ಯುವ ಸಿನಿಮಾದ ಮೊದಲ ಸಾಂಗ್ ಲಾಂಚ್
ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಯುವರಾಜ್ ಕುಮಾರ್ ಅಭಿನಯದ ಯುವ ಸಿನಿಮಾದ ಮೊದಲ ಸಾಂಗ್ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಸಾಂಗ್ ಲಾಂಚ್ ಕಾರ್ಯಕ್ರಮಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಯುವರಾಜ್ ಕುಮಾರ್ ಹಾಗೂ ಅಣ್ಣಾವ್ರ ರಾಜ್ ಕುಟುಂಬ ಅಭಿಮಾನಿಗಳು ಯುವ ಸಿನಿಮಾಗಾಗಿ ಕಾಯುತ್ತಿದ್ದಾರೆ. ಕಳೆದ ವರ್ಷದಿಂದ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಯುವರಾಜ್ ಕುಮಾರ್ರವರ ಯುವ ಸಿನೆಮಾದ ಮೊದಲ ಸಾಂಗ್ ಅನ್ನೂ ಚಾಮರಾಜನಗರದಲ್ಲಿ ಬಿಡುಗಡೆ ಮಾಡಲಿದೆ ಚಿತ್ರತಂಡ. ಈಗಾಗಲೇ ದಿನಾಂಕ ಕೂಡ ನಿಗದಿಯಾಗಿದ್ದು ಮಾರ್ಚ್ ಎರಡರಂದು ಸಂಜೆ 7:16ಕ್ಕೆ ಒಬ್ಬನೇ ಶಿವ ಒಬ್ಬನೇ ಯುವ ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.
ಯುವ ಸಿನಿಮಾವನ್ನು ಸಂತೋಷ್ ಆನಂದ್ ರಾಮ್ ರವರು ನಿರ್ದೇಶನ ಮಾಡುತ್ತಿದ್ದಾರೆ. ಇಂದೇ ಸಂತೋಷ ಆನಂದರಾಮರವರು ಪುನೀತ್ ರಾಜಕುಮಾರ್ ರವರ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಹಾಗೂ ರಾಕಿಂಗ್ ಸ್ಟಾರ್ ಯಶ್ ರವರ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾ ವನ್ನು ನಿರ್ದೇಶನ ಮಾಡುವ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಸಂತೋಷ್ ಆನಂದ್ ರಾಮ್ ರವರ ಡೈರೆಕ್ಷನ್ ತುಂಬಾ ವಿಭಿನ್ನವಾಗಿದ್ದು ಸಿನಿಮಾಗಳು ಕೂಡ ಬಹಳ ವಿಭಿನ್ನವಾಗಿ ಪ್ರೇಕ್ಷಕರನ್ನು ಮನರಂಜನೆ ನೀಡುತ್ತವೆ.
ಯುವ ಸಿನಿಮಾದಲ್ಲಿ ಯುವರಾಜ್‌ಕುಮಾರ್ ರವರು ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಮುಂಚೆ ಯುವರಾಜ್ ಕುಮಾರ್ ರವರು ಯುವ ಸಿನಿಮಾಗಾಗಿ ತುಂಬಾ ತಯಾರಿ ಮಾಡಿಕೊಂಡಿದ್ದರು. ಯುವ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಅನೇಕ ಕಲಾವಿದರು ನಟಿಸಿದ್ದಾರೆ. ಇನ್ನು ಯುವ ಸಿನಿಮಾದಲ್ಲಿ ಯಾರೆಲ್ಲ ಕಲಾವಿದರು ನಟಿಸಿದ್ದಾರೆ ಎಂಬುದು ಟ್ರೈಲರ್ ಬಿಡುಗಡೆ ಆದಾಗ ತಿಳಿಯಲಿದೆ. ಪುನೀತ್ ರಾಜಕುಮಾರ್ ಹಾಗೂ ರಾಜ್ ಕುಟುಂಬದ ಅಭಿಮಾನಿಗಳು ಯುವ ಸಿನಿಮಾದ ಮೊದಲ ಸಾಂಗ್ ಗಾಗಿ ತುಂಬಾ ಕಾಯುತ್ತಿದ್ದಾರೆ.
ಯುವ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ರಾಜ್ ಕುಟುಂಬದ ಎಲ್ಲಾ ಕಲಾವಿದರು ಹಾಗೂ ಸ್ಯಾಂಡಲ್ವುಡ್ನ ಕೆಲವು ನಟ ನಟಿಯರು ಭಾಗಿಯಾಗಲಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಭಾಗಿಯಾಗಲಿದ್ದಾರೆ. ಈಗಾಗಲೇ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಸಾಂಗ್ ನ ಸಣ್ಣ ಪ್ರೊಮೋ ಕೂಡ ಬಿಡುಗಡೆಯಾಗಿದೆ.
ಯುವ ಸಿನಿಮಾವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ.ಈ ಹಿಂದೆ ಯುವ ಸಿನಿಮಾವನ್ನು ಪುನೀತ್ ರಾಜಕುಮಾರ್ ರವರಿಗೆ ಮಾಡಿದ್ದರು. ಪುನೀತ್ ರಾಜಕುಮಾರ್ ಅವರು ವಿಧಿವಶರಾದ ನಂತರ ಯುವ ಸಿನಿಮಾವನ್ನು ಯುವರಾಜ್‍ಕುಮಾರ್ ರವರ ಮೂಲಕ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಯುವ ಸಿನಿಮಾ ಕೂಡ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಕೆಜಿಎಫ್, ಕಾಂತಾರ, ಸಲಾರ್ ನಂತರ ಹೊಂಬಾಳೆ ಫಿಲಂ ಯುವ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಯುವ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದ್ದು ಮಾರ್ಚ್ 15ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದೆ. ಯುವರಾಜ್ ಕುಮಾರ್ ಕೂಡ ಮೊದಲ ಬಾರಿಗೆ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.