಸುದ್ದಿ ಹರಿದಾಡುತ್ತಿದ್ದವು. ಆದರಿದೀಗ ವರ್ತೂರ್ ಸಂತೋಷ್ ಮದುವೆ ವಿಷಯ ಭಾರಿ ಚರ್ಚಗೆ ಸುದ್ದಿಯಲ್ಲಿದೆ.