Yuva Movie : ಆನ್ಲೈನ್ ಬುಕಿಂಗ್ ಯಾವಾಗ ನೋಡಿ?
ಕನ್ನಡ ಚಿತ್ರರಂಗದ ಖ್ಯಾತ ನಟ ಡಾ. ರಾಜಕುಮಾರ್ ರವರ ಮೊಮ್ಮಗ ಅಂದರೆ ರಾಘವೇಂದ್ರ ರಾಜಕುಮಾರ್ ರವರ ಎರಡನೇ ಪುತ್ರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ವಿಧಿವಶರಾದ ನಂತರ ರಾಜ್ ಕುಟುಂಬ ಅಭಿಮಾನಿಗಳು ಬೇಸರದಲ್ಲಿದ್ದರು. ಇದೀಗ ಪವರ್ ಸ್ಟಾರ್ ಅಭಿಮಾನಿಗಳನ್ನ ರಂಜಿಸಲು ಯುವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ರವರ ನೆಚ್ಚಿನ ನಿರ್ದೇಶಕ ಸಂತೋಷ್ ಆನಂದ್ ರಾಮ್ ರವರು ಪುನೀತ್ ರವರಿಗೆ ಮಾಡಿದ್ದ ಚಿತ್ರಕಥೆಯನ್ನು ಯುವರಾಜ್ ಕುಮಾರ್ ರವರನ್ನು ನಾಯಕ ನಟನಾಗಿ ಇಟ್ಟುಕೊಂಡು ಯುವ ಸಿನಿಮಾವನ್ನು ಮಾಡಿದ್ದಾರೆ. ಈಗಾಗಲೇ ಪ್ರಚಾರದ ಹಂತದಲ್ಲಿರುವ ಯುವ ಚಿತ್ರತಂಡ ಫ್ಯಾನ್ಸ್ ಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ ಅದೇನೆಂದು ತಿಳಿದುಕೊಳ್ಳಲು ಕಂಪ್ಲೀಟ್ ಆಗಿ ಓದಿ.
ಸಾಮಾಜಿಕ ಜಾಲತಾಣದಲ್ಲಿ ಟ್ರೈಲರ್ ಮೂಲಕವೇ ಸಂಚಲನ ಮೂಡಿಸಿರುವ ಯುವ ಚಿತ್ರ ಇದೇ ತಿಂಗಳು ಅಂದರೆ ಮಾರ್ಚ್ 29 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಟ್ರೈಲರ್ ನೋಡಿದ ಅಭಿಮಾನಿಗಳು ಇದೊಂದು ಫ್ಯಾಮಿಲಿ ಕೂತು ನೋಡುವ ಸಿನಿಮಾವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲ ಬಾರಿಗೆ ಯುವ ರಾಜ್‌ಕುಮಾರ್ ರವರನ್ನು ಬೆಳ್ಳಿ ಪರದೆ ಮೇಲೆ ನೋಡಲು ಅಭಿಮಾನಿಗಳು ಸಹ ಕಾತುರರಾಗಿದ್ದಾರೆ. ಈಗಾಗಲೇ ಯುವ ಚಿತ್ರದ ಹಾಡುಗಳು ಕೂಡ ಬಿಡುಗಡೆಯಾಗಿದ್ದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಅನ್ನು ಪಡೆದುಕೊಂಡಿದೆ. ಇದೀಗ ಯುವ ಚಿತ್ರತಂಡದಿಂದ ಬಂದಿರುವ ಸಿಹಿ ಸುದ್ದಿ ಏನೆಂದರೆ ಮಾರ್ಚ್ 27ರಂದು ಬೆಳಿಗ್ಗೆ 9:00 ಗಂಟೆಯಿಂದ ಆನ್ಲೈನ್ ನಲ್ಲಿ ಯುವ ಚಿತ್ರದ ಟಿಕೆಟ್ ಬುಕಿಂಗ್ ಓಪನ್ ಆಗಲಿದೆ. ಹೀಗೆಂದು ಯುವ ಚಿತ್ರತಂಡ ಹಾಗೂ ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಘೋಷಣೆ ಮಾಡಿದೆ. ಸುದ್ದಿ ತಿಳಿದ ಪವರ್ ಸ್ಟಾರ್ ಹಾಗು ಯುವ ಫ್ಯಾನ್ಸ್ ಟಿಕೆಟ್ ಬುಕ್ಕಿಂಗಾಗಿ ಕಾಯುತ್ತಿದ್ದಾರೆ. ಇನ್ನೂ ಚಿತ್ರ ಬಿಡುಗಡೆಯಾದ ಬಳಿಕ ಯುವ ಸಿನಿಮಾ ಹೇಗಿದೆ ಯುವರಾಜ್ ಕುಮಾರ್ ರವರ ನಟನೆ ಫೈಟ್ ಹೇಗಿದೆ ಎಂದು ತಿಳಿಯಬೇಕಿದೆ. ಸಂತೋಷ್ ಆನಂದ್ ರಾಮ್ ರವರ ನಿರ್ದೇಶನದ ಸಿನಿಮಾ ಹಾಗಿರೋದ್ರಿಂದ ಸಿನಿಮಾ ಕೂಡ ಅದ್ಭುತವಾಗಿ ಮೂಡಿ ಬಂದಿರುತ್ತದೆ. ಹೀಗಾಗಿ ಸಂತೋಷ ಆನಂದ್ ರಾಮ್ ರವರು ಕೂಡ ಯುವರಾಜ್ ಕುಮಾರ್ ಕೈಯಲ್ಲಿ ಅದ್ಭುತವಾಗಿ ನಟನೆ ಮಾಡಿಸಿರುತ್ತಾರೆ. ಇಂದೇ ಸಂತೋಷ ಆನಂದ್ ರಾಮ್ ರವರು ಸಮಾಜಕ್ಕೆ ಸಂದೇಶ ಕೊಡುವ ಚಿತ್ರಗಳನ್ನು ಮಾಡಿದ್ದಾರೆ. ಅದೇ ರೀತಿ ಈ ಸಿನಿಮಾ ಕೂಡ ಫ್ಯಾಮಿಲಿಗೆ ಒಂದು ಒಳ್ಳೆ ಸಂದೇಶ ಕೊಡಲಿದೆ.
ಇತ್ತೀಚಿಗಷ್ಟೇ ಯುವ ಚಿತ್ರತಂಡ ಹೊಸಪೇಟೆಯಲ್ಲಿ ಅದ್ದೂರಿಯಾಗಿ ಯುವ ಚಿತ್ರದ ಫ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಇನ್ನು ಫ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಕೂಡ ಬಂದು ಯುವಗೆ ಸಪೋರ್ಟ್ ಮಾಡಿದ್ದಾರೆ. ಕಾರ್ಯಕ್ರಮ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ರವರನ್ನು ನೆನೆದು ಶ್ರೀ ರವರು ಸ್ವಲ್ಪ ಭಾವುಕರಾಗಿದ್ದರು. ರಾಘವೇಂದ್ರ ರಾಜಕುಮಾರ್ ಕೂಡ ಮಗನ ಮೊದಲನೇ ಸಿನಿಮಾ ಬಗ್ಗೆ ಮಾತಾಡಿ ಮಗನಿಗೆ ಶುಭ ಹಾರೈಸಿದ್ರು. ಇನ್ನು ಯುವ ಸಿನಿಮಾದಲ್ಲಿ ಯುವರಾಜ್ ಕುಮಾರ್ ರವರ ತಾಯಿಯ ಪಾತ್ರದಲ್ಲಿ ಜನಪ್ರಿಯ ನಟಿ ಸುಧಾರಾಣಿ ರವರು ಕಾಣಿಸಿಕೊಂಡಿದ್ದಾರೆ.
ನಟಿ ಸುಧಾರಾಣಿ ಬಗ್ಗೆ ಮಾತಾಡಿದ ರಾಘವೇಂದ್ರ ರಾಜ್ ಕುಮಾರ್ ಹಿಂಗಂದ್ರು ನಮ್ಮಪ್ಪನಿಗೆ ಒಂದು ಸಿನಿಮಾದಲ್ಲಿ ಮಗಳಾಗಿ, ಅಣ್ಣನಿಗೆ ಒಂದು ಸಿನಿಮಾದಲ್ಲಿ ಜೋಡಿಯಾಗಿ, ನನ್ನ ಮೊದಲನೇ ಮಗನ ಸಿನಿಮಾದಲ್ಲಿ ಟೀಚರ್ ಆಗಿ, ಈಗ ನನ್ನ ಎರಡನೇ ಮಗನಿಗೆ ತಾಯಿಯಾಗಿ ಯುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೂ ತುಂಬಾ ಧನ್ಯವಾದಗಳು ಎಂದು ರಾಘವೇಂದ್ರ ರಾಜಕುಮಾರ್ ತಿಳಿಸಿದರು. ಯುವ ಚಿತ್ರದಲ್ಲಿ ಯುವಗೆ ಜೋಡಿಯಾಗಿ ಕಾಂತಾರ ನಟಿ ಸಪ್ತಮಿ ಗೌಡ ರವರು ಕಾಣಿಸಿಕೊಂಡಿದ್ದಾರೆ. ಯುವ ಪೋಷಕರ ಪಾತ್ರದಲ್ಲಿ ನಟ ಅಚ್ಯುತ್ ಕುಮಾರ್ ಹಾಗೂ ನಟಿ ಸುಧಾರಾಣಿ ಅಭಿನಯಿಸಿದ್ದಾರೆ. ಇನ್ನೂ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾವ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್. ಯುವ ಸಿನಿಮಾ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಚಿತ್ರ ಮಾರ್ಚ್ 29 ರಿಂದ ರಾಜ್ಯದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.