Kgf chapter 3 Yash : ಜೀವನ ಹೇಗಿತ್ತು ಗೊತ್ತಾ?

Spread the love

ನಟ ಯಶ್ ರವರು ಇಂದು ನ್ಯಾಷನಲ್ ಸ್ಟಾರ್ ಆಗಿದ್ದಾರೆ ಇದು ನಿಮಗೆಲ್ಲಾ ತಿಳಿದಿರುವ ವಿಷಯ ಆದರೆ ಸ್ಟಾರ್ ಆಗುವ ಮೊದಲು ಯಶ್ ಏನೆಲ್ಲಾ ಕೆಲಸ ಮಾಡಿದ್ದಾರೆ ಹಾಗೂ ಅವರ ಜೀವನ ಹೇಗಿತ್ತು ಎಂಬುದರ ಕಂಪ್ಲೀಟ್ ಮಾಹಿತಿ ನಾವಿವತ್ತು ತಿಳಿಸ್ತಿವಿ ನೋಡಿ.

ಸಾಮಾನ್ಯ ಬಸ್ ಚಾಲಕನ ಮಗ ಇಂದು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇಂದು ರಾಕಿಬಾಯ್ ರಾಕಿಂಗ್ ಸ್ಟಾರ್ ಆಗಿರುವ ಯಶ್ ರವರು ನವೀನ್ ಕುಮಾರ್ ನಿಂದ ಯಶ್ ಆಗಲು ಏನೆಲ್ಲಾ ಕಷ್ಟ ಪಟ್ಟಿದ್ದಾರೆ ಗೊತ್ತಾ.ಇವರ ಹುಟ್ಟು ಹೆಸರು ನವೀನ್ ಕುಮಾರ್ ಗೌಡ. ಯಶ್ ರವರು ಜನವರಿ 8, 1986 ರಲ್ಲಿ ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಗಳ ಮಗನಾಗಿ ಜನಿಸುತ್ತಾರೆ.ಯಶ್ ತಂದೆ ಅರುಣ್ KSRTC ಬಸ್ ಚಾಲಕನ ಕೆಲಸ ಮಾಡುತ್ತಿರುತ್ತಾರೆ ನಂತರ BMTC ಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಯಶ್ ತಮ್ಮ ಬಾಲ್ಯವನ್ನು ಮೈಸೂರಿನಲ್ಲಿ ಕಳೆಯುತ್ತಾರೆ ಹಾಗೂ ಮಹಾಜನ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಾರೆ.ಶಾಲೆಯಲ್ಲಿ ಓದುವಾಗಲೇ ಯಶ್ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದರು. ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾದರು ಕಪ್ ಗೆದ್ದು ತರುತ್ತಿದ್ದರು.SSLC ಆದಮೇಲೆ ಯಶ್ ರವರು ಕುಟುಂಬದ ಕಷ್ಟಕ್ಕೆ ಸ್ಪಂದಿಸಲು ಪ್ರಾವಿಸನ್ ಸ್ಟೋರ್ ನಲ್ಲಿ ಕೆಲಸವನ್ನು ಮಾಡ್ತಾರೆ. PUC ಓದುವಾಗ ಕುಟುಂಬದ ಸಮಸ್ಯೆಗಳನ್ನು ನೋಡಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ನಾನು ಏನಾದರೂ ಸಾಧಿಸಿಕೊಂಡು ಬರುತ್ತೇನೆ ಎಂದು ಮನೆಯವರಿಗೆ ತಿಳಿಸಿ ಬೆಂಗಳೂರಿಗೆ ಬರುತ್ತಾರೆ ನಟ ಯಶ್.Dboss – ನಟ ದರ್ಶನ್ ಡಿಬಾಸ್ ಆದ ಕಥೆ..!

ಬೆಂಗಳೂರಿನಲ್ಲಿ ಯಾರ ಪರಿಚಯನು ಇರದ ಯಶ್ ರವರು ಏನಾದರೂ ಮಾಡಿ ಕನ್ನಡ ಚಿತ್ರರಂಗಕ್ಕೆ ಹೋಗಬೇಕು ಎಂಬ ಆಸೆಯಿಂದ ಯಾವುದೋ ಒಂದು ಸಿನಿಮಾದ ಪ್ರೊಡಕ್ಷನ್ ನಲ್ಲಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿ ಕೆಲಸ ಮಾಡುವಾಗ ಕಾಫಿ, ಟೀ ಹಾಗೂ ಸಿಗರೇಟ್ ಅನ್ನೂ ಸಹ ತಂದು ಕೊಟ್ಟಿರುತ್ತಾರೆ.ಅನಂತರ ಆ ಸಿನಿಮಾದ ಶೂಟಿಂಗ್ ಅರ್ಥದಲ್ಲಿ ನಿಂತು ಹೋಗುತ್ತದೆ. ಆಗತಾನೆ ಬೆಂಗಳೂರಿಗೆ ಬಂದಿದ್ದ ಯಶ್ ಗೆ ಇಲ್ಲಿ ಯಾರ ಪರಿಚಯನು ಇರೋದಿಲ್ಲ. ಸಿನಿಮಾದ ಶೂಟಿಂಗ್ ಬೇರೆ ನಿಂತು ಹೋಗಿರುತ್ತದೆ. ನಾನು ಏನು ಮಾಡಲಿ ಎಂದು ಅಲೋಚನೆ ಮಾಡುತ್ತಿರುವಾಗ ಅವರು ಲಗೇಜ್ ಅನ್ನು ಇಡಲು ತಮ್ಮ ಸಂಬಂಧಿಕರಿಗೆ ಕಾಲ್ ಮಾಡ್ತಾರೆ. ಅವ್ರು ನಾನು ಮನೆಯಲ್ಲಿ ಇಲ್ಲ ಅಂತ ಹೇಳಿ ಕಾಲ್ ಕಟ್ ಮಾಡ್ತಾರೆ. ಅನಂತರ ಯಶ್ ಶೂಟಿಂಗ್ ಕೆಲಸ ಮಾಡುವಾಗ ಪರಿಚಯ ಆಗಿದ್ದ ಸ್ನೇಹಿತ ಮೋಹನ್ ರವರ ಮನೆಗೆ ಹೋಗುತ್ತಾರೆ.ಮೋಹನ್ ಮನೆಯಲ್ಲಿ ಲಗೇಜ್ ಅನ್ನು ಇಟ್ಟು ಅಲ್ಲಿಂದ ಹೊರ ಬರುತ್ತಾರೆ ನಂತರ ಇಡೀ ರಾತ್ರಿ ಮೆಜೆಸ್ಟಿಕ್ ನಲ್ಲಿ ಕಾಲ ಕಳೆಯುತ್ತಾರೆ.

ನಂತರ ಸ್ನೇಹಿತ ನಂಜುಂಡರ ಸಹಾಯದಿಂದ ಬೆನಕ ನಾಟಕ ಮಂಡಳಿಯನ್ನು ಸೇರುತ್ತಾರೆ. ಬೆನಕ ನಾಟಕ ಮಂಡಳಿಯಲ್ಲಿ ಯಾರಾದರೂ ಇಲ್ಲದಿದ್ದಾಗ ಇವರಿಗೆ ಅವಕಾಶ ಸಿಕ್ತ ಇತ್ತು ಸಿಕ್ಕ ಅವಕಾಶಗಳಲ್ಲಿ ನಟಿಸುತ್ತಾ ತಮ್ಮ ಪ್ರತಿಭೆಯನ್ನು ತೋರಿಸುತ್ತಾರೆ ಯಶ್.ಯಶ್ ರವರು ಮೊದಲಿಗೆ ಉತ್ತರಾಯಣ ಸೀರಿಯಲ್ ನಲ್ಲಿ ನಟಿಸುತ್ತಾರೆ ನಂತರ ನಂದಗೋಕುಲ ಸೀರಿಯಲ್ ನಲ್ಲಿ ರಾಧಿಕಾ ಪಂಡಿತ್ ಜೊತೆ ಅಭಿನಯಿಸುತ್ತಾರೆ.ನಂತರ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ನಾಯಕ ನಟನಾಗಿ ರಾಧಿಕಾ ಪಂಡಿತ್ ಜೊತೆ ಬೆಳ್ಳಿ ಪರದೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಒಳ್ಳೆಯ ಯಶಸ್ಸು ಕಾಣುತ್ತದೆ. ಅನಂತರ ಕಳ್ಳರ ಸಂತೆ, ಗೋಕುಲ, ಮೊದಲಸಲ, ರಾಜಧಾನಿ, ಕಿರಾತಕ ಸಿನಿಮಾಗಳನ್ನು ಮಾಡ್ತಾರೆ.

2013ರಲ್ಲಿ ಯಶ್ ಅಭಿನಯದ ಗೂಗ್ಲಿ ಸಿನಿಮಾ ಇವರನ್ನು ಸ್ಟಾರ್ ನಟರನ್ನಾಗಿ ಮಾಡಿಬಿಡುತ್ತದೆ.ಗೂಗ್ಲಿ ಸಿನಿಮಾ ಆ ವರ್ಷ ಅತಿ ಹೆಚ್ಚು ಬಾಕ್ಸ್ ಆಫೀಸ್ ಕೊಳ್ಳೆಹೊಡೆದ ಸಿನಿಮಾ, 2014 ರಲ್ಲಿ ಗಜಕೇಸರಿ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತದೆ ಇದಾದ ಬಳಿಕ ಮಿಸ್ಟರ್ & ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ಅಭಿನಯ ಮಾಡುತ್ತಾರೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ 50 ಕೋಟಿಗೂ ಅಧಿಕ ಗಳಿಕೆ ಮಾಡಿ ಬ್ಲಾಕ್ ಬಸ್ಟರ್ ಸಿನಿಮಾವಾಗುತ್ತದೆ.2018ರಲ್ಲಿ ರಿಲೀಸ್ ಆದ ಕೆಜಿಎಫ್ ಸಿನಿಮಾ ಇವರನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುತ್ತದೆ. ಪ್ರಶಾಂತ್ ನೀಲ್ ನಿರ್ದೇಶನದ KGF chapter 1 ಹಾಗೂ KGF chapter 2 ಸಿನಿಮಾಗಳು ಕನ್ನಡ ಮಾತ್ರವಲ್ಲದೆ ತೆಲುಗು,ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತವೆ. ಇನ್ನೂ ಈ ಸಿನಿಮಾಗಳು ಸಾವಿರ ಕೋಟಿ ಕಲೆಕ್ಷನ್ ಮಾಡಿವೆ ಇದರಿಂದ ಇಡೀ ಭಾರತ ಚಿತ್ರರಂಗ ಕನ್ನಡ ಚಿತ್ರರಂಗದ ಕಡೆ ಒಮ್ಮೆ ತಿರುಗಿ ನೋಡುವಂತೆ ಮಾಡಿವೆ. ಈ ಸಿನಿಮಾಗಳಿಂದ ರಾಕಿಂಗ್ ಸ್ಟಾರ್ ಆಗಿದ್ದ ಯಶ್ ರವರು ನ್ಯಾಷನಲ್ ಸ್ಟಾರ್ ಆಗ್ತಾರೆ.ಹಾಸ್ಯ ನಟ ಚಿಕ್ಕಣ್ಣ ಹೀರೊ ಆಗಿದ್ದು ಹೇಗೆ ಗೊತ್ತಾ?

2017ರಲ್ಲಿ ಯಶ್ ರವರು ಯಶೋಮಾರ್ಗ Foundationಅನ್ನು ಶುರು ಮಾಡುತ್ತಾರೆ. ಇದರ ಮೂಲಕ ಕಷ್ಟ ದಲ್ಲಿರುವ ಜನರಿಗೆ ಸಹಾಯ ಹಸ್ತವನ್ನು ನೀಡುತ್ತಿದ್ದಾರೆ.ಯಶ್ ಹುಟ್ಟುಹಬ್ಬಕ್ಕೆ ಇವರ ಅಭಿಮಾನಿಗಳು 500kg ಕೇಕ್ ಅನ್ನು ತಯಾರಿ ಮಾಡಿ, 216 ಅಡಿ ಕಟೌಟ್ ಅನ್ನು ನಿಲ್ಲಿಸಿ ಗಿನ್ನಿಸ್ ದಾಖಲೆ ಮಾಡಿದ್ದಾರೆ.ನಾನು ಸಂಪಾದಿಸಿರುವ ನಿಜವಾದ ಆಸ್ತಿ ನನ್ನ ಅಭಿಮಾನಿಗಳು ಎಂದು ಹೇಳುತ್ತಾರೆ ರಾಕಿಂಗ್ ಸ್ಟಾರ್ ಯಶ್.

You may also like...

Leave a Reply

Your email address will not be published. Required fields are marked *

You cannot copy content of this page